ಬೆಂಗಳೂರು: ಆ್ಯಪ್ (App) ಆಧಾರಿತ ಆಟೋ (Auto) ಸೇವೆ ರದ್ದು ಮಾಡಿದ ಸರ್ಕಾರದ ಆದೇಶ ಪ್ರಶ್ನಿಸಿ ಓಲಾ (Ola), ಉಬರ್ (Uber) ಕಂಪನಿಗಳು ಹೈಕೋರ್ಟ್ (High Court) ಮೊರೆ ಹೋಗಿವೆ.
ಸಾರಿಗೆ ಇಲಾಖೆ ಕ್ರಮ ಸರಿ ಇಲ್ಲ, ನಾವು ಯಾವುದೇ ರೀತಿಯಲ್ಲಿ ಹಣವನ್ನು ಹೆಚ್ಚಿಗೆ ಪಡೆಯುತ್ತಿಲ್ಲ. ನಮ್ಮ ಕಂಪನಿಯಿಂದ ಐಷಾರಾಮಿ ಕ್ಯಾಬ್ ಓಡಿಸಲಾಗುತ್ತಿದೆ. ಇದಕ್ಕೆ ನಾವು ಸರ್ವೀಸ್ ಚಾರ್ಜ್ ತೆಗದುಕೊಳ್ತಾ ಇದ್ದೇವೆ ಅಷ್ಟೇ. ಆದ್ರೇ ಅದನ್ನು ತಪ್ಪು ಅಂತ ಸಾರಿಗೆ ಇಲಾಖೆ ವಾದಿಸ್ತಾ ಇದೆ. ನಾವು ಕೂಡ ಫುಡ್ ಡೆಲಿವರಿ ಆ್ಯಪ್‍ಗಳಂತೆ ಸಂದರ್ಭಕ್ಕೆ ಅನುಸಾರವಾಗಿ, ಒತ್ತಡ, ಬೇಡಿಕೆ ಹೆಚ್ಚಿದ್ದಾಗ ಕೆಲವು ಬದಲಾವಣೆ ಮಾಡ್ತೀವಿ ಎಂದು ಕೋರ್ಟ್‍ನಲ್ಲಿ ವಾದ ಮಂಡಿಸಿವೆ. ಸಾರಿಗೆ ಇಲಾಖೆ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ನ್ಯಾಯಾಲಯವನ್ನು ಕೋರಿವೆ. ಇದನ್ನೂ ಓದಿ: ಶಾಸಕ ಉದಯ್ ಗರುಡಾಚಾರ್‌ಗೆ ಜೈಲು ಶಿಕ್ಷೆ- ಅದೇ ಕೋರ್ಟ್‍ನಿಂದ ಜಾಮೀನು
ಆಟೋ ರಿಕ್ಷಾಗಳು ಐಷಾರಾಮಿ ಪಟ್ಟಿಯಲ್ಲಿ ಬರುತ್ತಾ ಅಂತ ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ ಪ್ರಶ್ನಿಸಿದ್ದಾರೆ. ಅಲ್ಲದೇ, ನಿಮಗೆ ಸರ್ಕಾರದ ಪರವಾನಗಿ ಇಲ್ಲದೇ ಹೋದರೆ ನೀವು ಆಟೋ ಸೇವೆ ನೀಡವಂತಿಲ್ಲ. ಸಾರ್ವಜನಿಕರು ಇದರಿಂದ ಸಮಸ್ಯೆಗಳನ್ನು ಎದುರಿಸಬಾರದು. ಸರ್ಕಾರ ಮತ್ತು ಕಂಪನಿ ಕುಳಿತು ಕೆಲವೊಂದು ತೀರ್ಮಾನ ಮಾಡೋದು ಉತ್ತಮ. ಅಲ್ಲಿಯವರೆಗೂ ಕಂಪನಿಗಳು ಸಬ್ ಚಾರ್ಜ್ ವಿಧಿಸಬಾರದು. ಸರ್ಕಾರ ಕೂಡ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಮೌಖಿಕ ಆದೇಶ ನೀಡಿ ನಾಳೆಗೆ ವಿಚಾರಣೆ ಮುಂದೂಡಿದ್ರು. ಇನ್ನೊಂದೆಡೆ, ಇವತ್ತು ಸಭೆ ನಡೆಸಿದ ಸಾರಿಗೆ ಇಲಾಖೆಯ ಅಧಿಕಾರಿಗಳು, ಆಟೋ, ಕ್ಯಾಬ್‍ಗಳ ಓಡಾಟ, ಕಿ.ಮೀಗೆ ವಿಧಿಸುತ್ತಿರುವ ದರದ ಬಗ್ಗೆ ಲಿಖಿತ ಮಾಹಿತಿ ನೀಡುವಂತೆ ಕಂಪನಿಗಳಿಗೆ ಸೂಚಿಸಿದೆ. ಇದನ್ನೂ ಓದಿ: ಕೇರಳ ನರಬಲಿ ಪ್ರಕರಣ – ನರಭಕ್ಷಕರ ಜಾಡು ಹಿಡಿದಿದ್ದು ಹೀಗೆ
Live Tv
[brid partner=56869869 player=32851 video=960834 autoplay=true]