ರಾಜಸ್ಥಾನದ ಹಿರಿಯ ಕಾಂಗ್ರೆಸ್ ನಾಯಕ ಭನ್ವರ್ ಲಾಲ್ ಶರ್ಮಾ ನಿಧನ

Public TV
2 Min Read
Bhanwar Lal Sharma

ಜೈಪುರ: ರಾಜಸ್ಥಾನದ ಜೈಪುರದ ಸವಾಯಿ ಮಾನ್ ಸಿಂಗ್ (ಎಸ್‍ಎಂಎಸ್) ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ಕಾಂಗ್ರೆಸ್ ನಾಯಕ (Senior Congress leader) ಭನ್ವರ್ ಲಾಲ್ ಶರ್ಮಾ(77) (Bhanwar Lal Sharma)ಅವರು ಭಾನುವಾರ ನಿಧನರಾಗಿದ್ದಾರೆ.

ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಭನ್ವರ್ ಲಾಲ್ ಶರ್ಮಾ ಅವರನ್ನು ಶನಿವಾರ ಎಸ್‍ಎಂಎಸ್ (Sawai Man Singh Medical College) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇದೀಗ ಪಾರ್ಥಿವ ಶರೀರವನ್ನು ಹನುಮಂತನಗರದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ವಿದ್ಯಾಧರ್ ನಗರದ ಬ್ರಾಹ್ಮಣ ಮಹಾಸಭಾ ಕಟ್ಟಡದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಸೋಮವಾರ ಮಧ್ಯಾಹ್ನ ಸರ್ದರ್ಶಹರ್‍ನಲ್ಲಿ ಅಂತ್ಯಕ್ರಿಯೆ ನಡೆಸುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: 2024ರೊಳಗೆ UPಯ ರಸ್ತೆಗಳನ್ನು ಅಮೆರಿಕಗಿಂತಲೂ ಉತ್ತಮಗೊಳಿಸುತ್ತೇವೆ: ಗಡ್ಕರಿ

ಭನ್ವರ್ ಲಾಲ್ ಶರ್ಮಾ ಅವರ ನಿಧನಕ್ಕೆ ರಾಜಸ್ಥಾನ (Rajastan) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಸರ್ದಾರ್‍ಶಹರ್ (Sardarshahr) (ಚುರು) ಕ್ಷೇತ್ರದ ಕಾಂಗ್ರೆಸ್ ಶಾಸಕ ಭನ್ವರ್ ಲಾಲ್ ಶರ್ಮಾ ಅವರ ನಿಧನಕ್ಕೆ ನನ್ನ ಸಂತಾಪಗಳು. ಅವರು ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಭನ್ವರ್‍ಲಾಲ್ ಶರ್ಮಾ ಅವರ ಆರೋಗ್ಯದ ಬಗ್ಗೆ ವಿಚಾರಿಸಲು ನಾನು ಅವರ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದ್ದೆ. ನಿನ್ನೆ ರಾತ್ರಿ ಎಸ್‍ಎಂಎಸ್ ಆಸ್ಪತ್ರೆಗೆ ತಲುಪಿ ಅವರ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಕುಟುಂಬಸ್ಥರನ್ನು ಭೇಟಿ ಮಾಡಿದ್ದೆ ಎಂದು ತಿಳಿಸಿದ್ದಾರೆ.

Ashok Gehlot

ಈ ಸಮಯದಲ್ಲಿ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ನೀಡಲಿ ಮತ್ತು ಭನ್ವರ್‍ಲಾಲ್ ಶರ್ಮಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.  ಇದನ್ನೂ ಓದಿ: ಚೆನ್ನೈನ ಬೀದಿಬದಿಯಲ್ಲಿ ತರಕಾರಿ ಖರೀದಿಸಿದ ನಿರ್ಮಲಾ ಸೀತಾರಾಮನ್ – ವೀಡಿಯೋ ವೈರಲ್

ಭನ್ವರ್ ಲಾಲ್ ಶರ್ಮಾ ಅವರು 1998, 2003, 2013 ಮತ್ತು 2018ರ ಚುನಾವಣೆಗೆ ಕಾಂಗ್ರೆಸ್‍ನಿಂದ ಟಿಕೆಟ್ ಪಡೆದು ಶಾಸಕರಾಗಿದ್ದರು. 1985 ರಲ್ಲಿ ಲೋಕದಳದಿಂದ ವಿಧಾನಸಭೆಯ ಸದಸ್ಯರಾಗಿ (ಎಂಎಲ್‍ಎ) ಮೊದಲ ಬಾರಿಗೆ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಭನ್ವರ್ ಲಾಲ್ ಶರ್ಮಾ ಸ್ಪರ್ಧಿಸಿದ್ದರು ಮತ್ತು 1990ರಲ್ಲಿ ಅವರು ಜನತಾ ದಳ ಪಕ್ಷಕ್ಕೆ ಸೇರಿದ ಬಳಿಕ ಎರಡನೇ ಬಾರಿಗೆ ಶಾಸಕರಾದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *