ಬಲವಂತವಾಗಿ ಮಂಗಳಮುಖಿಯ ಮುಂದೆಲೆ ಕತ್ತರಿಸಿ ಹಲ್ಲೆ – ಇಬ್ಬರು ಅರೆಸ್ಟ್

Public TV
1 Min Read
hair

ಚೆನ್ನೈ: ಬಲವಂತವಾಗಿ ಮಂಗಳಮುಖಿ (Transgender) ಮುಂದೆಲೆಯನ್ನು ಕತ್ತರಿಸಿ ಆಕೆಯ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿರುವ ಘಟನೆ ತಮಿಳುನಾಡಿನಲ್ಲಿ (Tamilnadu) ನಡೆದಿದೆ. ಮಂಗಳಮುಖಿಯ ಕೂದಲನ್ನು ಕತ್ತರಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳಮುಖಿ ಹಕ್ಕುಗಳ ಕಾರ್ಯಕರ್ತೆ ಗ್ರೇಸ್ ಬಾನು (Transgender Rights Activist Grace Banu) ಅವರು ಹಂಚಿಕೊಂಡಿರುವ 19 ಸೆಕೆಂಡುಗಳ ಈ ವೀಡಿಯೋದಲ್ಲಿ, ವ್ಯಕ್ತಿಯೋರ್ವ ರೇಜರ್ ಮೂಲಕ ಕೂದಲನ್ನು ಕತ್ತರಿಸಿ, ಆಕೆಯ ಪಕ್ಕ ಕುಳಿತಿದ್ದ ಮತ್ತೊಬ್ಬ ಮಂಗಳಮುಖಿಯನ್ನು ನಿಂದಿಸಿದ್ದಾನೆ. ಗಂಡಸರಿಂದ ಹಣ ಕೀಳುತ್ತೀರಾ. ಅವರ ಬಳಿ ಹಣ ಇಲ್ಲದಿದ್ದರೆ ಏನು ಮಾಡಬೇಕು? ಈಗ ಮುಗಿತು. ನೀನು ತುಂಬಾ ಚೆನ್ನಾಗಿ ಕಾಣುತ್ತಿದ್ದೀಯಾ, ಬ್ಯೂಟಿಫುಲ್ ಎಂದು ಕೂದಲು ಕತ್ತರಿಸಿ ಲೇವಡಿ ಮಾಡಿದ್ದಾನೆ. ಮತ್ತೋರ್ವ ಈ ಕೃತ್ಯವನ್ನು ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾನೆ. ವೀಡಿಯೋದಲ್ಲಿ ಮಂಗಳಮುಖಿಯ ಒಂದು ಕಣ್ಣು ಊದಿಕೊಂಡಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಕನ್ನಡದ ಹೆಸರಲ್ಲಿ ರೋಲ್ ಕಾಲ್: ಪ್ರೂವ್ ಮಾಡಿದರೆ ನೇಣಿಗೇರುವೆ ಎಂದ ರೂಪೇಶ್ ರಾಜಣ್ಣ

ಈ ವೀಡಿಯೋ ಜೊತೆಗೆ ಇಂತಹ ಹಿಂಸಾಚಾರ ಯಾವಾಗ ಕೊನೆಗೊಳ್ಳುತ್ತದೆ ಎಂದು ಗ್ರೇಸ್ ಬಾನು ಅವರು ಟ್ವೀಟ್ ಮಾಡಿದ್ದಾರೆ. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರನ್ನು ನೋವಾ ಮತ್ತು ವಿಜಯ್ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ಮಂಗಳಮುಖಿಯರಿಗೆ ಪರಿಚಯಸ್ಥರು ಎಂದು ಹೇಳಲಾಗುತ್ತಿದ್ದು, ಅವರಲ್ಲಿ ಓರ್ವ ಮಹಿಳೆ ಆರೋಪಿಯೊಂದಿಗೆ ಸಂಬಂಧ ಹೊಂದಿದ್ದಳು. ಆದರೆ ಕಾರಣಾಂತರದಿಂದ ನಂತರ ಬೇರೆಯಾಗಿದ್ದರು ಎಂದು ತಿಳಿದುಬಂದಿದೆ. ಇದೀಗ ಈ ಘಟನೆ ಸಂಬಂಧ ಪೊಲೀಸ್ ಸೂಪರಿಂಟೆಂಡೆಂಟ್, ಟುಟಿಕೋರಿನ್ ಎಲ್ ಬಾಲಾಜಿ ಸರವಣನ್ ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *