ಚೀಲ, ಬೆಡ್‍ಶೀಟ್‍ನಲ್ಲಿ ಸುತ್ತಿದ ರೀತಿಯಲ್ಲಿ ವೃದ್ಧನ ಮೃತದೇಹ ಪತ್ತೆ

Public TV
1 Min Read
PUTTENAHALLI

ಬೆಂಗಳೂರು: ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಚೀಲ ಮತ್ತು ಬೆಡ್‍ಶೀಟ್‍ನಲ್ಲಿ ಸುತ್ತಿದ್ದ ಮೃತದೇಹ ಪತ್ತೆ ಆಗಿದೆ.

ಜೆಪಿ ನಗರದ 6ನೇ ಹಂತದ ಸಮೀಪ ಮೃತದೇಹ ಪತ್ತೆ ಆಗಿದ್ದು, 67 ವರ್ಷದ ಬಾಲಸುಬ್ರಮಣಿಯನ್ ಎಂದು ಗುರುತಿಸಲಾಗಿದೆ. ಮಗ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

PUTTENAHALLI 1

ಇದೇ ನವೆಂಬರ್ 16ರಂದು ಮೊಮ್ಮಗನನ್ನು ಬ್ಯಾಡ್ಮಿಂಟನ್ (Badminton) ಕ್ಲಾಸ್‍ಗೆ ಕರೆದುಕೊಂಡು ಹೋಗಿದ್ದ ಬಾಲಸುಬ್ರಮಣಿಯನ್ ಸಂಜೆ 4.55ರ ವೇಳೆಗೆ ಸೊಸೆಗೆ ಕರೆ ಮಾಡಿ ಹೊರಗಡೆ ಕೆಲಸ ಇದೆ ಎಂದು ತಿಳಿಸಿದ್ರು. ಬಳಿಕ ಕರೆ ಮಾಡಿದ್ರೆ ಫೋನ್ ಸ್ವಿಚ್ ಆಫ್ ಆಗಿತ್ತು. ಆ ನಂತರ ಮಗ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ರು. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕನನ್ನು ಹೊರಗೆ ತಳ್ಳಿದ ಟಿಟಿಇ – ಕಾಲು ಕಳೆದುಕೊಂಡ ವ್ಯಕ್ತಿ ಸ್ಥಿತಿ ಗಂಭೀರ

PUTTENAHALLI 2

ದೇಹದ ಮೇಲೆ ಯಾವುದೇ ಗಾಯಗಳು ಕಂಡು ಬಂದಿಲ್ಲ. ಸಿಡಿಆರ್ ಪರಿಶೀಲಿಸಿದಾಗ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಮೃತ ವೃದ್ಧನ ಕಾಲ್ ಹಿಸ್ಟರಿ ಜಾಲಾಡಿದಾಗ ನಿರಂತರವಾಗಿ ಮಹಿಳೆಯೊಬ್ಬರ ಜೊತೆಗೆ ಸಂಪರ್ಕ ಇರುವುದು ಬಯಲಾಗಿದೆ. ಸಾರಕ್ಕಿ ಸಿಗ್ನಲ್ ಬಳಿ ಲಾಸ್ಟ್ ಲೊಕೇಶನ್ ಇದೆ. ಹೀಗಾಗಿ ಆ ಮಹಿಳೆ ಯಾರು ಅನ್ನೋದರ ಕುರಿತು ಖಾಕಿ ಬೆನ್ನು ಬಿದ್ದಿದೆ.

ಈ ಸಂಬಂಧ ಪುಟ್ಟೇನಹಳ್ಳಿ ಠಾಣೆ (Puttenahalli Station) ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *