ಮಹಿಳೆಯನ್ನು ಗುರಾಯಿಸಿದ್ದಕ್ಕೆ ಪೊಲೀಸರಿಂದ ಕಪಾಳಮೋಕ್ಷ – ಸೇಡಿಗೆ ವ್ಯಕ್ತಿ ಮಾಡಿದ್ದೇನು ಗೊತ್ತಾ?

Public TV
2 Min Read
new delhi 1

ನವದೆಹಲಿ: ಜನಪ್ರಿಯ ಖಾನ್ ಮಾರ್ಕೆಟ್‍ನಲ್ಲಿ (Delhi’s posh Khan Market) 23 ವರ್ಷದ ವ್ಯಕ್ತಿಯೊಬ್ಬ ತನ್ನ ಬೈಕ್‍ಗೆ ಬೆಂಕಿ ಹಚ್ಚಿ, ಆತನನ್ನು ಹಿಡಿಯಲು ಪ್ರಯತ್ನಿಸಿದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಜನರ ಗುಂಪಿನ ನಡುವೆ ಓಡಿ ಹೋಗುತ್ತಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

New delhi

ಭಾನುವಾರ ಈ ಘಟನೆ ನಡೆದಿದ್ದು, ಆರೋಪಿ ನದೀಮ್ ರೆಸ್ಟೋರೆಂಟ್ ಒಂದರಲ್ಲಿ ಉಪಹಾರ ತೆಗೆದುಕೊಂಡು ಹೋಗಲು ಮಾರುಕಟ್ಟೆಗೆ ಬಂದಿದ್ದನು. ಈ ವೇಳೆ ಉಪಹಾರ ಪ್ಯಾಕೆಟ್‍ಗಾಗಿ ಕಾಯುತ್ತಿದ್ದಾಗ ಜೋಡಿಯೊಂದು ಆತನ ಮುಂದೆ ಹೋಗಿದ್ದಾರೆ. ಈ ವೇಳೆ ತನ್ನನ್ನು ಗುರಾಯಿಸಿಕೊಂಡು ನೋಡುತ್ತಿದ್ದನು ಎಂದು ಆರೋಪಿಸಿ ಮಹಿಳೆ ಪೊಲೀಸ್ ಔಟ್‍ಪೋಸ್ಟ್‌ನಲ್ಲಿ ದೂರು ನೀಡಿದ್ದಾಳೆ. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ಸ್ವೀಟ್ ಆರ್ಡರ್ ಮಾಡಲು ಹೋಗಿದ್ದ ಮಹಿಳೆಗೆ 2 ಲಕ್ಷ ರೂ. ಪಂಗನಾಮ

ಯಾವುದೇ ಲಿಖಿತ ದೂರು ದಾಖಲಾಗದಿದ್ದರೂ, ಕರ್ತವ್ಯನಿರತದಲ್ಲಿದ್ದ ಪೊಲೀಸರಲ್ಲಿ ಒಬ್ಬ ನದೀಮ್‍ಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಕೋಪಗೊಂಡ ನದೀಮ್ ಮರುದಿನ ಹಿಂತಿರುಗಿ ತನ್ನ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ್ದಾನೆ. ಬೆಂಕಿ ಹೊತ್ತಿಕೊಂಡ ತಕ್ಷಣವೇ ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಆದರೆ ದ್ವಿಚಕ್ರ ವಾಹನದಿಂದ ಹೊತ್ತಿ ಉರಿದ ಬೆಂಕಿ ಹತೋಟಿಗೆ ಬರುವಷ್ಟರಲ್ಲಿ ಸಮೀಪದಲ್ಲಿಯೇ ಇದ್ದ ಅಂಗಡಿಯೊಂದರ ಪೀಠೋಪಕರಣಕ್ಕೆ ಬೆಂಕಿ ತಗುಲಿ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿದೆ.

ಈ ಕುರಿತಂತೆ ವಿಚಾರಣೆ ನಡೆಸಿದ ಪೊಲೀಸರು ನದೀಮ್ ಮದ್ಯದ ಅಮಲಿನಲ್ಲಿ ಈ ರೀತಿ ವರ್ತಿಸಿದ್ದಾನೆ. ಆದರೀಗ ಅವನನ್ನು ಬಂಧಿಸಲಾಗಿದೆ. ಈತ ಭಾರತೀಯ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಮತ್ತು ಲಾಜಿಸ್ಟಿಕ್ಸ್ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿಸಿದ್ದಾರೆ.

ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ನದೀಮ್ ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಕೊನೆಗೆ ಸಿಕ್ಕಿಹಾಕಿಕೊಂಡ ನದೀಮ್ ಅನ್ನು ಕರೆದುಕೊಂಡು ಪೊಲೀಸರು ಕರೆದುಕೊಂಡು ಹೋಗುವಾಗ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಡೆಂಗ್ಯೂ ರೋಗಿಗೆ ಡ್ರಿಪ್‍ನಲ್ಲಿ ಮೊಸಂಬೆ ಜ್ಯೂಸ್ ನೀಡಿದ್ದ ಆಸ್ಪತ್ರೆಗೆ ಇದೀಗ ಬುಲ್ಡೋಜರ್ ಭಯ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *