ನಿಮ್ಮ ಜೀವನಶೈಲಿ ಉತ್ತಮವಾಗಿರಬೇಕೆ? ನಿತ್ಯ ಹೀಗೆ ಮಾಡಿ..

Public TV
2 Min Read
happy 1

ಪ್ರತಿಯೊಬ್ಬರೂ ಜೀವನದಲ್ಲಿ ಆರೋಗ್ಯ, ಸಂತೋಷ, ನೆಮ್ಮದಿಯಿಂದ ಇರಬೇಕು ಅಂತಾ ಬಯಸುತ್ತಾರೆ. ಆದರೆ ಈ ಒತ್ತಡದ ಆಧುನಿಕ ಜೀವನ ವಿಧಾನದಿಂದ ಒಂದಿದ್ದರೆ ಮತ್ತೊಂದು ಇರಲ್ಲ ಎನ್ನುವಂತಾಗಿದೆ. ಕೆಲವರಿಗೆ ಜೀವನದಲ್ಲಿ ಎಲ್ಲಾ ಇದ್ದರೂ ನೆಮ್ಮದಿ ಇರಲ್ಲ. ಇನ್ನೂ ಕೆಲವರಿಗೆ ಖುಷಿಯ ಜೀವನ ಎಂಜಾಯ್‌ ಮಾಡಲು ಆರೋಗ್ಯವೇ ಇರಲ್ಲ.

ನಿಮ್ಮ ಜೀವನಶೈಲಿ ಉತ್ತಮವಾಗಿರಬೇಕೆ? ಪ್ರತಿನಿತ್ಯ ಕೆಲವು ಆರೋಗ್ಯಕರ ಹವ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ನಿತ್ಯ ನೀವು ಹೀಗೆ ಮಾಡಿದರೆ ನಿಮಗೆ ಖಂಡಿತವಾಗಿ ದೈಹಿಕ ಮತ್ತು ಮಾನಸಿಕವಾಗಿ ವಿಶೇಷ ಅನುಭೂತಿ ಸಿಗುತ್ತದೆ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

water

ಬೆಳಗ್ಗೆ ಎದ್ದು ಒಂದು ಲೋಟ ನೀರು ಕುಡಿಯಿರಿ
ನಿತ್ಯ ಬೆಳಗ್ಗೆ ಎದ್ದಾಕ್ಷಣ ಮಿಸ್‌ ಮಾಡದೇ ಒಂದು ಲೋಟ ನೀರು ಕುಡಿಯಿರಿ. ಇದು ದೇಹವನ್ನು ಹೈಡ್ರೇಟ್‌ ಮಾಡುತ್ತದೆ. ದೇಹದಲ್ಲಿನ ಕಲ್ಮಶಗಳು ಹೊರಗೆ ಹೋಗಲು ನೆರವಾಗುತ್ತದೆ.

writing 1

ನಿತ್ಯ ಒಮ್ಮೆ ಏನನ್ನಾದರೂ ಬರೆಯಿರಿ
ಪ್ರತಿದಿನ ಒಮ್ಮೆ ಏನನ್ನಾದರೂ ಬರೆಯುವ ಹವ್ಯಾಸ ರೂಢಿಸಿಕೊಳ್ಳಿ. ಕನಿಷ್ಠಪಕ್ಷ 5 ನಿಮಿಷ ನಿಮಗೆ ತೋಚಿದ್ದನ್ನು ಗೀಚಿ. ನಿಮ್ಮ ಭಾವನೆ ಅಥವಾ ನಿಮ್ಮ ಕೆಲಸದ ವೇಳಾಪಟ್ಟಿ ಹೀಗೆ ಏನನ್ನಾದರೂ ಬರೆಯಿರಿ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

things

ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದಿರಿ
ನೀವು ದಿನ ಬಳಸುವ ವಸ್ತುಗಳನ್ನು ನಿಗದಿತ ಸ್ಥಳಗಳಲ್ಲಿ ಇಟ್ಟುಕೊಳ್ಳಿ. ಅವುಗಳನ್ನು ಎಲ್ಲೆಂದರಲ್ಲಿ ಅಸ್ತವ್ಯಸ್ತವಾಗಿ ಬಿಸಾಡಬೇಡಿ. ತುರ್ತು ಸಂದರ್ಭದಲ್ಲಿ ವಸ್ತುಗಳು ನಿಮ್ಮ ಕೈಗೆ ಥಟ್‌ ಅಂತಾ ಸಿಗಬೇಕಾದರೆ ಈ ವಿಧಾನ ಸಹಕಾರಿಯಾಗಿದೆ.

meditation

ಧ್ಯಾನ ಅಥವಾ ಪ್ರಾರ್ಥನೆ ಮಾಡಿ
ಪ್ರತಿದಿನ ಧ್ಯಾನ ಅಥವಾ ಪ್ರಾರ್ಥನೆ ಮಾಡುವ ಹವ್ಯಾಸ ರೂಢಿಸಿಕೊಳ್ಳಿ. ಮನೆಯ ಪ್ರಶಾಂತ ವಾತಾವರಣದಲ್ಲಿ ಒಂದೆರಡು ನಿಮಿಷ ಧ್ಯಾನ, ಪ್ರಾರ್ಥನೆ ಮಾಡಿ. ಇದು ನಿಮ್ಮ ಮನಸ್ಸಿನ ಒತ್ತಡ ದೂರಾಗಿಸುತ್ತದೆ.

happiest people

ಸ್ನೇಹಿತರೊಂದಿಗೆ ಮಾತನಾಡಿ
ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ಭಾವನೆ, ಆಲೋಚನೆಗಳನ್ನು ಹಂಚಿಕೊಳ್ಳಿ. ಬಾಂಧವ್ಯದ ಮೌಲ್ಯ ಅರಿಯಲು ಈ ವಿಧಾನ ನಿಮಗೆ ತುಂಬಾ ಸಹಕಾರಿಯಾಗಿದೆ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

BOOK 1

ಪುಸ್ತಕ ಓದಿ
ನಿತ್ಯ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ. ದಿನಕ್ಕೆ ಇಷ್ಟು ಪುಟ ತಪ್ಪದೇ ಓದಬೇಕು ಎಂಬ ಧ್ಯೇಯ ಇರಬೇಕು. ಜ್ಞಾನ ಸಂಪಾದನೆಗೆ ಪುಸ್ತಕ ಓದು ಅತ್ಯವಶ್ಯ.

grateful

ಕೃತಜ್ಞ, ದಯೆ ಮನೋಭಾವ ಇರಲಿ
ನಿಮಗೆ ಸಹಾಯ ಮಾಡುವ, ನಿಮ್ಮ ಒಳಿತನ್ನೇ ಬಯಸುವವರಿಗೆ ಕೃತಜ್ಞರಾಗಿರಿ. ಅಲ್ಲದೇ ಇತರರ ಮೇಲೆ ದಯೆ ಮನೋಭಾವ ಬೆಳೆಸಿಕೊಳ್ಳಿ. ಇದು ಉತ್ತಮ ಜೀವನಶೈಲಿಯ ಸಕಾರಾತ್ಮಕ ಗುಣಗಳಲ್ಲಿ ಒಂದು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *