ಕಾರಿಗೆ ಒರಗಿದ್ದಕ್ಕೆ ಬಾಲಕನ ಎದೆಗೆ ಒದ್ದ ವ್ಯಕ್ತಿ ಬಂಧನ

Public TV
2 Min Read
kerala boy car

ತಿರುವನಂತಪುರಂ: ತನ್ನ ಕಾರಿಗೆ (Car) ಒರಗಿ ನಿಂತಿದ್ದ 6 ವರ್ಷದ ಬಾಲಕನಿಗೆ (Boy) ಕಾರಿನ ಚಾಲಕ ಕಾಲಿನಿಂದ ಎದೆಗೆ ಒದ್ದಿರುವ ಅಮಾನವೀಯ ಘಟನೆ ಕೇರಳದಲ್ಲಿ (Kerala) ನಡೆದಿದೆ. ಬಾಲಕನಿಗೆ ಒದ್ದಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಕೇರಳದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ವೈರಲ್ ಆಗಿರುವ ವೀಡಿಯೋದಲ್ಲಿ 6 ವರ್ಷದ ಬಾಲಕನೊಬ್ಬ ಕಾರಿಗೆ ಒರಗಿ ನಿಂತಿರುವುದು ಕಂಡುಬಂದಿದೆ. ಇದನ್ನು ಗಮನಿಸಿ, ಕಾರಿನಿಂದ ಹೊರಗೆ ಬಂದ ವ್ಯಕ್ತಿ, ಬಾಲಕನಿಗೆ ಗದರಿ, ಎದೆಗೆ ಕಾಲಿನಿಂದ ಒದ್ದಿದ್ದಾನೆ. ಏನೂ ತಿಳಿಯದ ಬಾಲಕ ಸದ್ದಿಲ್ಲದೆ ಅಲ್ಲಿಂದ ದೂರ ಸರಿದಿದ್ದಾನೆ. ಬಳಿಕ ವ್ಯಕ್ತಿ ಮತ್ತೆ ಕಾರಿನೊಳಗೆ ಹೋಗಲು ಮುಂದಾದಾಗ ಈ ಎಲ್ಲಾ ಘಟನೆಯನ್ನು ವೀಕ್ಷಿಸಿದ ಸ್ಥಳೀಯರು ಆತನನ್ನು ಸುತ್ತುವರಿದಿದ್ದಾರೆ ಹಾಗೂ ಚಾಲಕನನ್ನು ಪ್ರಶ್ನಿಸುವುದು ವೀಡಿಯೋದಲ್ಲಿ ಕಂಡುಬಂದಿದೆ.

ARREST

ವರದಿಗಳ ಪ್ರಕಾರ ಬಾಲಕ ರಾಜಸ್ಥಾನದ ವಲಸೆ ಕಾರ್ಮಿಕರ ಕುಟುಂಬದವನು ಎಂಬುದು ತಿಳಿದುಬಂದಿದೆ. ಘಟನೆಯ ಕುರಿತು ಪ್ರತ್ಯಕ್ಷದರ್ಶಿ ವಕೀಲರೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ಪೊನ್ನಿಯಂಪಾಲಂ ನಿವಾಸಿ ಶಿಹಶಾದ್ ವಿರುದ್ಧ ಪ್ರಕರಣ ದಾಖಲಾಗಿದೆ. ಶಿಹಶಾದ್‌ನನ್ನು ಠಾಣೆಗೆ ಕರೆಸಿದರೂ ತಕ್ಷಣಕ್ಕೆ ಬಿಡುಗಡೆ ಮಾಡಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಬಳಿಕ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲ ಸುದ್ದಿ ವಾಹಿನಿಗಳು ಕೂಡಾ ಇದನ್ನು ವರದಿ ಮಾಡಿದ ಬಳಿಕ ಪೊಲೀಸರು ಆರೋಪಿಯ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಶುಕ್ರವಾರ ಬೆಳಗ್ಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಲಶ್ಶೇರಿ ಶಾಸಕ ಎಎನ್ ಶಂಸೀರ್ ಹೇಳಿದ್ದಾರೆ. ಇದನ್ನೂ ಓದಿ: ಈ ಹೊತ್ತಲ್ಲಿ ಯಾಕೋ ಬಂದಿದ್ದೀಯಾ ಅಂತಾ ಚಂದ್ರುನನ್ನು ವಿನಯ್ ಗುರೂಜಿ ಪ್ರಶ್ನಿಸಿದ್ರು: ಆಶ್ರಮದ ಸಿಬ್ಬಂದಿ

Police Jeep

ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ರಾಜ್ಯ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ, ಮಾನವೀಯತೆ ಎಂದರೆ ಅಂಗಡಿಯಿಂದ ಖರೀದಿಸುವ ವಸ್ತು ಅಲ್ಲ. ಕಾರಿಗೆ ಒರಗಿದ್ದಕ್ಕಾಗಿ 6 ವರ್ಷದ ಮಗುವನ್ನು ಒದೆಯುವುದು ಎಷ್ಟು ಕ್ರೂರವಾಗಿದೆ. ಈ ಬಗ್ಗೆ ಎಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದು ಫೇಸ್‌ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಹಾರವನ್ನು ಪಾಕಿಸ್ತಾನ ಮಾಡಬೇಡಿ – ನಿತೀಶ್ ಕುಮಾರ್ ವಿರುದ್ಧ ಬಿಜೆಪಿ ಗರಂ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *