ಶ್ರದ್ಧಾ ಭೀಕರ ಹತ್ಯೆ ಪ್ರಕರಣ – ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟ ಕಿರಾತಕ

Public TV
2 Min Read
SHRADDA AFTAB 1

ನವದೆಹಲಿ: ಪ್ರಿಯಕರ ಅಫ್ತಾಬ್‍ನಿಂದಲೇ ಶ್ರದ್ಧಾ (Shraddha Walkar) ಭೀಕರ ಹತ್ಯೆ ಪ್ರಕರಣವು ದಿನೇ ದಿನೇ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಅಫ್ತಾಬ್ (Aftab Poonawala) ತನ್ನ ನಂಬಿ ಬಂದವಳ ಹತ್ಯೆ ಮಾಡಿದ್ದು ಹೇಗೆ ಎಂಬುದನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಖಾಕಿ ಎದುರು ಎಳೆಎಳೆಯಾಗಿ ಹತ್ಯೆ ಕಥನವನ್ನು ಕಿರಾತಕ ಬಿಚ್ಚಿಟ್ಟಿದ್ದು, ಅಫ್ತಾಬ್ ಹೇಳಿದ ಕಥೆ ಕೇಳಿ ಪೊಲೀಸರೇ ದಂಗಾಗಿದ್ದಾರೆ.

SHRADDA AFTAB 3

ಪೊಲೀಸರ ಮುಂದೆ ಹೇಳಿದ್ದೇನು..?: ನಾನು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈ ಮೂಲದವ. ಡೇಟಿಂಗ್ ಆ್ಯಪ್‍ (Dating App) ನಲ್ಲಿ ಶ್ರದ್ಧಾ ಪರಿಚಯವಾಗಿತ್ತು. ಬಳಿಕ ಮುಂಬೈನ ಕಾಲ್ ಸೆಂಟರ್‍ನಲ್ಲಿ ಇಬ್ಬರು ಒಟ್ಟಿಗೆ ಕೆಲಸಕ್ಕೆ ಸೇರಿದೆವು. ನಮ್ಮ ಆತ್ಮೀಯತೆ ಹೆಚ್ಚಿ ಪ್ರೀತಿಸಲು ಪ್ರಾರಂಭಿಸಿದೆವು. 2019ರಲ್ಲಿ ಕೆಲಸ ಆರಂಭಿಸಿದ ನಮಗೆ ಎಲ್ಲವೂ ಸರಿಯಾಗಿತ್ತು. ನಮ್ಮ ಮದುವೆ (Marriage) ಬಗ್ಗೆ ಶ್ರದ್ಧಾ ಅವಳ ಮನೆಯಲ್ಲಿ ಪ್ರಸ್ತಾಪಿಸಿದಳು. ಅದಕ್ಕೆ ವಿರೋಧ ವ್ಯಕ್ತವಾಯಿತು. ವಿರೋಧ ಬಳಿಕ ನಾವು ಮುಂಬೈನ ನೈಗಾಂವ್‍ನಲ್ಲಿ ವಾಸಿಸಲು ಪ್ರಾರಂಭಿಸಿದೆವು. ಇದನ್ನೂ ಓದಿ: ಲವ್ ಜಿಹಾದ್‌ಗೆ ಬಲಿಯಾದ್ರೆ ಇದೇ ಗತಿ – ಹೊಸ ಆಯಾಮದಲ್ಲಿ ತನಿಖೆ ನಡೆಸುವಂತೆ VHP ಮನವಿ

