ಕಲಬುರಗಿ: ದುಷ್ಕರ್ಮಿಗಳು ಬಿಜೆಪಿ (BJP) ಮುಖಂಡನ ಮರ್ಮಾಂಗಕ್ಕೆ ಚಾಕು ಇರಿದು, ಕುತ್ತಿಗೆಗೆ ಹಗ್ಗ ಬಿಗಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾದ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.
ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಮಲ್ಲಿಕಾರ್ಜುನ್ ಮುತ್ಯಾಲ (64) ಎಂದು ಗುರುತಿಸಲಾಗಿದೆ. ಇವರು ಬಿಜೆಪಿ ಮುಖಂಡನಾಗಿದ್ದು, ತಮ್ಮ ಉಪಜೀವನಕ್ಕಾಗಿ ಪಟ್ಟಣದಲ್ಲಿರುವ ಎಲೆಕ್ಟ್ರಾನಿಕ್ಸ್ ಅಂಗಡಿ (Electronic Store) ಹಾಗೂ ಟಿವಿ ಶಾಪ್‍ವೊಂದರ (TV Shop) ನಡೆಸಿಕೊಂಡು ಹೋಗುತ್ತಿದ್ದರು. ಕಳೆದ ಕೆಲ ದಿನಗಳ ಹಿಂದೆ ಮಲ್ಲಿಕಾರ್ಜುನ್‍ರ ಅಂಗಡಿಗೆ ಕಳ್ಳರು ಕನ್ನ ಹಾಕಿದ್ದರು. ಹೀಗಾಗಿ ಅಂದಿನಿಂದ ರಾತ್ರಿ ಊಟ ಮಾಡಿಕೊಂಡು ಅಂಗಡಿಯಲ್ಲೇ ಮಲಗುತ್ತಿದ್ದರು.
ಅದರಂತೆ ನಿನ್ನೆ ಕೂಡ ರಾತ್ರಿ ಮನೆಗೆ ಹೋಗಿ ಊಟ ಮಾಡಿ ಅಂಗಡಿಗೆ ಬಂದು ಮಲಗಿದ್ದಾರೆ. ಆದರೆ ನಿತ್ಯ ಬೆಳಗ್ಗೆ 8 ಗಂಟೆಗೆ ಮನೆಗೆ ಬರಬೇಕಾದ ಮಲ್ಲಿಕಾರ್ಜುನ್ ಮನೆಗೆ ಬಾರದಿದ್ದಾಗ ಆತನ ಪುತ್ರ ಅಂಗಡಿ ಹೋಗಿದ್ದಾರೆ. ಈ ವೇಳೆ ಅಂಗಡಿಯ ಹಿಂಬದಿಯಲ್ಲಿ ತಂದೆಯ ಮರ್ಮಾಂಗ ಹಾಗೂ ಕತ್ತಿನ ಭಾಗದಲ್ಲಿ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಕೊಲೆ ಮಾಡಿರುವ ದೃಶ್ಯ ಕಂಡು ಮಗ ದಂಗಾಗಿದ್ದಾರೆ. ಇದನ್ನೂ ಓದಿ: ಚಂದ್ರುವಿನ ದೇಹದ ಮೇಲೆ ಹಲ್ಲೆಯ ಗಾಯವಿಲ್ಲ- ರೇಣುಕಾ ತಮ್ಮನ ಮಗ ಅಪಘಾತದಲ್ಲೇ ಸಾವು?
ಘಟನೆಗೆ ಸಂಬಂಧಿಸಿ ಕುಟುಂಬಸ್ಥರು ಮಾತನಾಡಿ, ಮಲ್ಲಿಕಾರ್ಜುನ್ ಯಾರೊಂದಿಗೂ ವೈಷಮ್ಯ ಬೆಳೆಸಿಕೊಂಡಿರಲಿಲ್ಲ. ಎಲ್ಲರ ಜೊತೆಗೆ ಚೆನ್ನಾಗಿಯೇ ಇದ್ದರು ಎಂದು ತಿಳಿಸಿದ್ದಾರೆ. ಆದರೆ ಪೊಲೀಸರ ಮಾಹಿತಿ ಪ್ರಕಾರ 16 ವರ್ಷಗಳ ಹಿಂದೆ ಓರ್ವ ಮಹಿಳೆ ಸ್ನೇಹದ ಹೆಸರಲ್ಲಿ ಮಲ್ಲಿಕಾರ್ಜುನರ 16 ಎಕರೆ ಜಮೀನಿನ ಮೇಲೆ ಕಣ್ಣು ಹಾಕಿದ್ದಳು. ಆ ಆಸ್ತಿಯಲ್ಲಿ ಅರ್ಧ ಪಾಲು ನೀಡುವಂತೆ ಕೆಲ ದಿನಗಳಿಂದ ಆ ಮಹಿಳೆ ಸಹೋದರರು ಮಲ್ಲಿಕಾರ್ಜುನನಿಗೆ ಟಾರ್ಚರ್ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಅವರೇ ಈ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿದೆ. ಇದನ್ನೂ ಓದಿ: ಅಫ್ತಾಬ್‍ನನ್ನು ನೇಣಿಗೆ ಹಾಕಿ: ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿದ ಶ್ರದ್ಧಾಳ ತಂದೆ
ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮುತ್ಯಾಲ ಹತ್ಯೆಯಿಂದ ಸೇಡಂ ಪಟ್ಟಣ ಅಕ್ಷರಶಃ ಬೆಚ್ಚಿಬಿದ್ದಿದ್ದು, ಘಟನೆ ಸುದ್ದಿ ತಿಳಿಯುತ್ತಲೇ ಸೇಡಂ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಎಸ್ಪಿ ಈಶಾ ಪಂತ್ ಭೇಟಿ ನೀಡಿ ಸೇಡಂ ಡಿವೈಎಸ್ ಪಿ. ಬಸವರಾಜ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಿರುವುದಾಗಿ ಹೇಳಿದ್ದಾರೆ.