ಬಿಗ್ ಬಾಸ್ (Bigg Boss House) ಮನೆಯಲ್ಲಿ ಸಂಖ್ಯೆ ನೋಡಿ ಭವಿಷ್ಯ ಹೇಳುವ ಮೂಲಕ ಹೈಲೆಟ್ ಆಗಿದ್ದ ಆರ್ಯವರ್ಧನ್ ಗುರೂಜಿ ನಂತರ ತುಟಿ, ಹಲ್ಲು, ಮೂಗು ನೋಡಿಯೂ ಭವಿಷ್ಯ ಹೇಳುತ್ತಿದ್ದರು. ಇದೀಗ ಮುಖದ ಮೇಲಿನ ಕಾವ್ಯಶ್ರೀ ಮಚ್ಚೆ ನೋಡಿ, ಗುರೂಜಿ ಭವಿಷ್ಯ ನುಡಿದಿದ್ದಾರೆ.
ದೊಡ್ಮನೆಯಲ್ಲಿ ಅಡುಗೆ, ಟಾಸ್ಕ್, ತಮ್ಮ ನೇರವಾದ ಮಾತಿನಿಂದ ಈಗಾಗಲೇ ಹೈಲೆಟ್ ಆಗಿರುವ ಗುರೂಜಿ(Aryavardhan Guruji) ಆಗಾಗ ಸ್ಪರ್ಧಿಗಳಿಗೆ ಭವಿಷ್ಯ ನುಡಿಯುತ್ತಾರೆ. ಕಳೆದ ಬಾರಿ ಅಮೂಲ್ಯಗೆ (Amulya Gowda) ತುಟಿ ನೋಡಿ ಭವಿಷ್ಯ ಹೇಳಿದ್ದರು ಇದೀಗ ಮಚ್ಚೆ ನೋಡಿ ಕಾವ್ಯಶ್ರೀ (Kavyashree Gowda) ಭವಿಷ್ಯ ಹೇಳಿರೋದು ನೋಡುಗರ ಗಮನ ಸೆಳೆಯುತ್ತಿದೆ.
ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಮಚ್ಚೆ ವಿಚಾರವಾಗಿ ಗುರೂಜಿ ಮತ್ತು ಕಾವ್ಯಶ್ರೀ (Kavyashree) ಮಧ್ಯೆ ದೊಡ್ಡ ಚರ್ಚೆ ನಡೆದಿದೆ. ತನ್ನ ಮುಖದ ಮೇಲೆ ಮಚ್ಚೆ ಬಂದಿದೆ ಅಂತಾ ಹೇಳಿದ್ದಕ್ಕೆ ನಿಮ್ಮನ್ನ ತುಂಬಾ ಜನ ಲೈನ್ ಹೊಡೀತಾರೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ. ಎಷ್ಟು ಜನಕ್ಕಾದರೂ ನೀನು ಬೀಳಬಹುದು ಅಥವಾ ನೀನು ಬೀಳಿಸಿಕೊಳ್ಳಬಹುದು. ಅದು ನಿನ್ನ ವೈಯಕ್ತಿಕ ಎಂದು ಗುರೂಜಿ ಹೇಳಿದ್ದಾರೆ. ಇದನ್ನೂ ಓದಿ:‘ಕಾಂತಾರ’ದ ಮೂಗುತಿ ಸುಂದರಿಗೆ ಮೂಗು ಚುಚ್ಚಲು ಹೇಳಿದ್ದು ಅದೇ ಶೆಟ್ರು
ಓಹ್, ಹೌದಾ ಆಗಲಿ ಬಿಡಿ. ಚೆನ್ನಾಗಿರೋರನ್ನ ನೋಡಿ ಮದುವೆ ಆಗುತ್ತೇನೆ ಎಂದು ಭವಿಷ್ಯ ನುಡಿದಿದ್ದಾರೆ. ಗುರೂಜಿ ಅವರ ಮಚ್ಚೆ ಶಾಸ್ತ್ರಕ್ಕೆ ಕಾವ್ಯಶ್ರೀ ಖುಷಿಯಿಂದಲೇ ಪ್ರತಿಯುತ್ತರ ನೀಡಿದ್ದಾರೆ. ಇನ್ನೂ ಈ ವಾರದ ಟಾಸ್ಕ್‌ನಲ್ಲಿ ನಿಧಿ ಶೋಧಕಿಯಾಗಿ ಕಾವ್ಯಶ್ರೀ ಗುರುತಿಸಿಕೊಂಡಿದ್ದರು. ಟಾಪ್ 3 ಹಂತದವರೆಗೂ ಕ್ಯಾಪ್ಟೆನ್ಸಿಗೆ ಪೈಪೋಟಿ ಕೊಟ್ಟಿದ್ದರು. ಆದರೆ ಕಡೆಯ ಹಂತದಲ್ಲಿ ರೇಸ್‌ನಿಂದ ಹೊರಬಿದ್ದರು.