ನಯನತಾರಾಗೆ ಬಾಡಿಗೆ ತಾಯಿ ಸಂಕಷ್ಟ: ಕೊನೆಗೂ ಮೌನ ಮುರಿದ ವಿಘ್ನೇಶ್ ಶಿವನ್

Public TV
1 Min Read
nayanathara twins1

ಬಾಡಿಗೆ ತಾಯಿ (Surrogate Mother) ಮೂಲಕ ಅವಳಿ ಮಕ್ಕಳ ಪೋಷಕರಾಗಿರುವ  ನಟಿ ನಯನತಾರಾ (Nayantara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್, ಮಕ್ಕಳೊಂದಿಗೆ ನೆಮ್ಮದಿಯಾಗಿ ಇರಬೇಕು ಎನ್ನುವ ಹೊತ್ತಿನಲ್ಲಿ ಸಂಕಟವೊಂದು ಎದುರಾಗಿದೆ. ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆದುಕೊಳ್ಳಲು ಕೆಲ ನಿಯಮಗಳಿಗೆ. ಅವುಗಳನ್ನು ಪಾಲಿಸದೇ ಮಕ್ಕಳನ್ನು ಪಡೆದಿದ್ದಾರೆ ಎನ್ನುವ ಆರೋಪ (Allegation) ಇವರ ಮೇಲಿದೆ.

nayanathara twins

ನಯನತಾರಾ ಮತ್ತು ವಿಘ್ನೇಶ್ ಶಿವನ್ (Vignesh Sivan) ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆಯುವಾಗ ನಿಯಮಗಳನ್ನು ಪಾಲಿಸಿಲ್ಲ ಎನ್ನುವ ಕಾರಣದಿಂದಾಗಿ ತಮಿಳು ನಾಡು ಸರಕಾರ ನೋಟಿಸ್ ನೀಡಿದೆ ಮತ್ತು ವಿಚಾರಣೆ ನಡೆಸುತ್ತಿದೆ. ಈ ಹೊತ್ತಿನಲ್ಲಿ ನಯನತಾರಾ ಅಥವಾ ವಿಘ್ನೇಶ್ ಪ್ರಕರಣದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಪ್ರಥಮ ಬಾರಿಗೆ ಮೌನ ಮುರಿದಿರುವ ವಿಘ್ನೇಶ್ ತಮ್ಮ ಇನ್ಸ್ಟಾದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಆಟಕ್ಕೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ ಆರ್ಯವರ್ಧನ್ ಗುರೂಜಿ

nayantara

ಇನ್ಸ್ಟಾದ ಸ್ಟೋರಿಯಲ್ಲಿ ಕೆಲವು ಸಾಲುಗಳನ್ನು ಬರೆದಿರುವ ವಿಘ್ನೇಶ್ ಶಿವನ್, ‘ನಿನ್ನ ಸುತ್ತಮುತ್ತಲಿನವರನ್ನು ಗಮನಿಸು. ನಿನಗೆ ಒಳ್ಳೆಯದನ್ನು ಬಯಸುವವರು ಮಾತ್ರ ನಿನ್ನವರು. ನಿನ್ನ ಜೊತೆಗಿದ್ದು, ನಿನ್ನ ಕ್ಷೇಮ ಬಯಸುವವರನ್ನು ನಂಬು. ಇದೇ ವಾಸ್ತವ’ ಎಂದು ಬರೆದುಕೊಂಡಿದ್ದಾರೆ. ಹಾಗಾದರೆ, ಇವರ ಜೊತೆಗಿದ್ದು ಇವರ ಕ್ಷೇಮ ಬಯಸದಂತಹ ವ್ಯಕ್ತಿಗಳು ಇದ್ದಾರಾ ಎನ್ನುವ ಅನುಮಾನವನ್ನು ಇದು ಹುಟ್ಟು ಹಾಕಿದೆ.

nayanatara

ಮತ್ತೊಂದು ಸ್ಟೋರಿಯಲ್ಲಿ ‘ಸಮಯವು ಎಲ್ಲವನ್ನೂ ಹೇಳುತ್ತದೆ. ಅಲ್ಲಿವರೆಗೂ ಸಹನೆಯಿಂದ ಕಾಯಬೇಕು’ ಎಂದು ಬರೆದಿದ್ದಾರೆ. ಅಂದರೆ, ಈ ಘಟನೆಯು ಪರೋಕ್ಷವಾಗಿ  ತಮ್ಮನ್ನು ಬಾಧಿಸುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿಯೇ ಹೇಳಿಕೊಂಡಿದ್ದಾರೆ. ತಾವು ನಿಯಮದಂತೆಯೇ ಮಕ್ಕಳನ್ನು ಪಡೆದಿರುವ ಕುರಿತಾಗಿಯೂ ಅವರು ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *