ಮತ ಹಾಕದಿದ್ದರೆ 2024ರ ಚುನಾವಣೆಯೇ ನನ್ನ ಕೊನೆಯ ಎಲೆಕ್ಷನ್: ಚಂದ್ರಬಾಬು ನಾಯ್ಡು

Public TV
1 Min Read
Chandrababu Naidu

ಹೈದರಾಬಾದ್: 2024ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬರದಿದ್ದರೆ, ಅದು ನನ್ನ ಕೊನೆಯ ಚುನಾವಣೆಯಾಗಬಹುದು ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) (Telugu Desam Party) ಮುಖ್ಯಸ್ಥ ಚಂದ್ರಬಾಬು ನಾಯ್ಡು (Chandrababu Naidu) ಹೇಳಿದ್ದಾರೆ.

ಆಂಧ್ರಪ್ರದೇಶದ (Andhra Pradesh) ಕರ್ನೂಲ್‍ನಲ್ಲಿ (Kurnool) ಸಾರ್ವಜನಿಕ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನಸಭೆಗೆ ಪ್ರವೇಶಿಸುವುದಿಲ್ಲ ಎಂಬ ನಿರ್ಧಾರವನ್ನು ತಿಳಿಸಿದ್ದಾರೆ. ಇದು ತನಗೆ, ಅವರ ಪತ್ನಿ ಮತ್ತು ಅವರ ನಂಬಿಕೆಗಳಿಗೆ ಕಳಂಕ ತಂದಿದೆ. ಸಭೆಯು ಗೌರವಾನ್ವಿತ (ಗೌರವ) ಸಭೆಯಲ್ಲ, ಬದಲಿಗೆ ಕೌರವ ಸಭೆಯಾಗಿದೆ (Kaurava Sabha). ಮತ್ತೆ ವಿಧಾನಸಭೆಯನ್ನು ಗೌರವಾನ್ವಿತವಾಗಿ ಸಭೆಯನ್ನಾಗಿ ಮಾಡಲು ಅವರು ಅಧಿಕಾರಕ್ಕೆ ಬರಲು ಮತ ಹಾಕುವುದು ಜನರ ಕೈಯಲ್ಲಿದೆ ಎಂದು ಹೇಳಿದ್ದಾರೆ.

Jagan

ಸಾರ್ವಜನಿಕರೇ, ನಾನು ವಿಧಾನಸಭೆಗೆ ಹೋಗಬೇಕಾದರೆ, ರಾಜ್ಯಕ್ಕೆ ನ್ಯಾಯ ಒದಗಿಸಬೇಕಾದರೆ ನಾನು ರಾಜಕೀಯದಲ್ಲಿ ಇರಬೇಕೆಂದು ಹೇಳುತ್ತೇನೆ. ನನ್ನನ್ನು ಗೆಲ್ಲಿಸದಿದ್ದರೆ ಇದೇ ನನ್ನ ಕೊನೆಯ ಚುನಾವಣೆಯಾಗಿರುತ್ತದೆ. ಇದನ್ನು ನಾನು ನಿಮಗೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ನಟ ಕೋಮಲ್ ಗೆ ಕೇತುದೆಸೆ: 7 ವರ್ಷ ಸಿನಿಮಾ ಮಾಡಬೇಡ ಎಂದಿದ್ದರಂತೆ ಜಗ್ಗೇಶ್

ಗುರುವಾರ ಅದೋನಿಯಲ್ಲಿ ನಡೆದ ಮತ್ತೊಂದು ರ್‍ಯಾಲಿಯಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (chief minister Jagan Mohan Reddy) ರಾಜ್ಯದ ಪ್ರಗತಿಯನ್ನು ಸಂಪೂರ್ಣವಾಗಿ ಹಾಳುಮಾಡಿದ್ದಾರೆ. ಕಳೆದ ಮೂರೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಪ್ರಗತಿ ಇಲ್ಲ, ಆದರೆ ರೌಡಿಸಂ ಮತ್ತು ಅಪರಾಧಗಳು ಹೆಚ್ಚಾಗುತ್ತಿವೆ ಎಂದು ಚಂದ್ರಬಾಬು ನಾಯ್ಡು ಅವರು ಆರೋಪಿಸಿದ್ದರು.

ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್‍ಆರ್‌ಸಿಪಿ) ಸರ್ಕಾರವು ಶೌಚಾಲಯಗಳ ಮೇಲೂ ತೆರಿಗೆ ವಿಧಿಸುತ್ತಿದೆ. ಅಲ್ಲದೇ ಆಂಧ್ರಪ್ರದೇಶದಲ್ಲಿ ಮದ್ಯ ಮಾಫಿಯಾ ಆಡಳಿತ ನಡೆಸುತ್ತಿದೆ. ಈ ಮದ್ಯವನ್ನು ಜಗನ್ ಕಡೆಯವರೆ ತಯಾರಿಸುತ್ತಾರೆ ಮತ್ತು ಮಾರಾಟವನ್ನು ಮಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ನನ್ನ ಗರ್ಲ್‍ಫ್ರೆಂಡ್‍ಗೆ ನ್ಯಾಯ ಕೊಡಿಸಿ – 6ನೇ ಮಹಡಿಯಿಂದ ಜಿಗಿದ ವ್ಯಕ್ತಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *