ಬೀಜಿಂಗ್: ಚೀನಾದ ಸೆಂಟ್ರಲ್ ಹುಬೇ ಪ್ರಾಂತ್ಯದಲ್ಲಿ 140 ಅಡಿ ಎತ್ತರದ ಪಗೋಡಾ(ಬೌದ್ಧ ದೇವಾಲಯ)ದ ಮೇಲೆ 100 ವರ್ಷಗಳಷ್ಟು ಹಳೆಯದಾದ ಮರವಿದೆ.
Advertisement
ಪೀಪಲ್ಸ್ ಡೇಲಿ ಚೈನಾದ ವರದಿಯ ಪ್ರಕಾರ ಹುವಾನ್ಗಾಂಗ್ನಲ್ಲಿರುವ ಈ ಪಗೋಡಾವನ್ನ 1574ರಲ್ಲಿ ಮಿಂಗ್ ರಾಜವಂಶದವರು ಕಟ್ಟಿದ್ದು, ಈ ಕಟ್ಟಡದ ಮೇಲೆ ಸುಮಾರು 10 ಅಡಿ ಉದ್ದದ ಮರ ಕಳೆದ 100 ವರ್ಷಗಳಿಂದ ಬೆಳೆಯುತ್ತಿದೆ.
Advertisement
Advertisement
ಈಗ ಆ ಮರವನ್ನ ಕೆಡವಲು ಹೋದ್ರೆ ಕಟ್ಟಡಕ್ಕೆ ಹಾನಿಯಾಗಬಹುದು. ಹೀಗಾಗಿ ಮರಕ್ಕೆ ನೀರು ಹಾಕಲು ಸ್ಥಳೀಯ ಅಗ್ನಿಶಾಮಕ ವಾಹನವೊಂದನ್ನ ನಿಯೋಜಿಸಲಾಗಿದೆ. ಅಗ್ನಿಶಾಮಕ ವಾಹನದ ಸಹಾಯದಿಂದ ಮರಕ್ಕೆ ನೀರು ಹಾಕಲಾಗುತ್ತಿರುವ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ.