ಭೋಪಾಲ್: ಟ್ರಾಕ್ಟರ್ ಚಾಲಕ ನಿದ್ರೆಗೆ ಜಾರಿದ ಪರಿಣಾಮ ಟ್ರಾಲಿ ಉರುಳಿ ಬಿದ್ದು ಮದುವೆಯಾಗ ಬೇಕಿದ್ದ ವರ ಸೇರಿದಂತೆ 6 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮದುವೆ ಸಮಾರಂಭಕ್ಕಾಗಿ ಜನರನ್ನು ಕರೆದುಕೊಂಡು ಹೋಗುತ್ತಿದ್ದ ಟ್ರಾಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿದೆ. ಈ ಕಾರಣದಿಂದ ವರ ಸಾವನ್ನಪ್ಪಿದ್ದಾನೆ. ಇನ್ನೂ ಅನೇಕ ಜನರು ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಹಲವರಿಗೆ ಗಂಭಿರಗಾಯಗಳಾಗಿವೆ.
Advertisement
Advertisement
ಈ ಅಪಘಾತದಲ್ಲಿ ಗಾಯಾಗೊಂಡಿರುವವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಂಡ್ವಾ ಜಿಲ್ಲಾ ಕೇಂದ್ರದಿಂದ 70 ಕಿ.ಮೀ ದೂರದಲ್ಲಿರುವ ಖಲ್ವಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ.
Advertisement
ಈ ಟ್ರ್ಯಾಕ್ಟರ್ ಮೇಲೆ ಕೂತಿದ್ದ ವರ ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ 25 ಜನರು ಈ ಅವಘಡದಲ್ಲಿ ಗಾಯಗೊಂಡು ಗಂಭಿರ ಸ್ಥಿತಿಯಲ್ಲಿದ್ದಾರೆ. ಈ ಘಟನೆ ಖಲ್ವಾ ಗರ್ಬೆಡಿ ಗ್ರಾಮದಿಂದ ಮೆಹಲು ಗ್ರಾಮಕ್ಕೆ ಮದುವೆ ಪಾರ್ಟಿಗಾಗಿ ಹೋಗುತ್ತಿರುವಾಗ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಪರಿಹಾರ್ ಹೇಳಿದ್ದಾರೆ.
Advertisement
ಚಾಲಕ ನಿದ್ರೆಗೆ ಜಾರಿದ್ದಾನೆ. ಆಗ ವಾಹನದ ಚಕ್ರಗಳ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ಈ ಪರಿಣಾಮವಾಗಿ ಟ್ರ್ಯಾಕ್ಟರ್-ಟ್ರಾಲಿ ರಸ್ತೆ ಬದಿಯ ಹಳ್ಳವನ್ನು ತಪ್ಪಿಸಲು ಆಗದೇ ವಾಹನ ಉರುಳಿದೆ. ಈ ವೇಳೆ ಅನೇಕ ಜನರು ಟ್ರಾಲಿಯ ಕೆಳಗೆ ಸಿಕ್ಕಿಬಿದ್ದರು. ದಾರಿಹೋಕರು ತಕ್ಷಣ ಬಂದು ಇವರಿಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದರು.
ಗಾಯಗೊಂಡಿರುವ ಎಲ್ಲರನ್ನು ಖಾಂಡ್ವಾದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ದುಲ್ಹಾ ಕುನ್ವರ್ ಸಿಂಗ್, ಭಗವತಿ ಬಾಯಿ, ಸರ್ಜು ಬಾಯಿ, ಬುದ್ಧಿಯಾ ಬಾಯಿ, ತುಲ್ಸಾ ಬಾಯಿ ಮತ್ತು ಗೋಪಿ ಬಾಯಿ ಎಂದು ಗುರುತಿಸಲಾಗಿದೆ. ಇವರೆಲ್ಲರು ಅವರೆಲ್ಲರೂ ಬುಡಕಟ್ಟು ಜನಾಂಗದವರಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.