ಕುಕ್ಕರ್‌ ಬಾಂಬ್‌ ಸ್ಫೋಟ – ಮೈಸೂರಿನಲ್ಲಿ ವಾಸ, ರೂಮಿನಲ್ಲಿ ಸ್ಫೋಟಕ ವಸ್ತುಗಳು ಪತ್ತೆ

Public TV
2 Min Read
cooker blast Mangaluru auto rickshaw 1 1

ಬೆಂಗಳೂರು: ಮಂಗಳೂರಿನಲ್ಲಿ(Mangaluru) ಬಾಂಬ್‌ ಸ್ಫೋಟ ಮಾಡಿದ ವ್ಯಕ್ತಿ ಮೈಸೂರಿನಲ್ಲಿ(Mysuru) ರೂಮ್‌ ಮಾಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

cooker blast Mangaluru auto rickshaw 5

ಬಾಂಬ್‌ ಸ್ಫೋಟ ಮಾಡಿದ ವ್ಯಕ್ತಿಯ ಮೂಲವನ್ನು ಪತ್ತೆ ಹಚ್ಚಲು ಪೊಲೀಸರು ಆರಂಭಿಸಿದ್ದಾರೆ. ಮೈಸೂರಿನ ಲೋಕನಾಯಕ ನಗರ, ಮೇಟಗಳ್ಳಿಯಲ್ಲಿರುವ ಸಿಂಗಲ್‌ ರೂಮ್‌ನಲ್ಲಿ ಶಂಕಿತ ವಾಸವಿದ್ದ. ಪೊಲೀಸರು ಗಾಯಗೊಂಡ ವ್ಯಕ್ತಿಯ ಚಿತ್ರವನ್ನು ಮಾಲೀಕ ಮೋಹನ್‌ ಕುಮಾರ್‌ ಅವರಿಗೆ ತೋರಿಸಿದಾಗ ಅವರು, ನಾವು ನೀಡಿದ್ದ ರೂಮಿನಲ್ಲಿ ವಾಸವಿದ್ದ ವ್ಯಕ್ತಿಯೇ ಈತ ಎಂಬುದನ್ನು ಖಚಿತ ಪಡಿಸಿದ್ದಾರೆ.

cooker blast Mangaluru auto rickshaw 7

ತಿಂಗಳಿಗೆ 1,800 ಬಾಡಿಗೆ ಪಾವತಿಸುತ್ತಿದ್ದ ವ್ಯಕ್ತಿ, ಒಪ್ಪಂದ ಪ್ರತಿಯಲ್ಲಿ ಪ್ರೇಮ್‌ರಾಜ್‌ S/o ಮಾರುತಿ ಮತ್ತು ಹುಬ್ಬಳ್ಳಿಯ ವಿಳಾಸವನ್ನು ನೀಡಿದ್ದ. ಆದರೆ ಈತನಿಗೂ ವಿಳಾಸಕ್ಕೂ ಯಾವುದೇ ಸಂಬಂಧವಿಲ್ಲ. ಆತ ನಕಲಿ ದಾಖಲೆ ನೀಡಿದ್ದಾನೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

cooker blast Mangaluru auto rickshaw 3

ಈತನ ಕೊಠಡಿಯಲ್ಲಿ ತನಿಖಾ ತಂಡ ಪರಿಶೀಲಿಸಿದಾಗ, ಸ್ಫೋಟಕ ವಸ್ತುಗಳು, ಸರ್ಕ್ಯೂಟ್ ಬೋರ್ಡ್‌ಗಳು, ಸಲ್ಫ್ಯೂರಿಕ್ ಆಸಿಡ್, ಇತರ ಕೆಲವು ರಾಸಾಯನಿಕಗಳು, ಸಣ್ಣ ಬೋಲ್ಟ್‌ಗಳು, ಬ್ಯಾಟರಿಗಳು, ಮೊಬೈಲ್ ಡಿಸ್ಪ್ಲೇಗಳು, ಮರದ ಪುಡಿ, ಅಲ್ಯೂಮಿನಿಯಂ ಫಾಯಿಲ್, ಮಲ್ಟಿಮೀಟರ್, ವೈರ್‌ಗಳು, ಮಿಕ್ಸರ್ ಜಾರ್‌ಗಳು, ಪ್ರೆಶರ್ ಕುಕ್ಕರ್ ಸೀಟಿಗಳು ಇತ್ಯಾದಿಗಳು ಪತ್ತೆಯಾಗಿವೆ.

cooker blast Mangaluru auto rickshaw 2

ಅಷ್ಟೇ ಅಲ್ಲದೇ ಒಂದು ಮೊಬೈಲ್, ಎರಡು ನಕಲಿ ಆಧಾರ್ ಕಾರ್ಡ್, ಒಂದು ನಕಲಿ ಪ್ಯಾನ್ ಕಾರ್ಡ್, ಒಂದು ಡೆಬಿಟ್ ಕಾರ್ಡ್, ಬಳಕೆಯಾಗದ ಸಿಮ್ ಮತ್ತು ನೋಟ್ ಬುಕ್, ಸರ್ಕ್ಯೂಟ್ ಡ್ರಾಯಿಂಗ್‌ಗಳು ಪತ್ತೆಯಾಗಿವೆ.

ಇಂದು ಬೆಳಗ್ಗೆ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸುತ್ತಿವೆ. ಮನೆಯ ಮಾಲೀಕರು ಏಜೆನ್ಸಿಯ ಜೊತೆ ತನಿಖೆಗೆ ಸಹಕರಿಸುತ್ತಿದ್ದಾರೆ.  ಇದನ್ನೂ ಓದಿ: ಉಗ್ರರು ಮಂಗಳೂರು, ಕೊಯಮತ್ತೂರಿನಲ್ಲಿ ಓಡಾಡಿರುವ ಶಂಕೆ – ಇದೊಂದು ವ್ಯವಸ್ಥಿತ ಜಾಲ ಎಂದ ಸಿಎಂ

Suspicious cooker blast reported inside auto rickshaw in Mangaluru city 1

ಕುಕ್ಕರ್‌ ಬಾಂಬ್‌ ಸ್ಫೋಟದಿಂದ(Cooker Bomb Blast) ಶಂಕಿತನ ಶೇ.50ರಷ್ಟು ದೇಹದ ಭಾಗಗಳು ಸುಟ್ಟು ಹೋಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮಂಗಳೂರಿನಲ್ಲಿ ಸಿಕ್ಕಿದ್ದು ಏನು?
ಆಟೋದಲ್ಲಿ ಕುಕ್ಕರ್ ಸ್ಫೋಟ(Cooker Blast) ಪ್ರಕರಣ ತನಿಖೆಯ ಚುರುಕುಗೊಂಡಿದ್ದು ಪರಿಶೀಲನೆ ವೇಳೆ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿದೆ. ನಟ್, ಬೋಲ್ಟ್‌, ಬ್ಯಾಟರಿ, ಸರ್ಕಿಟ್ ರೀತಿಯ ವೈರಿಂಗ್ ಇರುವ ವಸ್ತುಗಳು ಪತ್ತೆಯಾಗಿದೆ. ಲಘು ತೀವ್ರತೆ ಇರುವ ಸ್ಪೋಟಕ ಬಳಸಿರುವ ಶಂಕೆ ವ್ಯಕ್ತವಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ(FSL), ಬಾಂಬ್ ನಿಷ್ಕ್ರೀಯ ದಳದಿಂದ(Bomb Disposal Squad) ತೀವ್ರ ಪರಿಶೀಲನೆ ನಡೆಯುತ್ತಿದೆ.

[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *