ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿಯನ್ನು (Rally) ನಡೆಸಲಾಗುತ್ತಿದ್ದ ಟ್ರಕ್‌ನ (Truck) ಅಡಿಗೆ ಪತ್ರಕರ್ತೆಯೊಬ್ಬಳು (Journalist) ಸಿಲುಕಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ಪತ್ರಕರ್ತೆ ಟ್ರಕ್ ಅಡಿಗೆ ಸಿಲುಕುತ್ತಿದ್ದಂತೆ ರ‍್ಯಾಲಿಯನ್ನು ನಿಲ್ಲಿಸಲಾಗಿದೆ.
ಮೃತ ಪತ್ರಕರ್ತೆಯನ್ನು ಸ್ಥಳೀಯ ಸುದ್ದಿ ಚಾನೆಲ್ ಫೈವ್‌ನ ವರದಿಗಾರ್ತಿ ಸದಾಫ್ ನಯೀಮ್ ಎಂದು ಗುರುತಿಸಲಾಗಿದೆ. ಇಮ್ರಾನ್ ಖಾನ್ ಅವರ ರ‍್ಯಾಲಿ ಸಾಧೋಕೆ ಬಳಿ ಸಾಗುತ್ತಿದ್ದ ವೇಳೆ ವರದಿಗಾರ್ತಿ ನೆಲದ ಮೇಲೆ ಬಿದ್ದಿದ್ದಾಳೆ. ಈ ವೇಳೆ ಟ್ರಕ್ ಆಕೆಯ ಮೇಲೆ ಹರಿದಿದೆ.
ಘಟನೆಯ ಬಗ್ಗೆ ಟ್ವೀಟ್ ಮಾಡಿದ ಇಮ್ರಾನ್ ಖಾನ್, ಇಂದು ನಮ್ಮ ರ‍್ಯಾಲಿಯ ವೇಳೆ ವರದಿಗಾರ್ತಿ ಸದಾಫ್ ನಯೀಮ್ ಅವರ ಭೀಕರ ಅಪಘಾತ ನಮಗೆ ಆಘಾತ ತಂದಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೇನೆಯನ್ನು ಬಲಪಡಿಸುವುದೇ ನಮ್ಮ ಉದ್ದೇಶ: ಇಮ್ರಾನ್ ಖಾನ್
Shocked & deeply saddened by the terrible accident that led to the death of Channel 5 reporter Sadaf Naeem during our March today. I have no words to express my sorrow. My prayers & condolences go to the family at this tragic time. We have cancelled our March for today.
— Imran Khan (@ImranKhanPTI) October 30, 2022
ಘಟನೆಯ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಪರ್ವೇಜ್ ಇಲಾಹಿ ದುಃಖ ವ್ಯಕ್ತಪಡಿಸಿದ್ದು, ಮೃತಳ ಕುಟುಂಬಕ್ಕೆ 25 ಲಕ್ಷ ರೂ. ಮೌಲ್ಯದ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಆಕೆಯ ಕುಟುಂಬದ ಸಂಪೂರ್ಣ ಕಾಳಜಿ ವಹಿಸುವುದಾಗಿ ಪಂಜಾಬ್ ಸರ್ಕಾರ ತಿಳಿಸಿದೆ. ಇದನ್ನೂ ಓದಿ: ತೂಗು ಸೇತುವೆ ದುರಂತ- ಸಾವಿನ ಸಂಖ್ಯೆ 132ಕ್ಕೆ ಏರಿಕೆ; ಸ್ಥಳಕ್ಕೆ ಮೋದಿ ಭೇಟಿ ನೀಡುವ ಸಾಧ್ಯತೆ