ಬೆಂಗಳೂರು: ಮನೆ ಮುಂದಿನ ರಸ್ತೆಯಲ್ಲಿ ಆಟವಾಡುತ್ತಿದ್ದ 14 ವರ್ಷದ ಬಾಲಕನಿಗೆ ಬಿಬಿಎಂಪಿ ವಾಟರ್ ಟ್ಯಾಂಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಬೆಂಗಳೂರಿನ ಅಂದ್ರಾಳ್ಳಿಯ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ರಮೇಶ ಮತ್ತು ಜಯಮ್ಮ ದಂಪತಿಯ 14 ಮಗ ವರ್ಷದ ತರುಣ್ ಎಂಬಾತನೇ ಮೃತ ಪಟ್ಟ ದುರ್ದೈವಿ.
Advertisement
Advertisement
ಸ್ಥಳೀಯ ಕಾರ್ಪೊರೇಟರ್ ಟ್ರ್ಯಾಕ್ಟರ್ ಮೂಲಕ ವಾರ್ಡ್ ಜನರಿಗೆ ನೀರು ಸರಬರಾಜು ಮಾಡುತ್ತಿದ್ದರು. ಇದೇ ಟ್ಯ್ರಾಕ್ಟರ್‍ಗೆ ಬಾಲಕ ಬಲಿಯಾಗಿದ್ದಾನೆ. ವಾರ್ಡ್ ನಂಬರ್ 72 ನ ಹೇರೋ ಹಳ್ಳಿ ಕಾರ್ಪೊರೇಟರ್ ರಾಜಣ್ಣ ಉಚಿತವಾಗಿ ವಾರ್ಡ್ ಜನರಿಗೆ ಅಂತ ಒಂದು ಟ್ರಾಕ್ಟರ್ ನಲ್ಲಿ ನೀರಿನ ಸೌಲಭ್ಯ ಒದಗಿಸುತ್ತಿದ್ದರು.
Advertisement
ಪ್ರಕರಣದ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು, ಪೊಲೀಸರು ಟ್ರಾಕ್ಟರ್ ಅನ್ನು ಸಿಜ್ ಮಾಡಿ, ಚಾಲಕ ರವಿ ಎಂಬಾತನನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಮೃತ ಬಾಲಕನ ಪೋಷಕರು ತಮ್ಮ ಮಗನ ಸಾವಿಗೆ ಯಾವುದೇ ನ್ಯಾಯ ಸಿಕ್ಕಿಲ್ಲ. ಅಪಘಾತ ಮಾಡಿದ ಚಾಲಕನನ್ನು ಬಂಧಿಸಿ ತಕ್ಷಣ ಬಿಡುಗಡೆ ಮಾಡಲಾಗಿದೆ. ಅಂದ್ರಾಳ್ಳಿಯ ಕಾರ್ಪೊರೇಟರ್ ವಾಸುದೇವ ಮತ್ತು ಹೇರೋಹಳ್ಳಿಯ ಬಿಬಿಎಂಪಿ ಸದಸ್ಯ ರಾಜಣ್ಣ ಬಳಿ ಹೋಗಿ ನಮಗೆ ನ್ಯಾಯ ಕೊಡಿಸಿ ಅಂತ ಕೇಳಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.
Advertisement
ಅಲ್ಲದೇ ರಮೇಶ್ ಬಾಡಿಗೆಗೆ ಇದ್ದ ಮನೆಯ ಮಾಲೀಕ ಮೂಡಲಯ್ಯ ಮನೆಗೆ ಅಂತ ಹಾಕಿಸಿದ್ದ ಬೋರ್ವೆಲ್ ನಿಂದ ಹಣದ ಆಸೆಗೆ ಆಕ್ರಮವಾಗಿ ಟ್ಯಾಂಕರ್ ಗಳಿಗೆ ನೀರು ತುಂಬಿಸುತ್ತಿದ್ದ ಎಂಬ ಮೃತ ಬಾಲಕನ ಪೋಷಕರು ಆರೋಪಿಸಿದ್ದಾರೆ.