ಹೈದರಾಬಾದ್: ಭಾರತ್ ಜೋಡೋ (Bharat Jodo Yatra) ಯಾತ್ರೆಯಲ್ಲಿರುವ ಕಾಂಗ್ರೆಸ್ (Congress) ಮುಖಂಡ ರಾಹುಲ್ ಗಾಂಧಿ (Rahul Gandhi) ಚಾಟಿಯಲ್ಲಿ (Whip) ಹೊಡೆದುಕೊಂಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕಾಂಗ್ರೆಸ್‍ನ ಭಾರತ್ ಜೋಡೋ ಯಾತ್ರೆ 58ನೇ ದಿನಕ್ಕೆ ಕಾಲಿಟ್ಟಿದೆ. ಕರ್ನಾಟಕದ ಬಳಿಕ ಇದೀಗ ತೆಲಂಗಾಣದಲ್ಲಿ (Telangana) ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ಸಾಗುತ್ತಿದೆ. ತೆಲಂಗಾಣ 19 ಅಸೆಂಬ್ಲಿ ಮತ್ತು 7 ಸಂಸದೀಯ ಕ್ಷೇತ್ರಗಳನ್ನು ದಾಟಿ ನವೆಂಬರ್ 7 ರಂದು ಮಹಾರಾಷ್ಟ್ರವನ್ನು ಪ್ರವೇಶಿಸಲಿದೆ. ಇದನ್ನೂ ಓದಿ: Breaking-ಭಾರತ್ ಜೋಡೋ ಯಾತ್ರೆಗೆ ಕೆಜಿಎಫ್ ಮ್ಯೂಸಿಕ್ ಬಳಕೆ : ರಾಹುಲ್ ವಿರುದ್ಧ ಎಫ್ಐಆರ್
सभी परंपराओं का सम्मान, इसलिए तो भारत महान! pic.twitter.com/9VZlAuDOq1
— Srinivas BV (@srinivasiyc) November 4, 2022
ಈ ನಡುವೆ ನಿನ್ನೆ ತೆಲಂಗಾಣದಲ್ಲಿ ಸಾಂಪ್ರದಾಯಿಕ ಬೋನಾಲು ಹಬ್ಬವಿತ್ತು. ಈ ಹಬ್ಬದಲ್ಲಿ ಮಹಿಳೆಯರು ‘ಪೋತರಾಜು’ ಅವತಾರದ ಪುರುಷರೊಂದಿಗೆ ದೇವಸ್ಥಾನಗಳಿಗೆ ಮೆರವಣಿಗೆಯಲ್ಲಿ ನಡೆದುಕೊಂಡು ಹೋಗುತ್ತಾರೆ. ‘ಪೋತರಾಜು’ ಅವತಾರದ ಪುರುಷ ಜೋರಾಗಿ ಡೋಲು ಬಾರಿಸುತ್ತಿದ್ದಂತೆ ಮೈಮೇಲೆ ಚಾಟಿಯಿಂದ ಹೊಡೆದುಕೊಂಡು ನೃತ್ಯ ಮಾಡುತ್ತಾರೆ. ಹೀಗೆ ರಾಹುಲ್ ಗಾಂಧಿ ಕೂಡ ಚಾಟಿಯಲ್ಲಿ ಬೆನ್ನಿಗೆ ಹೊಡೆದುಕೊಂಡಿದ್ದಾರೆ. ಇದನ್ನೂ ಓದಿ: ED ಪ್ರಕರಣದಲ್ಲಿ ಬಂಧನದ ಭೀತಿ – ಮಧ್ಯಂತರ ರಕ್ಷಣೆ ಕೋರಿ ಡಿಕೆಶಿ ಕೋರ್ಟ್ ಮೊರೆ
ಇಂದು ಒಂದು ದಿನ ಭಾರತ್ ಜೋಡೋ ಯಾತ್ರೆಗೆ ವಿರಾಮವನ್ನು ನೀಡಲಾಗಿತ್ತು. ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದ್ದು, ಯಾತ್ರೆಯು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಯಾತ್ರೆಯು 3,500 ಕಿ.ಮೀ ದೂರವನ್ನು ಕ್ರಮಿಸುತ್ತಿದ್ದು 12 ರಾಜ್ಯಗಳನ್ನು ಹಾದುಹೋಗಲಿದೆ.