ಮುಂಬೈ: ಕಟ್ಟಡದ 6ನೇ ಮಹಡಿಯಿಂದ ಕಿಟಕಿ ಮೂಲಕ ಪರಾರಿಯಾಗಲು ಯತ್ನಿಸಿದ ಹುಡುಗಿಯೊಬ್ಬಳು ಬಿದ್ದು ಗಂಭೀರ ಗಾಯಗೊಂಡ ಘಟನೆ ಮುಂಬೈ ನಡೆದಿದೆ.
Advertisement
ಈ ಘಟನೆ ಮಂಗಳವಾರ ಬೆಳಗ್ಗೆ ಮುಂಬೈನ ವೆರ್ ಸೋವಾ ಎಂಬಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೋಷಕರಿಗೆ ಹೆದರಿಕೊಂಡು ಹುಡುಗಿ ಎಸ್ಕೇಪ್ ಆಗಲು ಯತ್ನಿಸಿ ಇದೀಗ ಗಂಭೀರ ಸ್ಥಿತಿಯಲ್ಲಿದ್ದಾಳೆ. ಇದನ್ನೂ ಓದಿ: ಪಾಕ್‍ನ 20 ಯೂಟ್ಯೂಬ್ ಚಾನೆಲ್, 2 ವೆಬ್‍ಸೈಟ್‍ಗಳಿಗೆ ನಿರ್ಬಂಧ
Advertisement
Advertisement
ತನ್ನ ಗೆಳೆಯನ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಪೋಷಕರಿಗೆ ಹುಡುಗಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ. ಇದರಿಂದ ಭಯಗೊಂಡ ಆಕೆ, ಹೇಗಾದರೂ ಮಾಡಿ ಮನೆಯಿಂದ ಪರಾರಿಯಾಗುವ ಯೋಚನೆ ಮಾಡುತ್ತಾಳೆ. ಅಂತೆಯೇ ಮಹಡಿಯ ಕಿಟಕಿಯಿಂದ ಸೀರೆಗಳನ್ನು ಒಂದಕ್ಕೊಂದು ಕಟ್ಟಿ ಇಳಿಬಿಡುತ್ತಾಳೆ. ನಂತರ ಇಳಿಯಲು ಯತ್ನಿಸಿದಾಗ ಆಯತಪ್ಪಿ ಆಕೆ ಕೆಳಕ್ಕೆ ಬಿದ್ದಿದ್ದಾಳೆ. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರಿಂದ ಆತ್ಮಹತ್ಯೆ ಯತ್ನ – 10 ವರ್ಷದ ಬಾಲಕಿ ಪಾರು
Advertisement
ಕೂಡಲೇ ಸ್ಥಳೀಯರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹುಡುಗಿಯ ಬೆನ್ನುಮೂಳೆಗೆ ಗಂಭೀರ ಪೆಟ್ಟಾಗಿದೆ ಎಂದು ವೈದ್ಯರು ತಿಳಿಸಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಹುಡುಗಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ ಎಂಬುದಾಗಿ ವರದಿಯಾಗಿದೆ.