ತುಮಕೂರು: ನೋಡನೋಡುತ್ತಲೇ ಟೆಂಪೋ ಟ್ರಾವೆಲರ್ (Tempo Traveller) ಒಂದು ಧಗಧಗನೆ ಹೊತ್ತಿ ಉರಿದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬಿದನಗೆರೆ ಕ್ರಾಸ್ ಬಳಿ ನಡೆದಿದೆ.
ಹಾಸನ (Hassan) ದಿಂದ ಬೆಂಗಳೂರಿಗೆ (Bengaluru) ತೆರಳುತ್ತಿದ್ದ ಟಿಟಿ ವಾಹನದಲ್ಲಿ ಮಗು ಸೇರಿ ಒಟ್ಟು ಹತ್ತು ಮಂದಿ ಇದ್ದರು. ಈ ವೇಳೆ ಸ್ವಲ್ಪ ಯಾಮಾರಿದ್ರೂ ಕೂತಲ್ಲೇ ಹತ್ತು ಜನ ಸುಟ್ಟು ಕರಕಲಾಗಬೇಕಿತ್ತು. ಆದರೆ ಸ್ವಲ್ಪದರಲ್ಲೇ ಬಹು ದೊಡ್ಡ ಅನಾಹುತವೊಂದು ತಪ್ಪಿದೆ. ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತ ಜಸ್ಟ್ ಮಿಸ್ ಆಗಿದೆ.
ಎಂಜಿನ್ (Engine Fire) ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಟಿಟಿ ನಿಲ್ಲಿಸಿ ಚಾಲಕ ಎಲ್ಲರನ್ನೂ ಕೆಳಗಿಳಿಸಿದ್ದರು. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದನ್ನೂ ಓದಿ: ತಂದೆಗೆ ಬೈದನೆಂದು ಯುವಕನಿಗೆ ಚಾಕುವಿನಿಂದ ಇರಿದ!
ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.