ಮನ್ ಕಿ ಬಾತ್‍ನಲ್ಲಿ ಬೆಂಗಳೂರಿನ ಸುರೇಶ್ ಕುಮಾರ್​ರನ್ನು ಪ್ರಶಂಸಿಸಿದ ಮೋದಿ

Public TV
3 Min Read
narendra modi suresh kumar

ನವದೆಹಲಿ: ಬೆಂಗಳೂರಿನ (Bengaluru) ಸಹಕಾರ ನಗರದಲ್ಲಿ (Sahakara Nagara) ಸಾವಿರಾರು ವೃಕ್ಷಗಳನ್ನು ನೆಟ್ಟು, ಪೋಷಿಸಿರುವ ಸುರೇಶ್ ಕುಮಾರ್ (Suresh Kumar) ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶ್ಲಾಘಿಸಿದ್ದಾರೆ.

ಇಂದು ಪ್ರಧಾನಿ ಮೋದಿ ಮನ್ ಕಿ ಬಾತ್ (Mann Ki Baat) ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಬೆಂಗಳೂರಿನ ಸುರೇಶ್ ಕುಮಾರ್ ಅವರಿಗೆ ಪರಿಸರದ ಮೇಲೆ ಇರುವ ಕಾಳಜಿ, ಹಾಗೂ ಕನ್ನಡ ನಾಡು ನುಡಿಯ ಬಗ್ಗೆ ಇರುವ ಅಭಿಮಾನವನ್ನು ಪ್ರಶಂಸಿದರು.

ಮೋದಿ ಹೇಳಿದ್ದೇನು?:ಕರ್ನಾಟಕದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸುರೇಶ್ ಕುಮಾರ್ ಅವರು ಸಹಕಾರ ನಗರದ ಅರಣ್ಯವನ್ನು ಪುನರುಜ್ಜೀವನಗೊಳಿಸಲು ಮುಂದಾಗಿದ್ದರು. ಆದರೆ ಇದು ಬಹಳ ಕಷ್ಟವಾದ ಕೆಲಸವಾಗಿತ್ತು. ಕಷ್ಟವಾದರೂ ಅದನ್ನು ಚಿಂತಿಸದೇ 20 ವರ್ಷಗಳ ಹಿಂದೆ ಸಹಕಾರ ನಗರದಲ್ಲಿ ಸಸಿಗಳನ್ನು ನೆಟ್ಟಿ ಅದನ್ನು ಪ್ರತಿನಿತ್ಯವೂ ಪೋಷಿಸಿದರು. ಇದೀಗ ಅವರ ಶ್ರಮದ ಪ್ರತಿಫಲವಾಗಿ ಆ ಸಸಿಗಳು 40 ಅಡಿ ಎತ್ತರದ ಬೃಹತ್ ಮರವಾಗಿ ಬೆಳೆದಿವೆ. 20 ವರ್ಷಗಳಲ್ಲಿ ಸುರೇಶ್ ಕುಮಾರ್ ಅವರು ಸುಮಾರು 2,000 ಗಿಡಗಳನ್ನು ನೆಟ್ಟಿದ್ದಾರೆ. ಪ್ರತಿಯೊಬ್ಬರು ಈ ಹಸಿರಿನ ಸೌಂದರ್ಯವನ್ನು ಮೆಚ್ಚುತ್ತಿದ್ದಾರೆ. ಇದು ಅಲ್ಲಿನ ನಿವಾಸಿಗಳಿಗೂ ಗರ್ವದ ಸಂಗತಿಯಾಗಿದೆ. ಇದನ್ನೂ ಓದಿ: ಒಟ್ಟು 9 ಸಾವಿರ ವ್ಯಾಗನ್ ಆರ್, ಸೆಲೆರಿಯೊ, ಇಗ್ನಿಸ್ ಕಾರುಗಳನ್ನು ಹಿಂದಕ್ಕೆ ಪಡೆದ ಮಾರುತಿ

ಇದರ ಜೊತೆಗೆ ಅವರಿಗೆ ಕನ್ನಡ, ನಾಡು-ನುಡಿಯ ಬಗ್ಗೆಯೂ ಅಪಾರವಾದ ಅಭಿಮಾನವಿದೆ. ಈ ಹಿನ್ನೆಲೆಯಲ್ಲಿವ ಕನ್ನಡ ಭಾಷೆಯನ್ನು ಇನ್ನೂ ಹೆಚ್ಚು ಮುನ್ನೆಲೆಗೆ ತರುವ ದೃಷ್ಟಿಯಿಂದ ಅವರು ಸಹಕಾರ ನಗರದಲ್ಲಿ ಬಸ್ ಸ್ಟ್ಯಾಂಡ್‍ನ್ನು ನಿರ್ಮಿಸಿದ್ದಾರೆ. ಆ ಬಸ್ ಸ್ಟ್ಯಾಂಡ್‍ಗೆ ಸುವರ್ಣ ಕರ್ನಾಟಕ ಬಸ್ ನಿಲ್ದಾಣ ಸಹಕಾರನಗರ ಎಂದು ಕನ್ನಡದಲ್ಲೇ ಹೆಸರನ್ನು ಬರೆಸಿದ್ದಾರೆ. ಅಲ್ಲಿ ಕನ್ನಡ, ನಾಡು ನುಡಿಯ ಬಗ್ಗೆ ಅರಿವು ಮೂಡಿಸುವ ಫಲಕಗಳನ್ನು ಅಚ್ಚುಕಟ್ಟಾಗಿ ಅಳವಡಿಸಿದ್ದಾರೆ. ಇಲ್ಲಿ ಕನ್ನಡ ಸಿನಿಮಾ, ಕನ್ನಡದ ಪ್ರಸಿದ್ಧ ಕವಿಗಳು, ರಾಜ್ಯಕ್ಕೆ ಸಂಬಂಧಿಸಿದ ಗಣ್ಯ ವಯ್ಕಿಗಳ ಚಿತ್ರಗಳನ್ನು ಅಳವಡಿಸಲಾಗಿದೆ. ಜೊತೆಗೆ ಈ ಬಸ್‍ನಿಲ್ದಾಣದಲ್ಲಿ ಕನ್ನಡ ಪತ್ರಿಕೆಗಳು ಲಭ್ಯವಿದ್ದು, ಈ ಮೂಲಕ ಕನ್ನಡನಾಡು, ನುಡಿಯ ಹಿರಿಮೆಯನ್ನು ಪಸರಿಸುತ್ತಿದ್ದಾರೆ. ಇದನ್ನೂ ಓದಿ: ಭೀಕರ ಅಪಘಾತ – ಬೆಂಗಳೂರಿನ ರಸ್ತೆಗುಂಡಿಗೆ ಮತ್ತೊಬ್ಬ ಯುವಕ ಬಲಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *