ಲಕ್ನೋ: ಇದೇ ತಿಂಗಳ ಅಕ್ಟೋಬರ್ 12ರಂದು ನಾಪತ್ತೆಯಾಗಿದ್ದ 22 ವರ್ಷದ ವಿದ್ಯಾರ್ಥಿಯ (Student) ಶವ ಶನಿವಾರ ಉತ್ತರಪ್ರದೇಶ ಗ್ರೇಟರ್ ನೋಯ್ಡಾದ (Greater Noida) ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯ (Galgotias University) ಬಳಿಯ ಚರಂಡಿಯಲ್ಲಿ ಪತ್ತೆಯಾಗಿದೆ.
ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳಾಗಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಏನೆಂಬುದು ತಿಳಿಯಲಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ಧೋನಿ, ಕೊಹ್ಲಿಯನ್ನು ನೆನಪಿಸಿದ ಕೌರ್, ಮಂಧಾನ ಜೋಡಿ
ಈ ಕುರಿತು ಮಾಹಿತಿ ನೀಡಿರುವ ಹೆಚ್ಚುವರಿ ಎಸ್ಪಿ ವಿಶಾಲ್ ಪಾಂಡೆ, ಬಿಹಾರ ಪಾಟ್ನಾ ಮೂಲದ ವಿದ್ಯಾರ್ಥಿ ಅಕ್ಟೋಬರ್ 12ರಂದು ತನ್ನ ಸ್ನೇಹಿತರೊಂದಿಗೆ ಹೊರಗೆ ಹೋಗಿದ್ದರು. ಈ ಕುರಿತು ಮಾರನೆ ದಿನ ವಿದ್ಯಾರ್ಥಿಯ ತಾಯಿ ಹಾಗೂ ಚಿಕ್ಕಮ್ಮ ದಂಕೌರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿದ್ಯಾರ್ಥಿಗಾಗಿ ಪೊಲೀಸರು (UP Police) ಹುಡುಕಾಟ ನಡೆಸುತ್ತಿದ್ದಾಗ ವಿಶ್ವವಿದ್ಯಾನಿಲಯದಿಂದ 800 ಮೀಟರ್ ದೂರದಲ್ಲೇ ಇರುವ ಚರಂಡಿಯಲ್ಲಿ ಶವ ಪತ್ತೆಯಾಗಿದೆ. ವಿದ್ಯಾರ್ಥಿ ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ. ಶವ ಇದ್ದ ಜಾಗದಲ್ಲೇ ವಾಚ್ (Watch) ಹಾಗೂ ವಾಲೆಟ್ ಪತ್ತೆಯಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.