ಧಾರವಾಡ: ವಿಶ್ವಕರ್ಮ ಸಮಾಜ (Vishwakarma Community) ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗಿದ್ದು, ಅನಿವಾರ್ಯವಾಗಿ ಇಸ್ಲಾಂ ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ (KP Nanjundi) ವಿಷಾದ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಶ್ವಕರ್ಮ ಸಮಾಜದವರು ಮುಸ್ಲಿಂ (Muslims), ಕ್ರೈಸ್ತ ಧರ್ಮಕ್ಕೆ ಹೋಗುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಬೇರೆ-ಬೇರೆ ಧರ್ಮಕ್ಕೆ ಸೇರಿಕೊಳ್ಳುತ್ತಿದ್ದಾರೆ. ನಾನು ವಿಧಾನ ಪರಿಷತ್ ಸದಸ್ಯನಾಗಿಯೂ ಅವರನ್ನು ತಡೆಯಲು ಆಗುತ್ತಿಲ್ಲ ಎಂದು ವಿಷಾದಿಸಿದ್ದಾರೆ. ಇದನ್ನೂ ಓದಿ: ಮಂಗಳೂರು ಬಾಂಬ್ ಸ್ಫೋಟದ ತನಿಖೆ NIA ಹೆಗಲಿಗೆ : ನಳಿನ್ ಕುಮಾರ್ ಕಟೀಲ್
ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕಾಗಿ ಹೋರಾಟ ಮಾಡಿದ್ದೆವು. 5 ತಿಂಗಳಿನಿಂದ ಈ ನಿಗಮ ಖಾಲಿ ಇದೆ. ನಿಗಮದ ಅಧ್ಯಕ್ಷ ಸ್ಥಾನ ಭರ್ತಿ ಮಾಡಿಲ್ಲ. ಇದರಿಂದ ಮತಾಂತರಗೊಳ್ಳುವ ನಮ್ಮವರನ್ನು ಕೇಳಿದರೆ, ತಿನ್ನೋಕೆ ಗತಿ ಇಲ್ಲ.. ನಿಮ್ಮ ಸರ್ಕಾರ ತಂದು ಕೊಡುತ್ತಾ ಎಂದು ಪ್ರಶ್ನೆ ಮಾಡ್ತಾರೆ? ಬದುಕಿಗೆ, ಊಟಕ್ಕೆ ಜಾತಿ, ಧರ್ಮ ಇಲ್ಲ. ಅದು ಇಲ್ಲದೇ ಇದ್ದಾಗಲೇ ಅಲ್ವೆ ಬೇರೆ ಕಡೆ ಹೋಗೋದು ಎಂದು ಮರುಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾಗಾಲ್ಯಾಂಡ್ ಜೈಲಿನಿಂದ 9 ಕೈದಿಗಳು ಎಸ್ಕೇಪ್
ಜನಿವಾರ ಹಾಕಿದವರೆಲ್ಲಾ ಬ್ರಾಹ್ಮಣರಲ್ಲ (Brahmins):
ನಮ್ಮ-ನಮ್ಮ ಕಸುಬುಗಳನ್ನು ನಂಬಿ ಶೋಚನೀಯವಾಗಿದ್ದೇವೆ. ಸಾಮಾಜಿಕ ನ್ಯಾಯದಿಂದ ವಂಚಿತವಾದ ಸಮಾಜ ವಿಶ್ವಕರ್ಮರದ್ದು. ನಮ್ಮ ಸಮಾಜದಲ್ಲಿ ಕೂಡ ನಾವು ಜನಿವಾರ ಹಾಕುತ್ತೇವೆ. ಆದರೆ ಜನಿವಾರ ಹಾಕಿದವರೆಲ್ಲಾ ಬ್ರಾಹ್ಮಣರಲ್ಲ. ನಮ್ಮ ಸಮಾಜದವರು ನಾವು ಬ್ರಾಹ್ಮಣರು ಎಂದು ಭ್ರಮೆಯಲ್ಲಿ ಬದುಕುತ್ತಿದ್ದಾರೆ. ನಾವು ಬ್ರಾಹ್ಮಣರಲ್ಲ ಎಂದು ಜನಜಾಗೃತಿ ಮೂಡಿಸುವ ಸ್ಥಿತಿ ಬಂದಿದೆ. ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷ ನನ್ನನ್ನು ಗುರುತಿಸಬೇಕು ಎಂದು ಮನವಿ ಮಾಡಿದ್ದಾರೆ.