ಸಲಾರ್ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ : ಫಸ್ಟ್ ಲುಕ್ ಗೆ ಫ್ಯಾನ್ಸ್ ಫಿದಾ

Public TV
2 Min Read
FotoJet 71

ಲಾರ್ (Salar) ಸಿನಿಮಾ ತಂಡದಿಂದ ಖ್ಯಾತ ನಟ ಹಾಗೂ ನಿರ್ದೇಶಕ ಪೃಥ್ವಿರಾಜ್ (Prithviraj) ಸುಕುಮಾರನ್ ಅವರ ಜನ್ಮದಿನದ ಸಂದರ್ಭದಲ್ಲಿ, ಅವರ ಕ್ರೂರ ಪಾತ್ರದ ಫಸ್ಟ್ ಲುಕ್ (First Look) ಅನ್ನು ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ ಹೌಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಬಿಡುಗಡೆ ಮಾಡಿದೆ. ಈ ಅದ್ಭುತ ಪಾತ್ರ ಚಿತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸುವ ಭರವಸೆ ನೀಡಿದೆ.

salara 4

ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಈ ಚಿತ್ರವನ್ನು ಕೆಜಿಎಫ್ ಮಾಸ್ಟರ್ ಮೈಂಡ್‌ ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಸಲಾರ್ ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ನಟಿಸಿದ್ದಾರೆ ಮತ್ತು ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ ಹಾಗೂ ಮಧು ಗುರುಸ್ವಾಮಿ, ಜಗಪತಿ ಬಾಬು, ಈಶ್ವರಿ ರಾವ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆಕ್ಷನ್ ಥ್ರಿಲ್ಲರ್ ಎಂದು ಹೇಳಲಾದ ಈ ಚಿತ್ರವು ನಿರ್ದೇಶಕ ಪ್ರಶಾಂತ್ ನೀಲ್, ಪ್ರಭಾಸ್ ಮತ್ತು ಪೃಥ್ವಿರಾಜ್ ನಡುವಿನ ಮೊದಲ ಕಾಂಬಿನೇಷನ್‌ ಮತ್ತು ನೀಲ್ ಅವರ ಮೊದಲ ತೆಲುಗು ಸಾಹಸವಾಗಿದೆ. ತಮ್ಮ ಪಾತ್ರದ ಕುರಿತು ಪ್ರಭಾಸ್ (Prabhas) ಈಗಾಗಲೇ ಹೀಗೆ ಹೇಳಿದ್ದಾರೆ: “ನನ್ನ ಪಾತ್ರವು ಅತ್ಯಂತ ಹಿಂಸಾತ್ಮಕವಾಗಿದೆ, ಈ ರೀತಿಯ ಪಾತ್ರವನ್ನು ನಾನು ಈ ಮೊದಲು ಮಾಡಿಲ್ಲ.” ಇದನ್ನೂ ಓದಿ:ರೂಪೇಶ್-ಸಾನ್ಯ ಲವ್‌ಸ್ಟೋರಿಯಲ್ಲಿ ಹೊಸ ಟ್ವಿಸ್ಟ್: ಗುರೂಜಿ ಸೊಸೆಯಂತೆ ಸಾನ್ಯ

salara 3

ಪೃಥ್ವಿರಾಜ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿ ಮಾತನಾಡಿದ ಪ್ರಶಾಂತ್ ನೀಲ್ (Prashant Neel), ‘ಪೃಥ್ವಿರಾಜ್ ಪಾತ್ರವು ಸ್ನೇಹಿತ ಮತ್ತು ಶತ್ರುವನ್ನು ಆಳವಾಗಿ ಬಿಂಬಿಸುತ್ತದೆ. ಈ ಪಾತ್ರ ಪ್ರಭಾಸ್ ಪಾತ್ರಕ್ಕೆ ಸಮನಾಗಿದೆ. ನಾವು ಬಯಸಿದ ರೀತಿಯಲ್ಲಿ; ಈ ಪಾತ್ರವನ್ನು ಪ್ರಥ್ವಿರಾಜ್‌ ಮಾತ್ರ ಮಾಡಲು ಸಾಧ್ಯ. ಇದು ಹೊಸ ಅಲೆಯನ್ನು ಸೃಷ್ಟಿಸಲಿದೆ. ಈ ಹೊಸ ಅವತಾರದಲ್ಲಿ ಅಭಿಮಾನಿಗಳಿಗೆ ಅವರು ಇಷ್ಟವಾಗಲಿದ್ದಾರೆ.

