ಬೆಂಗಳೂರು: ಕನ್ನಡ ಸಿನಿಮಾ (Kannada Cinema) ರಂಗದಲ್ಲಿ `ಮಠ’ದ (Math) ಹೆಸರಿನಲ್ಲಿ ಮತ್ತೊಂದು ಸಿನಿಮಾ ಮೂಡಿ ಬಂದಿದೆ. ರವೀಂದ್ರ ವಂಶಿ (Ravindra Vamshi) ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ಮೊದಲ ಮಠ ಸಿನಿಮಾ ಮಾಡಿದ್ದ ಗುರುಪ್ರಸಾದ್ (Guruprasad), ತಬಲಾ ನಾಣಿ, ಮಂಡ್ಯ ರಮೇಶ್ (Mandya Ramesh) ಸೇರಿದಂತೆ ಹಲವರು ನಟಿಸಿದ್ದಾರೆ.
- Advertisement -
ಸಿನಿಮಾ ಬಗ್ಗೆ ಈಗ ಹಲವು ವಿವಾದಗಳು ಭುಗಿಲೆದ್ದಿದೆ. ಇತ್ತೀಚೆಗೆ ಮಠದ ಸ್ವಾಮೀಜಿಗಳಿಗೆ ಅವಮಾನಿಸಲಾಗಿದೆ ಎಂದು ಹೇಳಿದ್ದ ಕಾಳಿಮಠದ ರಿಷಿಕುಮಾರ್ ಸ್ವಾಮೀಜಿ ಇದೀಗ, ಹಿಂದೂ ಮಠಗಳ ಬಗ್ಗೆ ಸಿನಿಮಾದಲ್ಲಿ ಕೀಳಾಗಿ ತೋರಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ರಿಷಬ್‌ಗೆ ಕಾಲಿಗೆ ಬಿದ್ದು ಬನ್ನಿ- ‘ಮಠ’ ನಿರ್ದೇಶಕನಿಗೆ ರಿಷಿ ಕುಮಾರ ಸ್ವಾಮಿ ಕ್ಲಾಸ್
- Advertisement -
- Advertisement -
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Karnataka Film Chamber Of Commerce) ಚಿತ್ರತಂಡದ (Film Team) ವಿರುದ್ಧ ದೂರು ನೀಡಿರುವ ರಿಷಿಕುಮಾರ ಸ್ವಾಮೀಜಿ (Rishikumara Swamy), `ಮಠ’ ಟ್ರೇಲರ್ ಸಂಭಾಷಣೆಗಳಿಗೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಚಿತ್ರತಂಡದೊಂದಿಗೆ ಮುಖಾಮುಖಿಯಾಗಿ ಚರ್ಚಿಸಿದ್ದಾರೆ. ಇದನ್ನೂ ಓದಿ: ಟಾಲಿವುಡ್ ಲೆಜೆಂಡ್ ಬಾಲಯ್ಯ ಮುಂದೆ ಅಬ್ಬರಿಸಲಿದ್ದಾರೆ `ಕೆಜಿಎಫ್ 2′ ನಟ
- Advertisement -
ಇದಕ್ಕೆ ಖಡಕ್ಕಾಗಿ ಕ್ಲ್ಯಾರಿಟಿ ಕೊಟ್ಟಿರೋ ನಿರ್ದೇಶಕ ರವೀಂದ್ರ ವಂಶಿ (Ravindra Vamshi), ನಾನು ಸುಮ್ಮನೆ ಸಿನಿಮಾ ಮಾಡಿಲ್ಲ, ನಾನು 149 ದಿನ, 70ಕ್ಕೂ ಹೆಚ್ಚು ಮಠಗಳಲ್ಲಿ ಶೂಟ್ ಮಾಡಿದ್ದೀನಿ. ನನಗೆ ಎಲ್ಲ ಧರ್ಮ, ಪರಂಪರೆಗಳ ಬಗ್ಗೆ ಗೌರವವಿದೆ. ನೀವು ಮೊದಲು ಸಿನಿಮಾ ನೋಡಿ ಮಾತನಾಡಿ. ನಾನು ಸಾಕಷ್ಟು ಅಧ್ಯಯನ ಮಾಡಿಯೇ ಸಿನಿಮಾ ಮಾಡಿದ್ದೀನಿ. ನನ್ನ ಸಿನಿಮಾಗೆ ಚೀಪ್ ಪಬ್ಲಿಸಿಟಿ ಅಗತ್ಯವಿಲ್ಲ. ನನ್ನ ಮಠ ಚಿತ್ರಕ್ಕೆ ಸುಳ್ಳು ಪ್ರಚಾರ ಬೇಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.