delhi murder 5

ಕೆಲವು ದಿನಗಳ ಬಳಿಕ ದೆಹಲಿಗೆ ಶಿಫ್ಟ್ ಆದೆವು. ದೆಹಲಿಯಿಂದ ಹಿಮಾಚಲ ಪ್ರದೇಶ 9Himachal Pradesh) ಕ್ಕೆ ಭೇಟಿ ನೀಡಿ ಮತ್ತೆ ದೆಹಲಿಗೆ ಮರಳಿದೆವು. ದೆಹಲಿಯ ಪಹರ್‍ಗಂಜ್‍ನ ಹೋಟೆಲ್‍ನಲ್ಲಿ ಒಂದು ದಿನ ಉಳಿದುಕೊಂಡೆವು. ನಂತರ ದಕ್ಷಿಣ ದೆಹಲಿಯ ಸೈದುಲಾಜಾಬ್‍ನಲ್ಲಿರುವ ಹಾಸ್ಟೆಲ್‍ನಲ್ಲಿ ತಂಗಿದ್ದೆವು. ಮೇ 15ರಂದು ಮೆಹ್ರೋಲಿ (Mehroli) ಯ ಛತ್ತರಪುರ ಪಹಾಡಿಯಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ಒಟ್ಟಿಗೆ ಇದ್ದೆವು. ಮೇ 18ರಂದು ಮದುವೆ ವಿಚಾರಕ್ಕೆ ಜಗಳ ಆರಂಭವಾಯಿತು. ನಾನು ಅವಳ ಬಾಯಿ ಮುಚ್ಚುವ ಪ್ರಯತ್ನ ಮಾಡಿದೆ. ಬಳಿಕ ಕತ್ತು ಹಿಸುಕಿದೆ ಅವಳು ಸಾವನ್ನಪ್ಪಿದಳು. ಇದನ್ನೂ ಓದಿ: ಅಫ್ತಾಬ್‍ನನ್ನು ನೇಣಿಗೆ ಹಾಕಿ: ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿದ ಶ್ರದ್ಧಾಳ ತಂದೆ

SHRADDA MURDER ACCUSED

ಮೇ 19ರಂದು ದೇಹದ ವಿಲೇವಾರಿ ಮಾಡುವ ಬಗ್ಗೆ ಚಿಂತಿಸಿದೆ. ಬಳಿಕ ಮಾರ್ಕೆಟ್‍ನಿಂದ 23,500 ರೂಪಾಯಿ ನೀಡಿ ಫ್ರಿಡ್ಜ್ (Fridge) ಖರೀದಿಸಿದೆ. ಸಣ್ಣ ಹರಿತವಾದ ಗರಗಸ ಖರೀದಿಸಿದೆ. ಮೇ 20ರಂದು ಅವಳ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ತುಂಬಿದೆ. ನಿತ್ಯ ರಾತ್ರಿ ಒಂದು ಗಂಟೆಯ ಬಳಿಕ ಕವರ್ ಗಳನ್ನು ಕಾಡಿನ ಮಧ್ಯಕ್ಕೆ ಹೋಗಿ ಎಸೆದು ಬರ್ತಿದ್ದೆ. ಯಾರಿಗೂ ಸಂಶಯ ಬಾರದಿರಲು ಅದೇ ಏರಿಯಾದಲ್ಲಿ ಓಡಾಡುತ್ತಿದ್ದೆ, ರಾತ್ರಿ ಹೆಚ್ಚು ಸದ್ದು ಆಗದಂತೆ ನೋಡಿಕೊಳ್ಳಲು ನೀರಿನ ಮೋಟರ್ (Motor) ಆನ್ ಮಾಡುತ್ತಿದ್ದೆ. ವಾಸನೆ ತಡೆಯಲು ಅಗರಬತ್ತಿ ಬಳಸುತ್ತಿದ್ದೆ. ಕೊಲೆಯ ಬಳಿಕ ದೇಹ ವೀಲೆವಾರಿ ಮಾಡಲು ಟೆಲಿವಿಷನ್ ಅಪರಾಧ ಸರಣಿ ‘ಡೆಕ್ಸ್ಟರ್’ ನೆರವಾಯಿತು. ಗೂಗಲ್‍ನಿಂದಲೂ ನಾನು ಮಾಹಿತಿ ಕಲೆ ಹಾಕಿ ಕೆಲಸ ಮಾಡಿ ಮುಗಿಸಿದೆ ಎಂಬುದಾಗಿ ತಿಳಿಸಿದ್ದಾನೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *