ಬಿಗ್ ಬಾಸ್ ಮನೆಯ (Bigg Boss House) ಆಟ 10 ವಾರಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಸ್ಪರ್ಧಿ ದಿವ್ಯಾ ಉರುಡುಗ (Divya Uruduga) ಕೂಡ ಈ ಹಿಂದಿನ ಸೀಸನ್‌ನಲ್ಲಿ ಕೂಡ ಗುರುತಿಸಿಕೊಂಡಿದ್ದರು. ಇದೀಗ ಬಿಗ್ ಬಾಸ್ ಸೀಸನ್ 9ರಲ್ಲೂ ಖಡಕ್ ಸ್ಪರ್ಧಿಯಾಗಿ ಪೈಪೋಟಿ ನೀಡುತ್ತಿದ್ದಾರೆ. ಹೀಗಿರುವಾಗ ಭಾವಿ ಪತ್ನಿ ದಿವ್ಯಾ ಉರುಡುಗ ಅವರಿಗೆ ಅರವಿಂದ್ ಕೆ.ಪಿ(Aravind Kp) ಪ್ರೀತಿಯ ಸಂದೇಶವನ್ನ ಕೊಟ್ಟಿದ್ದಾರೆ.
ಸೀರಿಯಲ್, ಸಿನಿಮಾ, ಟಿವಿ ಶೋ ಬಿಗ್ ಬಾಸ್ ಎಲ್ಲದರಲ್ಲೂ ಸೈ ಎನಿಸಿಕೊಂಡವರು ನಟಿ ದಿವ್ಯಾ ಉರುಡುಗ ಬಿಗ್ ಬಾಸ್ ಸೀಸನ್ 9ರಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಪ್ರವಿಣರ ಸಾಲಿನಲ್ಲಿ ಪೈಪೋಟಿ ನೀಡುತ್ತಿದ್ದಾರೆ. ಇದರ ಮಧ್ಯೆ ದಿವ್ಯಾಗೆ ಬಿಗ್ ಬಾಸ್ ಆಟ ಬಿಟ್ಟು ಕೊಡಬೇಡ ಆಡು ಅಂತಾ ಸೋಷಿಯಲ್ ಮೀಡಿಯಾದಲ್ಲಿ ಅರವಿಂದ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಉದ್ಯಮಿ ಸೋಹೈಲ್ ಕೈಹಿಡಿದ `ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ
View this post on Instagram
ʻಮರಿಹುಳುನ ಕೈಬಿಟ್ಟರೆ, ಅದು ಎಂದಿಗೂ ಸುಂದರವಾದ ಚಿಟ್ಟೆಯಾಗುವುದಿಲ್ಲ ನೆವರ್ ಗಿವ್ ಅಪ್ʼ ಎಂದು ಅರವಿಂದ್, ದಿವ್ಯಾ ಉರುಡುಗಗೆ ಬೆಂಬಲ ನೀಡಿದ್ದಾರೆ. ಈಗಾಗಲೇ 10 ವಾರಗಳನ್ನ ದೊಡ್ಮನೆಯಲ್ಲಿ ಪೂರೈಸಿರುವ ದಿವ್ಯಾ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ. ದಿವ್ಯಾ ಉರುಡುಗ ಗೆದ್ದು ಬರಲಿ ಎಂಬುದೇ ಅರವಿಂದ್ ಮತ್ತು ಅಭಿಮಾನಿಗಳ ಆಶಯ.
ಇತ್ತೀಚೆಗೆ ಅರವಿಂದ್, ದಿವ್ಯಾ ಜೊತೆಗಿನ ಲವ್ ಲೈಫ್ ಬಗ್ಗೆ ರಿವೀಲ್ ಮಾಡಿದ್ದರು. ಇಬ್ಬರು ಎಂಗೇಜ್ ಆಗಿದ್ದು, ಸದ್ಯದಲ್ಲೇ ಹಸೆಮಣೆ ಏರೋದಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬಿಗ್ ಬಾಸ್ ಸೀಸನ್ 8ರ ಇಬ್ಬರ ಪರಿಚಯ, ಪ್ರೀತಿಗೆ ತಿರುಗಿದೆ. ಬಿಗ್ ಬಾಸ್ ಶೋ ಬಳಿಕ ಹಸೆಮಣೆ ಏರಲಿದ್ದಾರೆ.