ದೊಡ್ಮನೆಯ ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಕಷ್ಟು ರೋಚಕ ತಿರುವುಗಳನ್ನು ಪಡೆದುಕೊಂಡು 5ನೇ ವಾರದತ್ತ ಮುನ್ನುಗ್ಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ (Bigg Boss House) ಆತ್ಮೀಯರಾಗಿ ಗುರುತಿಸಿಕೊಂಡಿದ್ದ ಕಾವ್ಯಶ್ರೀ (Kavyashree) ಮತ್ತು ರಾಕೇಶ್ ಅಡಿಗ (Rakesh Adiga) ಮಧ್ಯೆ ಅಸಮಾಧಾನದ ಹೊಗೆಯಾಡುತ್ತಿದೆ. ಕಾವ್ಯ ವಿರುದ್ಧ ರಾಕೇಶ್ ಫುಲ್ ಗರಂ ಆಗಿದ್ದಾರೆ.
ಓಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ರಾಕೇಶ್ ಸ್ಮಾರ್ಟ್ ಗೇಮ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಸದಾ ಮಹಿಳಾ ಸ್ಪರ್ಧಿಗಳ ಜೊತೆಯಿರುವ ರಾಕೇಶ್, ಮನೆಯ ಮಹಿಳಾ ಮಣಿಯರ ಫೇವರೇಟ್ ಎಂದರೆ ತಪ್ಪಾಗಲಾರದು. ಇತ್ತೀಚೆಗಷ್ಟೇ ಅಮೂಲ್ಯ(Amulya Gowda) ಜೊತೆ ರಾಕಿ ಇರೋದನ್ನ ನೋಡಿ, ನನ್ನ ಅಣ್ಣ ಕೈತಪ್ಪಿ ಹೋದ ಎಂದು ಹಾಸ್ಯಮಯವಾಗಿ ಎಲ್ಲರನ್ನೂ ಕಾವ್ಯ ರಂಜಿಸಿದ್ದರು. ಇಷ್ಟೇಲ್ಲಾ ಆತ್ಮೀಯತೆ ಕಾವ್ಯ ಮತ್ತು ರಾಕಿ ನಡುವೆ ಇತ್ತು. ಈಗ ಕಾವ್ಯ ವಿರುದ್ಧ ರಾಕೇಶ್ ಸಿಡಿದೆದಿದ್ದಾರೆ.

ರಾಕಿ ಮಾತಿಗೆ ಕಾವ್ಯಶ್ರೀ ಕೂಡ ಖಾರವಾಗಿಯೇ ಉತ್ತರ ನೀಡಿದ್ದಾರೆ. ನಾನು ನಗೋದಕ್ಕೂ ನಿಮ್ಮ ಪರ್ಮಿಷನ್ ಕೇಳಬೇಕಾ ಎಂದು ಕಾವ್ಯಶ್ರೀ ಮಾತನಾಡಿದ್ದಾರೆ. ಇನ್ನೂ ಕಿಚ್ಚ ಸುದೀಪ್ ಅನುಪಸ್ಥಿತಿಯಲ್ಲಿ ನಾಲ್ಕನೇ ಎಲಿಮಿನೇಷನ್ ಭಿನ್ನವಾಗಿ ನಡೆದಿತ್ತು. ಮಯೂರಿ ಮನೆಯಿಂದ ಹೊರಬಂದಿದ್ದರು. ಈ ವಾರ ಯಾವ ಸ್ಪರ್ಧಿಗೆ ಆಟ ಕೊನೆಯಾಗುತ್ತೇ ಎಂಬುದನ್ನ ಕಾದುನೋಡಬೇಕಿದೆ.



