ಚಿಕ್ಕಬಳ್ಳಾಪುರ: ಈಸ್ಟ್ ಇಂಡಿಯಾ ಕಂಪನಿ ಯಾವುದು ಅಂತ ಜನರಿಗೆ ಅರಿವಾಗಿದೆ. ಅದಕ್ಕೆ ಬ್ರಿಟಿಷರನ್ನು ಹೇಗೆ ಓಡಿಸಿದರೋ ಹಾಗೆ ಕಾಂಗ್ರೆಸ್‍ನ್ನು ಓಡಿಸಿದ್ದಾರೆ. ಇನ್ನೂ ಕೂಡ ಅವರಿಗೆ ಬುದ್ಧಿ ಬರಲಿಲ್ಲ ಅಂದರೆ ನಾನೇನು ಹೇಳಲಾಗುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾಗೆ (Randeep Surjewala) ಸುಧಾಕರ್ (Sudhakar) ತಿರುಗೇಟು ನೀಡಿದರು.
ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ (Congress) ಭಾರತ್ ಜೋಡೋ ಯಾತ್ರೆಗೂ (Bharat Jodo Yatra) ಟಾಂಗ್ ನೀಡಿದರು. ಕಾಂಗ್ರೆಸ್ ನಾಯಕರನ್ನು ಜೋಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಈ ದೇಶವನ್ನು ಸರ್ದಾರ್ ವಲ್ಲಭಬಾಯಿ ಪಟೇಲ್ ಜೋಡಿಸಿದ್ದಾರೆ. ನರೇಂದ್ರ ಮೋದಿ 370 ಆರ್ಟಿಕಲ್‍ನ್ನು ತೆಗೆಯುವ ಮೂಲಕ ದೇಶದಲ್ಲಿ ಒಂದು ಕಾನೂನಿದೆ. ಒಂದೇ ಧ್ವಜ ಒಂದೇ ಆಡಳಿತ ಇದೆ ಎಂದು ಹೇಳಿದರು.
ಕಾಂಗ್ರೆಸ್‍ನವರ ತರ ಒಂದು ದೇಶಕ್ಕೆ ಎರಡು ಸರ್ಕಾರ, ಎರಡು ಆಡಳಿತ, ಎರಡು ಧ್ವಜ, ಎರಡು ಕಾನೂನು ಮಾಡಿಲ್ಲ. ದೇಶ ಅಂದರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಒಂದೇ ಆಗಿದೆ. ಇವರು ಹೋಗುತ್ತಿರುವ ಕನ್ಯಾಕುಮಾರಿ ಟು ಕಾಶ್ಮೀರದ ರಸ್ತೆ ವಾಜಪೇಯಿ ಪ್ರಧಾನಿ ಅವರಿದ್ದಾಗ ನಿರ್ಮಾಣ ಮಾಡಿದ್ದರು. ಅದನ್ನೇ ನರೇಂದ್ರ ಮೋದಿ (Narendra Modi) ಅವರು ಮುಂದುವರಿಸಿಕೊಂಡು ಹೋಗಿದ್ದಾರೆ. ಅವರು ಪ್ರತಿಹೆಜ್ಜೆ ಹಾಕುತ್ತಿರುವುದು ಬಿಜೆಪಿ (BJP) ಸರ್ಕಾರ ನಿರ್ಮಾಣ ಮಾಡಿರುವ ರಸ್ತೆ ಮೇಲೆ ಆಗಿದೆ. ಕಾಂಗ್ರೆಸ್ ಜೋಡೋ ಕಾಂಗ್ರೆಸ್ ಚೋಡೋ ಆಗಿದೆ ಎಂದು ಟೀಕಿಸಿದರು. ದೇಶದ ತುರ್ತು ಪರಿಸ್ಥಿತಿಯ ಸಂದರ್ಭ ಯಾದವ್ ಜೀ ಸೈನಿಕರಾಗಿದ್ದರು: ಮೋದಿ ಸಂತಾಪ
ಈಗಾಗಲೇ ಕಾಂಗ್ರೆಸ್‍ನ ಅನೇಕ ನಾಯಕರು ಪಕ್ಷ ಬಿಡುತ್ತಿದ್ದಾರೆ. ನಿರ್ದಿಷ್ಟವಾದ ಕಾರ್ಯಕ್ರಮ ಇಲ್ಲದೆ ಗೊತ್ತು ಗುರಿ ಇಲ್ಲದ ಜೋಡೋ ಕಾರ್ಯಕ್ರಮದಿಂದ ಯಾವುದೇ ಲಾಭ ಇಲ್ಲ. ಕಾಂಗ್ರೆಸ್ ಜೋಡೋಗೆ ಜನರು ದೊಡ್ಡ ಮಟ್ಟದಲ್ಲಿ ಸ್ಪಂದನೆ ಮಾಡುತ್ತಿಲ್ಲ ಎಂದರು. ಬಿಜೆಪಿಯ ಯಾತ್ರೆಗಳನ್ನೇ ಕಾಂಗ್ರೆಸ್‍ನವರು ಕಾಪಿ ಮಾಡ್ತಿದ್ದಾರೆ: ಬಿ.ಸಿ. ನಾಗೇಶ್