salara 2

ಸಲಾರ್ 28 ಸೆಪ್ಟೆಂಬರ್ 2023 ರಂದು ತೆಲುಗು ಮತ್ತು ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳ ಡಬ್ಬಿಂಗ್ ಆವೃತ್ತಿಗಳಲ್ಲಿ ಥಿಯೇಟ್ರಿಕಲ್ ಬಿಡುಗಡೆಗೆ ನಿಗದಿಯಾಗಿದೆ. 50ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದೆ. ಸಲಾರ್ ತಂಡವು ಇತ್ತೀಚೆಗೆ 10 ಕೋಟಿ ವೆಚ್ಚದಲ್ಲಿ ಸಮುದ್ರದ ಮಧ್ಯದಲ್ಲಿ 20 ನಿಮಿಷಗಳ ಚೇಸಿಂಗ್ ಸೀಕ್ವೆನ್ಸ್ ಅನ್ನು ಚಿತ್ರೀಕರಿಸುತ್ತಿದೆ. ಭಾರತದಲ್ಲಿ ಮೊದಲ ಬಾರಿಗೆ, ಡಾರ್ಕ್ ಸೆಂಟ್ರಿಕ್ ಥೀಮ್ (ಡಿಸಿಟಿ) ತಂತ್ರಜ್ಞಾನವನ್ನು ಚಿತ್ರದ ಚಿತ್ರೀಕರಣಕ್ಕೆ ಬಳಸಲಾಗುತ್ತಿದೆ, ಇದನ್ನು ಬಳಸುತ್ತಿರುವ ಮೊದಲ ಭಾರತೀಯ ಚಲನಚಿತ್ರವಾಗಿದೆ.

salara 1

400 ಪ್ಲಸ್ ಕೋಟಿ ಬಜೆಟ್‌ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಸಲಾರ್ ಕೂಡ ಒಂದು. ಚಿತ್ರಕ್ಕೆ ಈಗಾಗಲೇ ಸಾಕಷ್ಟು ದೊಡ್ಡ ಭರವಸೆಯ ಗುರಿಯನ್ನು ಹಾಕಿಕೊಳ್ಳಲಾಗಿದೆ ಮತ್ತು ಇದು ಸಾಹಸದಿಂದ ತುಂಬಿದ ಮಾಸ್ ಆಕ್ಷನ್ ಚಿತ್ರವಾಗಲಿದೆ. ಇದು ಚಲನಚಿತ್ರದ ನಿರ್ಮಾಣದಲ್ಲಿ ಒಳಗೊಂಡಿರುವ ಎಲ್ಲಾ ದೊಡ್ಡ ವ್ಯಕ್ತಿಗಳ ಡೆಡ್ಲಿ ಕಾಂಬಿನೇಷನ್‌ ಸಹ ಕಾಣಿಸುತ್ತದೆ. ಬಾಹುಬಲಿ ನಾಯಕನ ಜತೆ ಕೆಜಿಎಫ್ ನಿರ್ದೇಶಕ, ನಿರ್ಮಾಪಕ ಮತ್ತು ತಂತ್ರಜ್ಞರ ಕ್ರಿಯಾತ್ಮಕ ಸಹಯೋಗವನ್ನು ಅಭಿಮಾನಿಗಳು ಖಂಡಿತವಾಗಿ ತಪ್ಪಿಸಿಕೊಳ್ಳಬಾರದು. ಖಂಡಿತವಾಗಿಯೂ ಇದು ಭಾರತೀಯ ಚಲನಚಿತ್ರೋದ್ಯಮಕ್ಕೆ ಹೊಸ ದಾಖಲೆಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *