ಮುಂಬೈ: ಖ್ಯಾತ ರಿಯಲ್ ಎಸ್ಟೇಟ್ ಡೆವಲಪರ್ ಪರಸ್ ಪೋರ್ವಾಲ್ (57) ಇಂದು ಮುಂಬೈನ (Mumbai) ಕಟ್ಟಡವೊಂದರ 23ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾವಿಗೂ ಮುನ್ನ ಪರಸ್ ಪೋರ್ವಾಲ್ ಅವರು ಬರೆದಿದ್ದ ಡೆತ್ ನೋಟ್ ಜಿಮ್‍ನಲ್ಲಿ ಪತ್ತೆಯಾಗಿದ್ದು, ಅದರಲ್ಲಿ ನನ್ನ ಸಾವಿಗೆ ಯಾರು ಕಾರಣರಲ್ಲ. ಈ ಬಗ್ಗೆ ಯಾರೊಂದಿಗೂ ವಿಚಾರಣೆ ನಡೆಸುವುದು ಬೇಡ ಎಂದು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ದೀಪಾವಳಿಗೆ ಪ್ರಧಾನಿಯಿಂದ ಸಿಕ್ತು ಬಂಪರ್ ಆಫರ್- 75,000 ಯುವಕರಿಗೆ ಉದ್ಯೋಗ
ಮುಂಬೈನ (Mumbai) ಚಿಂಚ್‍ಪೋಕ್ಲಿ ರೈಲ್ವೆ ನಿಲ್ದಾಣದ (Chinchpokli railway station) ಬಳಿ ಇರುವ ಶಾಂತಿ ಕಮಲ್ ಹೌಸಿಂಗ್ ಸೊಸೈಟಿ (Shanti Kamal housing society) ಕಟ್ಟಡದಲ್ಲಿರುವ ಅವರ ನಿವಾಸದಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಪರಾಸ್ ಪೋರ್ವಾಲ್ ಜಿಮ್‍ನ ಬಾಲ್ಕನಿಯಿಂದ ಜಿಗಿದು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರಾಮ ಮಂದಿರವನ್ನು ಸ್ಫೋಟಿಸಲು PFI ಅಲ್ಲ, ರಾವಣ, ಜಿನ್ನಾ ವಂಶಸ್ಥರಿಂದಲೂ ಸಾಧ್ಯವಿಲ್ಲ: ಈಶ್ವರಪ್ಪ
ನಂತರ ಈ ಬಗ್ಗೆ ದಾರಿಹೋಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಾಗರಿಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಈ ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.