ದೊಡ್ಮನೆ ಕುಡಿ ಯುವರಾಜ್‌ಕುಮಾರ್(Yuva Rajkumar) ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಕಲ ಸಿದ್ಧತೆ ನಡೆಸಿದ್ದಾರೆ. ಅಭಿಮಾನಿಗಳ ಮನದಾಸೆಯಂತೆ ಸಂತೋಷ್ ಆನಂದ್‌ರಾಮ್(Santhosh Anandram) ಮತ್ತು ಯುವ ಕಾಂಬಿನೇಷನ್‌ನಲ್ಲಿ ಸಿನಿಮಾ ಬರೋದು ಈ ಹಿಂದಯೇ ಅಧಿಕೃತವಾಗಿದೆ. ಈ ಚಿತ್ರದ ಬಗ್ಗೆ ಏನು ಅಪ್‌ಡೇಟ್ ಸಿಗದೇ ನಿರಾಸೆಯಾಗಿದ್ದ ಫ್ಯಾನ್ಸ್‌ಗೆ ಇದೀಗ ಗುಡ್ ನ್ಯೂಸ್‌ವೊಂದು ಸಿಕ್ಕಿದೆ.
`ಯುವ ರಣಧೀರ ಕಂಠೀರವ’ ಚಿತ್ರದ ಮೂಲಕ ಯುವ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕಿತ್ತು. ಆದರೆ ಈ ಚಿತ್ರದ ಬದಲಾಗಿ ಯುವರತ್ನ ನಿರ್ದೇಶಕ ಸಂತೋಷ್ ನಿರ್ದೇಶನದ ಚಿತ್ರದಲ್ಲಿ ಯುವ ಲಾಂಚ್ ಆಗುತ್ತಿದ್ದಾರೆ. ಈ ಸಿನಿಮಾಗೆ ಹೊಂಬಾಳೆ ಸಂಸ್ಥೆ(Hombale Films) ಕೂಡ ಸಾಥ್ ಕೊಟ್ಟಿದೆ. ಕಳೆದ ಏಪ್ರಿಲ್ ಯುವನ ಭರ್ಜರಿ ಫೋಟೋಶೂಟ್ ಮಾಡಿಸಿ ಅಧಿಕೃತ ಅನೌನ್ಸ್ ಕೂಡ ಮಾಡಿದ್ದರು. ಬಳಿಕ ಈ ಚಿತ್ರದ ಯಾವುದೇ ಅಪ್‌ಡೇಟ್ ಕೂಡ ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ. ಈಗ ಈ ಚಿತ್ರದ ಬಗ್ಗೆ ಫ್ಯಾನ್ಸ್‌ಗೆ ಸಿಹಿ ಸುದ್ದಿ ಸಿಕ್ಕಿದೆ. ಇದನ್ನೂ ಓದಿ:ಮತ್ತೊಂದು ಮದುವೆಗೆ ಒಪ್ಕೊಂಡ್ರಾ ಮಲೈಕಾ?: ಯಸ್ ಅಂದೆ ಅಂತ ಪೋಸ್ಟ್ ಹಾಕಿದ ನಟಿ
ಪುನೀತ್ ರಾಜ್‌ಕುಮಾರ್ ಹೊಂಬಾಳೆ ಬ್ಯಾನರ್ ಅಡಿ ಸಾಕಷ್ಟು ಸಿನಿಮಾಗಳನ್ನ ಮಾಡಿದ್ದರು. ಮತ್ತೆ ಮುಂಬರುವ ಪ್ರಾಜೆಕ್ಟ್ಗಳನ್ನ ಹೊಂಬಾಳೆ ಜೊತೆ ಪ್ಲ್ಯಾನ್ ಮಾಡಲಾಗಿತ್ತು. ಆದರೆ ಅಪ್ಪು ಅಗಲಿಕೆ ನಂತರ ಎಲ್ಲಾ ತಲೆಕೆಳಗಾಗಿತ್ತು. ಹೊಂಬಾಳೆ ನಿರ್ಮಾಣ ಸಂಸ್ಥೆ, ಸಂತೋಷ್ ನಿರ್ದೇಶನದಲ್ಲಿ ಯುವಗೆ ಡೈರೆಕ್ಷನ್ ಮಾಡಬೇಕು ಎಂಬುದು ಅಭಿಮಾನಿಗಳ ಬೇಡಿಕೆಯ ಜೊತೆ ಮಹಾದಾಸೆಯಾಗಿತ್ತು. ಅದರಂತೆಯೇ ಚಿತ್ರದ ಅನೌನ್ಸ್‌ಮೆಂಟ್ ಕೂಡ ನಡೆದಿತ್ತು.
ನನ್ನ ಸಹೋದರ ಸಮಾನರಾದ ಎಲ್ಲ ಅಭಿಮಾನಿಗಳಿಗೆ ಅತಿ ಶೀಘ್ರದಲ್ಲಿ ನನ್ನ ಹಾಗೂ ಯುವರಾಜ್ ಕುಮಾರ್ ಕಾಂಬಿನೇಶನ್ ಚಿತ್ರದ ಎಲ್ಲ ಮಾಹಿತಿ ಹೊರಬರುತ್ತದೆ ನಿಮ್ಮ ಆಶೀರ್ವಾದ ಸದಾ ಇರಲಿ ❤️@yuva_rajkumar @hombalefilms pic.twitter.com/QD9aywyRwY
— Santhosh Ananddram (@SanthoshAnand15) November 9, 2022
ಅನೌನ್ಸ್‌ಮೆಂಟ್ ನಂತರ ಚಿತ್ರದ ಬಗ್ಗೆ ಏನು ಅಪ್‌ಡೇಟ್ ಇಲ್ಲ ಎಂದು ಬೇಸರದಲ್ಲಿದ್ದ ಫ್ಯಾನ್ಸ್‌ಗೆ ನಿರ್ದೇಶಕ ಸಂತೋಷ್ ರಿಯಾಕ್ಟ್ ಮಾಡಿದ್ದಾರೆ. ನನ್ನ ಸಹೋದರ ಸಮಾನರಾದ ಎಲ್ಲಾ ಅಭಿಮಾನಿಗಳಿಗೆ ಅತೀ ಶೀಘ್ರದಲ್ಲಿ ನನ್ನ ಮತ್ತು ಯುವರಾಜ್‌ಕುಮಾರ್ ಕಾಂಬಿನೇಷನ್ ಚಿತ್ರದ ಎಲ್ಲಾ ಮಾಹಿತಿ ಹೊರಬರುತ್ತದೆ ನಿಮ್ಮ ಆಶೀರ್ವಾದ ಸದಾ ಇರಲಿ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಸದ್ಯದಲ್ಲೇ ಚಿತ್ರದ ಅಪ್‌ಡೇಟ್ ಸಿಗಲಿದೆ ಎಂದು ಸೂಚನೆ ನೀಡಿದ್ದಾರೆ.