ಬಿಗ್ ಬಾಸ್ ಮನೆಯ(Bigg Boss House) ಲವ್ ಬರ್ಡ್ಸ್ ಎಂದೇ ಹೈಲೈಟ್ ಆಗಿದ್ದ ಸಾನ್ಯ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ಇದೀಗ ದೂರ ದೂರ ಆಗಿದ್ದಾರೆ. ದೊಡ್ಮನೆಯಿಂದ ಹೊರಬಂದ ಬೆನ್ನಲ್ಲೇ ರೂಪೇಶ್ ಶೆಟ್ಟಿ(Roopesh shetty) ಬಗ್ಗೆ ಸಾನ್ಯ (Sanya Iyer) ಭಾವುಕರಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾನ್ಯ ಪೋಸ್ಟ್ ಸಖತ್ ವೈರಲ್ ಆಗಿದೆ.
ದೊಡ್ಮನೆಯ ಪ್ರೇಮ ಪಕ್ಷಿಗಳಾಗಿ ಸಾನ್ಯ ಮತ್ತು ರೂಪೇಶ್ ಶೆಟ್ಟಿ ಕಾಣಿಸಿಕೊಂಡಿದ್ದರು. ಓಟಿಟಿ ಟು ಬಿಗ್ ಬಾಸ್ ಅಂಗಳದವರೆಗೆಗೂ 100 ದಿನದ ಆಟದಲ್ಲಿ ಒಬ್ಬರಿಗೊಬ್ಬರು ಸಾಥ್ ನೀಡಿದ್ದರು. ಇದೀಗ ಬಿಗ್ ಬಾಸ್ ಮನೆಯಿಂದ 6 ವಾರಕ್ಕೆ ಸಾನ್ಯ ಎಲಿಮಿನೇಟ್ ಆಗಿರೋದು ರೂಪೇಶ್‌ಗೆ ನುಂಗಲಾರದ ತುತ್ತಾಗಿದೆ. ಸಾನ್ಯ ಎಲಿಮಿನೇಟ್ ಬೆನ್ನಲ್ಲೇ ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದರು.
View this post on Instagram
ಸಾನ್ಯ ತನ್ನ ಲೈಫ್ ಎಷ್ಟು ಮುಖ್ಯ ಎಂಬುದನ್ನ ತಮ್ಮ ಮಾತುಗಳ ಮೂಲಕ ರೂಪೇಶ್ ತಿಳಿಸಿದ್ದರು. ಈ ಬೆನ್ನಲ್ಲೇ ಸಾನ್ಯ, ರೂಪೇಶ್ ಬಗ್ಗೆ ಭಾವುಕರಾಗಿದ್ದಾರೆ. ತಮ್ಮ ಮನದ ಮಾತನ್ನ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಝೈದ್ ಖಾನ್ ಜೊತೆ `ಬನಾರಸ್’ ವೀಕ್ಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
ಬದಲಾಗಲು ಸಾಧ್ಯವೇ ಇಲ್ಲ ರೂಪಿ. ಎಂದಿಗೂ ಆ ಮುದ್ದು ನಗುವಾಗಿ ನಿನ್ನಲ್ಲಿ ನಾನು. ಇದು ಅಂತರವಲ್ಲ ನಮ್ಮ ಮನಸ್ಸು ಇನ್ನೂ ಹತ್ತಿರ. ನಿನ್ನ ಶಕ್ತಿಯಾಗಿರಲು ಯಾವಾಗಲೂ ಶ್ರಮಿಸುತ್ತೇನೆ. ನನ್ನ ರಾಕ್‌ಸ್ಟಾರ್ ಎಂದು ರೂಪೇಶ್ ಬಗ್ಗೆ ಸಾನ್ಯ ಬರೆದುಕೊಂಡಿದ್ದಾರೆ. ಮತ್ತೆ ದೊಡ್ಮನೆಗೆ ಹೋಗಲು ಸಾನ್ಯಗೆ ಅವಕಾಶ ಸಿಗಬೇಕು ಅಂತಾ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡ್ತಿದ್ದಾರೆ.