ಕಾಲಿವುಡ್‌ನ ಸ್ಟಾರ್ ಜೋಡಿ ಸ್ನೇಹಾ(Sneha) ಮತ್ತು ನಟ ಪ್ರಸನ್ನ(Prasanna) ಮತ್ತೆ ಸುದ್ದಿಯಲ್ಲಿದ್ದಾರೆ. ಸಮಂತಾ ಮತ್ತು ನಾಗಚೈತನ್ಯ, ಐಶ್ವರ್ಯ ಧನುಷ್ ಜೋಡಿಯ ನಂತರ ಸ್ನೇಹಾ ಮತ್ತು ಪ್ರಸನ್ನ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ವದಂತಿ ಹಬ್ಬಿದೆ. ಈ ಬೆನ್ನಲ್ಲೇ ನಟಿ ಸ್ನೇಹಾ ಕೂಡ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
View this post on Instagram
ತಮಿಳು, ಕನ್ನಡ ಹೀಗೆ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ನಟಿ ಸ್ನೇಹಾ ದಾಂಪತ್ಯದಲ್ಲಿ ಬಿರುಕು(Divorce) ಮೂಡಿದೆ. ಇಬ್ಬರೂ ಬೇರೇ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ. 2009ರಲ್ಲಿ `ಅಚ್ಚಬೇಡು’ ಚಿತ್ರದಲ್ಲಿ ಸ್ನೇಹಾ ಮತ್ತು ಪ್ರಸನ್ನ ಜೋಡಿಯಾಗಿ ನಟಿಸಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಅರಳಿತು. 2011ರಲ್ಲಿ ದಾಂಪತ್ಯ ಜೀವನಕ್ಕೆ ಈ ಜೋಡಿ ಕಾಲಿಟ್ಟಿದ್ದರು. ಇಬ್ಬರ ಮಕ್ಕಳ ಪೋಷಕರಾಗಿರುವ ಸ್ನೇಹಾ, ಪ್ರಸನ್ನ ನಡುವೆ ಸಂಸಾರದಲ್ಲಿ ಬಿರುಕಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಾನ್ಯ ವಿಷ್ಯವಾಗಿ ರೂಪೇಶ್ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್
ಸೌತ್ ಸಿನಿ ಅಂಗಳದಲ್ಲಿ ಸದ್ಯದ ಮಟ್ಟಿಗೆ ಹಾಟ್ ನ್ಯೂಸ್ ಅಂದ್ರೆ ಸ್ನೇಹಾ ಪ್ರಸನ್ನ ದಂಪತಿ ವಿಚಾರ. ಇದೀಗ ಡಿವೋರ್ಸ್ ವಿಚಾರಕ್ಕೆ ಸಂಬಂಧಿಸಿದ ವದಂತಿಗೆ ನಟಿ ಸ್ನೇಹಾ ಬ್ರೇಕ್ ಹಾಕಿದ್ದಾರೆ. ಸ್ನೇಹಾ ತಮ್ಮ ಪತಿ ಪ್ರಸನ್ನ ಜೊತೆಗಿನ ಆಪ್ತ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆನ್ನೆಗೆ ಮುತ್ತಿಟ್ಟು ಸೆಲ್ಫಿ ತೆಗೆದು ತನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ವಿಚ್ಛೇದನದ ವಿಷಯ ಕೇವಲ ವದಂತಿ ಎಂದು ಸ್ನೇಹಾ ಖಚಿತಪಡಿಸಿದ್ದಾರೆ. ಈ ಮೂಲಕ ಡಿವೋರ್ಸ್ ವದಂತಿಗೆ ಅಂತ್ಯ ಹಾಡಿದ್ದಾರೆ.