ಹುಬ್ಬಳ್ಳಿ: ಮನೆಯಲ್ಲಿ ಜಗಳ ಮಾಡಿಕೊಂಡು ಸಂಬಂಧಿಕರ ಮನೆಗೆ ಬಂದಿದ್ದ ವ್ಯಕ್ತಿಯೋರ್ವ ಮಟನ್ ಶಾಪ್‍ನಲ್ಲಿ ರಕ್ತದ ಮಡುವಿನಲ್ಲಿ ಅನುಮಾನಾಸ್ಪದವಾಗಿ ಸಾವಿನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ.
ಹುಬ್ಬಳ್ಳಿಯ ಮೆಹಬೂಬ್ ನಗರದಲ್ಲಿ (Mehaboob Nagar) ಈ ಘಟನೆ ನಡೆದಿದ್ದು, ಬೆಳಗಾವಿ (Belgavi) ಜಿಲ್ಲೆಯ ಸವದತ್ತಿ (Savadatti) ತಾಲೂಕಿನ ಬೆಳವಾಡಿ ಗ್ರಾಮದ ಅಶ್ವಾಕ್ ಬೇಪಾರಿ (52) ಮೃತ ವ್ಯಕ್ತಿ. ತನ್ನ ಮನೆಯವರ ಜೊತೆಗೆ ಜಗಳ ಮಾಡಿಕೊಂಡಿದ್ದ ಅಶ್ವಾಕ್ ಬೆಪಾರಿ ಹುಬ್ಬಳ್ಳಿ ತನ್ನ ಸಂಬಂಧಿಕರ ಮನೆ ಬಂದಿದ್ದ. ತನ್ನ ಸಂಬಂಧಿಕರ ಮಟನ್ ಶಾಪ್‍ನಲ್ಲಿ ಕೆಲಸ ಮಾಡಿಕೊಂಡಿದ್ದ. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಬಿಜೆಪಿ ಕಾರ್ಪೊರೇಟರ್ ಪತಿ ಮೇಲೆ ಪೌರಕಾರ್ಮಿಕರಿಂದ ಹಲ್ಲೆ
ಗುರುವಾರ ಸಂಜೆ ಅದೇ ಮಟನ್ ಶಾಪ್‍ನಲ್ಲಿ ಅಶ್ವಾಕ್ ಶವವಾಗಿದ್ದು, ಮೃತನ ಹೊಟ್ಟೆ ಹಾಗೂ ಕುತ್ತಿಗೆಯಿಂದ ತೀವ್ರ ರಕ್ತ ಸ್ರಾವವಾಗಿದೆ. ಕತ್ತಿಯಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಸಂಬಂಧಿಕರು ಪ್ರತಿಕ್ರಿಯೆ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರೇಪ್ ಮಾಡಿ ಬಾಲಕಿಯನ್ನು ಹತ್ಯೆಗೈದ – ಕಾಮುಕ ಕಾಂತರಾಜು ಗಲ್ಲಿಗೆ ಆಗ್ರಹ