ಸ್ವಿಮ್ ಸ್ಯೂಟ್ ನಲ್ಲಿ ಕಾಣಿಸಿಕೊಂಡು ‘ಬಿಗ್ ಬಾಸ್’ ಮನೆ ಬಿಸಿ ಹೆಚ್ಚಿಸಿದ ಅನುಪಮಾ ಗೌಡ

Public TV
2 Min Read
FotoJet 55

ಕಿರುತೆರೆ ಖ್ಯಾತ ನಟಿ, ನಿರೂಪಕಿ ಅನುಪಮಾ ಗೌಡ (Anupama Gowda) ಎರಡನೇ ಬಾರಿಗೆ ಬಿಗ್ ಬಾಸ್ (Bigg Boss Season 9) ಮನೆ ಪ್ರವೇಶ ಮಾಡಿದ್ದಾರೆ. ತಮ್ಮ ಸ್ನಿಗ್ಧ ನಗುವಿನ ಮೂಲಕ ‘ಬಿಗ್ ಬಾಸ್’ ಚಿತ್ತವನ್ನೇ ಚಂಚಲ ಮಾಡುವಷ್ಟು ಹಸನ್ಮುಖಿ ಆಗಿರುವ ಅನುಪಮಾ, ಇಂದು ದೊಡ್ಮನೆ ಸ್ವಿಮಿಂಗ್ ಫೂಲ್ (Swim Suit) ನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವಿಮ್ ಸ್ಯೂಟ್ ಹಾಕಿಕೊಂಡು ಮನೆಯ ವಾತಾವರಣವನ್ನೇ ಮತ್ತಷ್ಟು ಬಿಸಿ ಮಾಡಿದ್ದಾರೆ. ನೆಚ್ಚಿನ ನಟಿಯನ್ನು ಸ್ವಿಮ್ ಸ್ಯೂಟ್ ನಲ್ಲಿ ನೋಡಿದ ಅಭಿಮಾನಿಗಳು, ಅನುಪಮಾ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ.

FotoJet 3 29

ಮಾತಿನ ಮೂಲಕವೇ ಸಾವಿರ ಹೃದಯಗಳನ್ನು ಖೆಡ್ಡಾಗಿ ಕೆಡವುವ ತಾಕತ್ತು ಅನುಪಮಾ ಗೌಡರಿಗಿದೆ. ರಿಯಾಲಿಟಿ ಶೋಗಳಲ್ಲಿ ಅದನ್ನು ಸಾಬೀತೂ ಪಡಿಸಲಾಗಿದೆ. ಗುಳಿಕೆನ್ನೆಯ ಮೇಲಿನ ನಗು ಮತ್ತು ತುಟಿ ಚಲನೆಗಳ ಮೂಲಕ ಮಾತಿಗೆ ಬೇರೆಯೇ ಶಕ್ತಿ ನೀಡುವ ಈ ಸುಂದರಿಯು ಕಿರುತೆರೆ ಮತ್ತು ಹಿರಿತೆರೆ ಎರಡಲ್ಲೂ ಸೈ ಅನಿಸಿಕೊಂಡವರು. ಅದರಲ್ಲೂ ನಿರೂಪಕಿಯಾಗಿ ಲಕ್ಷಾಂತರ ಅಭಿಮಾನಿಗಳನ್ನೂ ಹೊಂದಿದ್ದಾರೆ. ಈ ಗೆಲುವೇ ಅವರನ್ನು ಎರಡು ಬಾರಿ ಬಿಗ್ ಬಾಸ್ ಮನೆಗೆ ಹೋಗುವಂತೆ ಮಾಡಿದೆ. ಇದನ್ನೂ ಓದಿ:ಬಿಗ್ ಬಾಸ್ ಆಟಕ್ಕೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ ಆರ್ಯವರ್ಧನ್ ಗುರೂಜಿ

FotoJet 2 41

ಕಾರ್ಯಕ್ರಮಗಳನ್ನು ನಡೆಸಿಕೊಡುವಾಗ ಪಟಟಪನೇ ಮಾತಾಡುವ ಈ ಹುಡುಗಿ, ಬಿಗ್ ಬಾಸ್ ಮನೆಯಲ್ಲಿ ಯಾಕೋ ಕೊಂಚ ಡಲ್ ಆದಂತೆ ಕಾಣುತ್ತಿದೆ. ಮಾತು ಅಷ್ಟಕಷ್ಟೇ. ಟಾಸ್ಕ್ ಗಳಲ್ಲೂ ಹೇಳಿಕೊಳ್ಳುವಂತಹ ಫರ್ಫಾಮೆನ್ಸ್ ಮಾಡುತ್ತಿಲ್ಲ. ಹೊಂದಾಣಿಕೆಯ ಕೊರತೆಯೂ ಈ ಹುಡುಗಿಯಲ್ಲಿದೆ. ಹೀಗಾಗಿ ಅನುಪಮಾ ಗೌಡ ನಿರೀಕ್ಷಿಸಿದಷ್ಟು ಮನರಂಜನೆ ನೀಡುತ್ತಿಲ್ಲ. ಈ ಎಲ್ಲಾ ಇಲ್ಲಗಳನ್ನು ಒಂದೇ ಸಲ ಮರೆಸುವಂತೆ ಈಜುಡುಗೆಯಲ್ಲಿ ಕಾಣಿಸಿಕೊಂಡು ಸ್ವತಃ ಬಿಗ್ ಬಾಸ್ ಗೆ ಅಚ್ಚರಿ ಮೂಡಿಸಿದ್ದಾಳೆ ಈ ನಟಿ.

FotoJet 1 45

ಬಿಗ್ ಬಾಸ್ ಮನೆಯಲ್ಲಿ ಬಹುತೇಕ ಹುಡುಗಿಯರು ತುಂಡುಡುಗೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಆದರೆ, ಅನುಪಮಾ ಗೌಡ ಅದಕ್ಕೆ ಹೊರತಾಗಿದ್ದರು. ತೀರಾ ಅಪರೂಪಕ್ಕೆ ಎನ್ನುವಂತೆ ಅಂತಹ ಬಟ್ಟೆಗಳನ್ನು ಧರಿಸುತ್ತಿದ್ದರು. ದೀಪಿಕಾ ದಾಸ್ (Deepika Das), ಸಾನ್ಯಾ ಐಯ್ಯರ್ (Sanya Iyer) ಗೆ ಹೋಲಿಸಿದರೆ, ಅನುಪಮಾ ಗೌಡ ಕಾಸ್ಟ್ಯೂಮ್ ವಿಶೇಷವಾಗಿ ಇರುತ್ತಿದ್ದವು. ಆದರೆ, ಇವತ್ತು ಅವೆಲ್ಲ ಬಟ್ಟೆಗಳಿಗೆ ಕೊಂಚ ವಿರಾಮ ಕೊಟ್ಟು ಸ್ವಿಮ್ ಸ್ಯೂಟ್ ಹಾಕಿದ್ದಾರೆ. ನೆಮ್ಮೆದಿಯಾಗಿ ನೀರಿನ ಜೊತೆ ಸರಸಕ್ಕೆ ಇಳಿದಿದ್ದಾರೆ. ಆ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿವೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *