SC-ST ಮೀಸಲಾತಿ ಹೆಚ್ಚಳ ಚುನಾವಣೆ ಸ್ಟಂಟ್: ಕುಮಾರಸ್ವಾಮಿ

Public TV
1 Min Read
HDK 1 1

ಬೆಂಗಳೂರು: ಎಸ್‍ಸಿ (SC)-ಎಸ್‍ಟಿ (ST) ಮೀಸಲಾತಿ ಹೆಚ್ಚಳ ಕೇವಲ ಚುನಾವಣೆ ಸ್ಟಂಟ್ ಅಂತ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಎಸ್‍ಸಿ-ಎಸ್‍ಟಿ ಮೀಸಲಾತಿ ನಮ್ಮ ಗಂಡೆದೆ ಸಿಎಂ ಬೊಮ್ಮಾಯಿ (Basavaraj Bommai) ಅವರಿಂದ ಮಾತ್ರ ಕೋಡೊಕೆ ಆಯ್ತು ಎಂಬ ಸಚಿವ ಅಶೋಕ್ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು, ಮೀಸಲಾತಿ ವಿಚಾರದಲ್ಲಿ ಈಗ ಏನಾಗಿದೆ. ಗಂಡೆದೆ ಮುಖ್ಯಮಂತ್ರಿ ಆಗಿದ್ದವರು ಎರಡು ವರ್ಷ ಯಾಕೆ ಮೀಸಲಾತಿ ಹೆಚ್ಚಳ ಮಾಡಲಿಲ್ಲ ಅಂತ ಪ್ರಶ್ನೆ ಮಾಡಿದರು.

BASAVARAJ BOMMAI.1png

ಇದೊಂದು ಚುನಾವಣೆ ಸ್ಟಂಟ್ ಅಷ್ಟೆ. ಎಸ್‍ಟಿ ಸಮುದಾಯಕ್ಕೆ ಮೀಸಲಾತಿ ಅಂತ ಕೊಟ್ಟವರು ದೇವೇಗೌಡರು ಮಾತ್ರ. ದೇವೇಗೌಡ (HD Devegowda) ಮುಂದೆ ಯಾವುದೇ ಗಂಡೆದೆ ಮುಖ್ಯಮಂತ್ರಿ ಇಲ್ಲ. ಚುನಾವಣೆ ಹತ್ತಿರ ಬಂದಾಗ ಮೀಸಲಾತಿ ಕೊಟ್ಟಿದ್ದಾರೆ ಅಂತ ಕಿಡಿಕಾರಿದರು.

HDK 1 1

ಇವರಿಗೆ ಗಂಡೆದೆ ಇದ್ದಿದ್ದರೆ ಶ್ರೀಗಳನ್ನ ಯಾಕೆ 252 ದಿನ ಧರಣಿ ಕೂರಿಸುತ್ತಿದ್ದರು ಎಂದು ಸರ್ಕಾರವನ್ನ ಪ್ರಶ್ನೆ ಮಾಡಿದರು. ಇನ್ನು ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯೆ ನೀಡುವ ವೇಳೆ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿದರು. ಇದನ್ನೂ ಓದಿ: ಭಾರತ್ ಜೋಡೋ ಯಶಸ್ಸಿನ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರಿಂದ ಟ್ರ್ಯಾಕ್ಟರ್ ಯಾತ್ರೆ

HDD

ಮೀಸಲಾತಿ ಹೆಚ್ಚಳಕ್ಕೆ ನಮ್ಮ ಸಹಕಾರವೂ ಇದೆ.ನಮ್ಮ ಸಹಕಾರದಿಂದ ಇವತ್ತು ಅವರ ಗಂಡೆದೆ ಹೊರ ಬಂದಿದೆ. ಇಲ್ಲದೆ ಹೋಗಿದ್ರೆ ಹೆಣ್ಣೆದೆ ಹೊರಗೆ ಬರ್ತಿತ್ತು ಎಂಬ ಪದ ಬಳಕೆ ಮಾಡಿದರು. ವಿಪಕ್ಷಗಳು ಸಹಕಾರ ಕೊಟ್ಟ ಕಾರಣ ಇವತ್ತು ಗಂಡೆದೆ ಹೊರಗೆ ಬಂದಿದೆ. ಇಲ್ಲದೆ ಹೋಗಿದ್ರೆ ಹೆಣ್ಣೆದೆ ಹೊರಗೆ ಬರ್ತಿತ್ತು ಎಂದು ವಿವಾದಿತ ಪದ ಬಳಕೆ ಮಾಡಿದ್ರು. ಬಳಿಕ ನನಗೆ ಹೆಣ್ಣು ಮಕ್ಕಳ ಬಗ್ಗೆ ಗೌರವ ಇದೆ ಎಂದು ಮಾತು ತೇಲಿಸಿದರು. ಇದನ್ನೂ ಓದಿ: KPCC ಯಲ್ಲಿ ಭಿನ್ನಮತ ಸ್ಫೋಟ – ಪುಷ್ಪಾ ಅಮರನಾಥ್ ವಜಾಕ್ಕೆ ಆಗ್ರಹ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *