ʻಗಟ್ಟಿಮೇಳʼ ನಟಿ ಜೊತೆ ಎಂಗೇಜ್‌ಮೆಂಟ್‌ ಮಾಡಿಕೊಂಡ ಸಿದ್ದು ಮೂಲಿಮನಿ

Public TV
1 Min Read
pritya achar

`ಸತ್ಯ’ ಧಾರಾವಾಹಿಯ ನಟ ಸಾಗರ್ ಗೌಡ ಎಂಗೇಜ್ ಆದ ಬೆನ್ನಲ್ಲೇ ಕಿರುತೆರೆಯ ಮತ್ತೊಂದು ಜೋಡಿ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. `ಪಾರು’ (Paaru Serial) ಸೀರಿಯಲ್ ನಟ ಸಿದ್ದು (Siddu Moolimani) ಜೊತೆ ಪ್ರಿಯಾ ಜೆ ಆಚಾರ್ (Priya J Achar) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

priya achar

`ಪಾರು’ ಸೀರಿಯಲ್ ಮೂಲಕ ಮನೆ ಮಾತಾದ ನಟ ಸಿದ್ದು ಮೂಲಿಮನಿ ನವೆಂಬರ್ 20ರಂದು ಗಟ್ಟಿಮೇಳ ಧಾರಾವಾಹಿ ನಟಿ ಪ್ರಿಯಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಡ್ಯಾನ್ಸ್ ಶೋವೊಂದರಲ್ಲಿ ಪರಿಚಿತರಾದ ಈ ಜೋಡಿ ಆ ನಂತರ `ಧಮಾಕ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ವೇಳೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿದೆ. ಆ ನಂತರದಲ್ಲಿ ಗುರುಹಿರಿಯರ ಒಪ್ಪಿಗೆ ಪಡೆದು, ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ಈ ಜೋಡಿ ಹಸೆಮಣೆ ಏರಲಿದ್ದಾರೆ.

priya achar

ಸಿದ್ದು ಮೂಲಿಮನಿ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಧಮಾಕ, ವಿಕ್ರಾಂತ್‌ರೋಣ, ರಂಗಿತರಂಗ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ಪ್ರಿಯಾ `ಗಟ್ಟಿಮೇಳ’ ಸೀರಿಯಲ್ ಜೊತೆ ಪರಭಾಷೆ ಧಾರಾವಾಹಿಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:‘ಕಾಮಿಡಿ ಕಿಲಾಡಿ’ ನಯನಾ ವಿರುದ್ಧ ಜೀವ ಬೆದರಿಕೆ ದೂರು ದಾಖಲು

ನಟಿ ಪ್ರಿಯಾ ಹುಟ್ಟುರಾದ ದಾವಣಗೆರೆಯಲ್ಲಿ ಎಂಗೇಜ್‌ಮೆಂಟ್ ನಡೆದಿದೆ. ಈ ಸಂಭ್ರಮಕ್ಕೆ ಪಾರಾ ಮತ್ತು ಗಟ್ಟಿಮೇಳ ಸೀರಿಯಲ್ ತಂಡ ಸಾಕ್ಷಿಯಾಗಿದ್ದಾರೆ. ಹಾಗೇ ಸಾಕಷ್ಟು ನಟ ನಟಿಯರು ಕೂಡ ನವಜೋಡಿಗೆ ಶುಭಹಾರೈಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *