ಬೆಂಗಳೂರಿನಲ್ಲಿ ಧರ್ಮ ದಂಗಲ್ – ಹಿಂದೂ ಸಂಘಟನೆಯ 25ಕ್ಕೂ ಹೆಚ್ಚು ಕಾರ್ಯಕರ್ತರು ವಶಕ್ಕೆ

Public TV
2 Min Read
PUNEETH KERHALLI

ಬೆಂಗಳೂರು: ಸುಬ್ರಹ್ಮಣ್ಯ ದೇವಸ್ಥಾನದ (Subramanya Swamy Temple) ಬ್ರಹ್ಮ ರಥೋತ್ಸವದಲ್ಲಿ ಹಿಂದೂಯೇತರ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಹಿಂದೂ ಸಂಘಟನೆ (Hindu organization) ಮುಂದಾಗಿದ್ದ ಬೆನ್ನಲ್ಲೇ ಇದೀಗ ಪೊಲೀಸರು (Police) 25ಕ್ಕೂ ಹೆಚ್ಚು ಹಿಂದೂ ಸಂಘಟನೆಯ ಮುಖಂಡರನ್ನು ರಾತ್ರೋರಾತ್ರಿ ವಶಕ್ಕೆ ಪಡೆದಿದ್ದಾರೆ.

SUBRAMANYA SWAMY TEMPLE 1

ಇಂದು ಷಷ್ಠಿ ಸಂಭ್ರಮದ ನಡುವೆ ಬೆಂಗಳೂರಿನ ಸುಬ್ರಹ್ಮಣ್ಯ ದೇವಾಸ್ಥಾನದಲ್ಲಿ ವ್ಯಾಪಾರ ಕರಿನೆರಳು ಆವರಿಸಿದೆ. ಮುಸ್ಲಿಂ ವ್ಯಾಪಾರಿಗಳಿಗೆ ಜಾತ್ರೆಯಲ್ಲಿ ಅವಕಾಶ ನೀಡಬಾರದೆಂಬ ವಿಚಾರವಾಗಿ ಸಿಡಿದೆದ್ದಿದ್ದ ಹಿಂದೂ ಮುಖಂಡರನ್ನೇ ವಶಕ್ಕೆ ಪಡೆಯಲಾಗಿದೆ. ಹಿಂದೂ ದೇವಾಲಯದ ಆವರಣದಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶ ನೀಡಬಾರದೆಂಬ ಹಿಂದೂ ಸಂಘಟನೆಗಳ ಒತ್ತಾಯಕ್ಕೆ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳದ ಹಿನ್ನೆಲೆ ಹಿಂದೂ ಕಾರ್ಯಕರ್ತರೇ ಅಖಾಡಕ್ಕಿಳಿಯಲು ತಯಾರಿ ನಡೆಸಿದ್ದರು. ಖುದ್ದು ತಾವೇ ಜಾತ್ರೆ ವೇಳೆ ವ್ಯಾಪಾರಿಗಳ ಬಳಿ ನಿಂತು ಹಿಂದೂ ವ್ಯಾಪಾರಿಗಳ ಬಳಿಯೇ ವ್ಯಾಪಾರ ಮಾಡುವಂತೆ ಎಚ್ಚರಿಸುವ ಪ್ಲ್ಯಾನ್ ಮಾಡಿದ್ದರು. ಇದನ್ನು ಮನಗಂಡು ದೇವಸ್ಥಾನದ ಬಳಿ ಕ್ಯಾಂಪೇನ್‍ಗೆ ಮುಂದಾಗಿದ್ದ ಹಿಂದೂ ಸಂಘಟನೆಗಳಿಗೆ ಮಧ್ಯರಾತ್ರಿ ಪೋಲಿಸರು ಶಾಕ್ ನೀಡಿದ್ದಾರೆ. ತಡ ರಾತ್ರಿ 1 ಗಂಟೆಗೆ ಹಿಂದೂ ಸಂಘಟನೆಯ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಉತ್ತರ ಭಾರತದಾದ್ಯಂತ 20 ಕಡೆ NIA ದಾಳಿ

SUBRAMANYA SWAMY TEMPLE

ಹಿಂದೂಗಳಿಗೆ ಮಾತ್ರ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಅವಕಾಶ ಅವಕಾಶ ನೀಡಬೇಕೆಂದು ಭಜರಂಗದಳದ ಮುಖಂಡ ತೇಜಸ್ ಗೌಡ ದಕ್ಷಿಣ ವಿಭಾಗದ ಡಿಸಿಪಿಯವರಿಗೆ ಮನವಿ ಮಾಡಿದ್ದರು. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ತೇಜಸ್ ಗೌಡನನ್ನು ಕನಕಪುರ ವ್ಯಾಪ್ತಿಯಲ್ಲಿ ಪೊಲೀಸ್ ವಶಕ್ಕೆ ಪಡೆದಿದ್ದಾರೆ. ತಡರಾತ್ರಿ ಪುನೀತ್ ಕೆರೆಹಳ್ಳಿ ಸೇರಿದಂತೆ 25ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಗಲಭೆ ನಡೆಯಬಾರದೆಂದು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಹನಿಟ್ರ್ಯಾಪ್ ಚಕ್ರವ್ಯೂಹ- ಸಂಸಾರ, ಕೆಲಸ, ಎಲ್ಲವೂ ಕಳೆದುಕೊಂಡ ಟೆಕ್ಕಿ!

ಈಗಾಗಲೇ ಹನುಮಂತನಗರ, ಬಸವನಗುಡಿ, ಕನಕಪುರ ಪೊಲೀಸರು ಕೆಲ ಹಿಂದೂ ಮುಖಂಡರನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಇರಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ ಬಿಜೆಪಿ ಸರ್ಕಾರದ ವಿರುದ್ಧ ಹಿಂದೂ ಸಂಘಟನೆ ಮುಗಿಬಿದ್ದಿದ್ದು, ಸ್ಥಳೀಯ ಶಾಸಕರ ಮತ್ತು ಬಿಜೆಪಿ ಸರ್ಕಾರ ತಡರಾತ್ರಿ ಹಿಂದೂ ಕಾರ್ಯಕರ್ತರನ್ನು ವಶಕ್ಕೆ ಪಡೆಯಲು ಪೊಲೀಸರಿಗೆ ತಿಳಿಸುವಷ್ಟು ನೀಚ ಕೆಲಸಕ್ಕೆ ಕೈ ಹಾಕಬಾರದಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *