ಹೊಸ ಮನೆಗೆ ಕಾಲಿಟ್ಟ ಮಿಲನಾ- ಡಾರ್ಲಿಂಗ್ ಕೃಷ್ಣ ಜೋಡಿ

Public TV
1 Min Read
krishna

`ಲವ್ ಮಾಕ್ಟೈಲ್‌ʼ (Love Mocktail) ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿದ್ದ ಜೋಡಿ ಮಿಲನಾ(Milana Nagraj) ಮತ್ತು ಡಾರ್ಲಿಂಗ್ ಕೃಷ್ಣ(Darling Krishna) ಇದೀಗ ಹೊಸ ಮನೆಗೆ(House Warming) ಕಾಲಿಟ್ಟಿದ್ದಾರೆ. ಸದ್ಯ ಗೃಹಪ್ರವೇಶದ ಫೋಟೋಗಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

krishna

ಡಾರ್ಲಿಂಗ್ ಕೃಷ್ಣ, ಮಿಲನಾ ನಟನೆಯ ಲವ್ ಮಾಕ್ಟೈಲ್, ಲವ್ ಮಾಕ್ಟೈಲ್ 2 ಚಿತ್ರದ ಸೂಪರ್ ಸಕ್ಸಸ್ ನಂತರ ಹೊಸ ಮನೆಗೆ ಈ ಜೋಡಿ ಕಾಲಿಟ್ಟಿದೆ. ಹಲವು ವರ್ಷಗಳಿಂದ ಈ ಜೋಡಿ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಬಳಿಕ ಗುರುಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು. ಈಗ ಹೊಸ ಮನೆಗೆ ಕ್ರಿಸ್‌ಮಿ ಜೋಡಿ ಕಾಲಿಟ್ಟಿದ್ದಾರೆ. ಇದನ್ನೂ ಓದಿ:ಅನಾರೋಗ್ಯದ ನಡುವೆಯೂ `ಯಶೋದಾ’ ಸಿನಿಮಾ ಪ್ರಚಾರದಲ್ಲಿ ಸಮಂತಾ

ಇನ್ನೂ ತಮ್ಮ ಹೊಸ ಮನೆಗೆ ʻಕ್ರಿಸ್‌ಮಿ ನೆಸ್ಟ್ʼ ಎಂದು ಹೆಸರಿಟ್ಟಿದ್ದಾರೆ. ನೆಚ್ಚಿನ ಜೋಡಿಗೆ ಅಭಿಮಾನಿಗಳು, ಆಪ್ತರು ಶುಭಹಾರೈಸಿದ್ದಾರೆ. ಇನ್ನೂ ಮಿಲನಾ ಮತ್ತು ಕೃಷ್ಣ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article