ಬೆಂಗಳೂರು: ನನ್ನ ಹೆಂಡತಿ (Wife) ಚಾಕುವಿನಿಂದ (Knife) ನನ್ನ ಮೇಲೆ ದಾಳಿ ನಡೆಸಿದ್ದಾಳೆ. ನನ್ನನ್ನು ಕಾಪಾಡಿ ಎಂದು ಬೆಂಗಳೂರಿನ (Bengaluru) ಯದುನಂದನ್ ಆಚಾರ್ಯ ಪ್ರಧಾನಿ ಕಾರ್ಯಾಲಯದ (PMO Office) ಮೊರೆ ಹೋಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನ್ನ ಮೇಲೆ ದಾಳಿ ಆಗಿದೆ. ಆದ್ರೆ ಬಹುಷಃ ನನಗೆ ಯಾರು ಹೆಲ್ಪ್ ಮಾಡಲ್ಲ. ಯಾಕಂದ್ರೆ ನಾನೊಬ್ಬ ಪುರುಷ. ನನ್ನ ಹೆಂಡತಿ ನನ್ನನ್ನು ಚಾಕುವಿನಿಂದ ಇರಿದಿದ್ದಾಳೆ. ಇದೇನಾ ನಾರಿ ಶಕ್ತಿ? ನನ್ನ ಕೈಯಲ್ಲಿ ರಕ್ತ ಬರ್ತಿದೆ. ನನ್ನ ಪತ್ನಿ ವಿರುದ್ಧ ಗೃಹ ಹಿಂಸೆ ಕೇಸ್ ದಾಖಲಿಸ್ತೀರಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕತ್ರಿನಾ ಕೈಫ್‌ಗೆ ಬೌಲಿಂಗ್ ಮಾಡಿದ ಹರ್ಭಜನ್ ಸಿಂಗ್ʼ
ಈ ಟ್ವೀಟ್ ಅನ್ನು ಪಿಎಂಒ, ಕೇಂದ್ರ ಮಂತ್ರಿ ಕಿರಣ್ ರಿಜಿಜು ಹಾಗೂ ಬೆಂಗಳೂರು ಪೊಲೀಸ್ ಕಮೀಷನರ್‌ಗೆ (Bangaluru Police Commissioner) ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಕಮೀಷನರ್, ಏನಾಯ್ತು ಎಂದು ಠಾಣೆಗೆ ಬಂದು ದೂರು ನೀಡಿ ಎಂದು ಪ್ರತಿಕ್ರಿಯಿಸಿದ್ದಾರೆ. ನೊಂದ ಪತಿಯರು ಯದುನಂದನ್ ಬೆಂಬಲಿಸಿ ಸಾಕಷ್ಟು ಟ್ವೀಟ್ ಮಾಡಿದ್ದಾರೆ.