ಚಾಮರಾಜನಗರ: ನನಗೆ ಎರಡು ಮುಖವಿಲ್ಲ, ಇರುವುದು ಒಂದೇ ಮುಖ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (H.D.Kumarswamy) ಅವರಿಗೆ ಸಚಿವ ವಿ.ಸೋಮಣ್ಣ (V.Somanna) ಟಾಂಗ್ ನೀಡಿದ್ದಾರೆ.
ಮಹಿಳೆಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮಣ್ಣಗೆ ಎರಡು ಮುಖವಿದೆ ಎಂದು ಕುಮಾರಸ್ವಾಮಿ ಅವರು ಟೀಕಿಸಿದ್ದರು. ಈ ವಿಚಾರವಾಗಿ ಕೊಳ್ಳೇಗಾಲದಲ್ಲಿ (Kollegala) ಮಾಧ್ಯಮದವರೊಂದಿಗೆ ಮಾತನಾಡಿದ ಸೋಮಣ್ಣ ಅವರು, ಅವರು ದೊಡ್ಡವರು, ನಾನು ಮತ್ತು ಅವರು ಒಟ್ಟಿಗೆ ಕೆಲಸ ಮಾಡಿದವರು. ನನಗೆ ಎರಡು ಮುಖ ಇಲ್ಲ, ನನಗಿರುವುದು ಒಂದೇ ಮುಖ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಕಪಾಳಮೋಕ್ಷ ಪ್ರಕರಣಕ್ಕೆ ಟ್ವಿಸ್ಟ್- ಸಚಿವರು ನಂಗೆ ಹೊಡೆದಿಲ್ಲವೆಂದು ಮಹಿಳೆ ಸ್ಪಷ್ಟನೆ
ನನ್ನ ಜೀವನದಲ್ಲಿ ಬಡವರ ಬಗ್ಗೆ ಮಹಿಳೆಯರ ಬಗ್ಗೆ ಕೆಟ್ಟದಾಗಿ ನಡೆದುಕೊಂಡಿರುವ ಸಣ್ಣ ಉದಾಹರಣೆಯು ಇಲ್ಲ. ಆ ರೀತಿ ನಡೆದು ಕೊಂಡವನು ನಾನಲ್ಲ. ಪಕ್ಷದ ತೀರ್ಮಾನಕ್ಕೆ ನಾನು ಬದ್ದನಾಗಿರುತ್ತೇನೆ. ಸಣ್ಣ ಅಪಚಾರವನ್ನು ಮಾಡಿಲ್ಲ. ಹೆಣ್ಣು ಮಕ್ಕಳ ಬಗ್ಗೆ ಅಪಾರ ಗೌರವವಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ ಸೋಮಣ್ಣ