ಪಾಟ್ನಾ: ಚಾಕೊಲೇಟ್ ಕೊಡಿಸುವ ನೆಪದಲ್ಲಿ 5 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ ಅನ್ನೋ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ಕೇವಲ 5 ಬಸ್ಕಿ ಶಿಕ್ಷೆ ವಿಧಿಸಿರುವ ಘಟನೆ ಬಿಹಾರದ (Bihar) ನವಾಡ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
6 साल की मासूम बच्ची से रेप करने वाले आरोपी शख़्स से बस 5 बार उठक-बैठक करवा कर मामला रफा दफा किया गया.
पंचायत का यह अनोखा फैसला हैरान कर देने वाला है.
आरोपी शख्स अरुण पंडित बताया जा रहा है, जो बिहार के नवादा का है. #rape
वीडियो क्रेडिट- @NBTBihar pic.twitter.com/1x51vKkMtu
— Vividha (@VividhaOfficial) November 24, 2022
ಗ್ರಾಮಸ್ಥರ ಎದುರು ಎದುರು ಆ ವ್ಯಕ್ತಿ, ತನ್ನ ಎರಡೂ ಕಿವಿ ಹಿಡಿದುಕೊಂಡು ಐದು ಸಲ ಎದ್ದು ಬಸ್ಕಿ ಹೊಡೆದ ವೀಡಿಯೋ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ. ಇನ್ನು ಬಸ್ಕಿ ಹೊಡೆಯುತ್ತಿದ್ದ ವ್ಯಕ್ತಿಗೆ ಅಲ್ಲಿದ್ದ ಮಹಿಳೆಯರೆಲ್ಲ ನಿಂದಿಸುತ್ತಿರುವುದು ವೀಡಿಯೊದಲ್ಲಿ ಕೇಳಿಸುತ್ತದೆ. ಪ್ರಕರಣ ಇದೀಗ ಪೊಲೀಸ್ ಠಾಣೆ (Bihar Police Station) ಮೆಟ್ಟಿಲೇರಿದೆ. ಇದನ್ನೂ ಓದಿ: ಮರಾಠಿ ಸಾಂಗ್ ಹಾಕಲ್ಲ – ಹೋಟೆಲ್ ಮ್ಯಾನೇಜರ್ ಮೇಲೆ MNS ಕಾರ್ಯಕರ್ತರಿಂದ ಹಲ್ಲೆ
ಈ ವ್ಯಕ್ತಿ ಐದು ವರ್ಷದ ಬಾಲಕಿಯನ್ನು ಏಕಾಂತಕ್ಕೆ ಕರೆದುಕೊಂಡು ಹೋಗಿ, ತನ್ನ ತೊಡೆಯ ಮೇಲೆ ಕೂರಿಸಿಕೊಂಡು, ಅವಳನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಬಳಿಕ ಆಕೆಯ ಪೋಷಕರು ಪಂಚಾಯಿತಿಗೆ ದೂರು ಕೊಟ್ಟಿದ್ದರು. ಪೊಲೀಸರಿಗೆ ದೂರು ಕೊಟ್ಟರೆ ಎಫ್‌ಐಆರ್ (FIR) ದಾಖಲಾಗುತ್ತದೆ. ವಿಷಯ ದೊಡ್ಡದಾಗಿ ಮನೆ ಮರ್ಯಾದಿ ಹಾಳಾಗುತ್ತದೆ ಎಂಬ ಕಾರಣಕ್ಕೆ ಪಂಚಾಯಿತಿಗೆ ಹೋಗಿದ್ದಾರೆ. ಅಷ್ಟೇ ಅಲ್ಲ, ಆರೋಪಿಯ ಕುಟುಂಬದವರನ್ನು ಸಂಪರ್ಕಿಸಿ, ಅವರಿಗೂ ವಿಷಯ ತಿಳಿಸಿದ್ದಾರೆ. ಬಳಿಕ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಪಂಚಾಯಿತಿ ಮುಖಂಡರು ವಿಚಾರಣೆ ನಡೆಸಿದ್ದಾರೆ. ಕೊನೆಯಲ್ಲಿ ಆರೋಪಿ ಹುಡುಗಿ ಮೇಲೆ ಅತ್ಯಾಚಾರ ಮಾಡಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಹಾಗೆ ಆಕೆಯನ್ನು ಪೌಲ್ಟ್ರಿ ಫಾರ್ಮ್‌ಗೆ ಕರೆದುಕೊಂಡು ಹೋಗಿದ್ದು ತಪ್ಪು ಎಂಬ ಕಾರಣಕ್ಕೆ ಬಸ್ಕಿ ಶಿಕ್ಷೆ ನೀಡಿದ್ದಾರೆ ಎಂದು ನಾವಡಾ ಎಸ್‌ಪಿ ಡಾ. ಗೌರವ್ ಮಂಗಲ್ ತಿಳಿಸಿದ್ದಾರೆ.
ಬಳಿಕ ಪಂಚಾಯಿತಿಯಲ್ಲಿದ್ದ ಸದಸ್ಯರೊಬ್ಬರು ಈ ವಿಷಯವನ್ನು ಪೊಲೀಸ್ ಗಮನಕ್ಕೆ ತಂದಿದ್ದಾರೆ. ಅದಾದ ಬಳಿಕ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯ ಕೇಸ್ ದಾಖಲಿಸಿಕೊಂಡು ತನಿಖೆಯನ್ನೂ ಪ್ರಾರಂಭ ಮಾಡಿದ್ದಾರೆ. ಬಾಲಕಿಗೆ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವುದಾಗಿಯೂ ಪೊಲೀಸ್ ತಿಳಿಸಿದ್ದಾರೆ. ಇದನ್ನೂ ಓದಿ: 13 ವರ್ಷದ ನಾಯಿ ನಾಪತ್ತೆ – ಹುಡುಕಿ ಕೊಟ್ಟವರಿಗೆ 25,000ರೂ. ಬಂಪರ್ ಬಹುಮಾನ
ಈ ವೀಡಿಯೋವನ್ನು ಜಾಲತಾಣದಲ್ಲಿ ಹರಿಯಬಿಟ್ಟಿರುವವರು ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಟ್ಯಾಗ್ ಮಾಡಿ, ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.