ಇಸ್ಲಾಮಾಬಾದ್: ಸತತ ಸೋಲಿನಿಂದ ಕಂಗೆಟ್ಟಿರುವ ಪಾಕಿಸ್ತಾನ (Pakistan) ಇನ್ನೊಂದೇ ವಾರದಲ್ಲಿ ಮನೆಗೆ ಬರಲಿದೆ. ಭಾರತ (India) ಕೂಡ ಸೆಮಿಫೈನಲ್ಸ್ ಬಳಿಕ ಮನೆಕಡೆಗೆ ನಡೆಯಲಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ (Shoaib Akhtar) ಭವಿಷ್ಯ ನುಡಿದಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ (T20 WorldCup) ಪಾಕಿಸ್ತಾನ ತಂಡದ ಪ್ರದರ್ಶನ ಕುರಿತು ಯುಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಪಾಕ್ ರಿಜ್ವಾನ್ ಹಿಂದಿಕ್ಕಿ ನಂ.1 ಪಟ್ಟಕ್ಕೆ ಏರಿದ ಸೂರ್ಯ
ಇದು ತುಂಬಾ ನಿರಾಶಾದಾಯಕ. ನಾನು ಈಗಾಗಲೇ ಹೇಳಿದ್ದೇನೆ. ಪಾಕಿಸ್ತಾನ ತಂಡವು ಇದೇ ವಾರದಲ್ಲಿ ತವರಿಗೆ ಮರಳಲಿದೆ. ಹಾಗೆಯೇ ಭಾರತ ಕೂಡ ಸೆಮಿಫೈನಲ್ ಹಂತದಲ್ಲಿ ಮನೆಗೆ ಹಿಂತಿರುಗಲಿದೆ. ಟೀಂ ಇಂಡಿಯಾ (Team India) ಸಹ ಅಷ್ಟು ಉತ್ತಮವಾಗಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಪಾಕ್ ಕ್ರಿಕೆಟ್ ಮಂಡಳಿಯು (PCB) ವಿಶ್ವಕಪ್‌ಗೆ ಅನರ್ಹ ಆಟಗಾರರನ್ನ ಆಯ್ಕೆ ಮಾಡಿದೆ ಎಂದು ದೂಷಿಸಿದ್ದಾರೆ. ಇದನ್ನೂ ಓದಿ: ಪಾಕ್‍ಗೆ ಮರ್ಮಾಘಾತ – 1 ರನ್‍ಗಳ ರೋಚಕ ಜಯ ಸಾಧಿಸಿದ ಜಿಂಬಾಬ್ವೆ
ಟಿ20 ವಿಶ್ವಕಪ್‌ನಲ್ಲಿ (T20 Wordcup) ಭಾರತದ ಎದುರು ಮಂಡಿಯೂರಿದ ಪಾಕ್ ತಂಡ 2ನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧವೂ ಸೋಲನ್ನು ಕಂಡಿದೆ. ಸತತ ಸೋಲಿನ ರುಚಿ ನೋಡಿದ ಪಾಕಿಸ್ತಾನ ಇದೀಗ ಅರ್ಹತಾ ಸುತ್ತಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿತ ಕಂಡಿದೆ.