ಸ್ಯಾಂಡಲ್‌ವುಡ್‌ನ(Sandalwood) ಮತ್ತೊಂದು ಸೂಪರ್ ಹಿಟ್ ಸಿನಿಮಾ ಕಾಂತಾರ(Kantara Film), ಕರ್ನಾಟಕವೂ ಸೇರಿದಂತೆ ನಾನಾ ಕಡೆ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಂದಾಜು ಐವತ್ತು ಕೋಟಿಯಷ್ಟು ಬಾಕ್ಸ್ ಆಫೀಸ್ ತುಂಬಿಸಿದೆ. ಈ ಹೊತ್ತಲ್ಲಿ ಹಿಂದಿ ಮತ್ತು ತೆಲುಗಿನಲ್ಲೂ ಡಬ್ ಮಾಡಿ ರಿಲೀಸ್ ಮಾಡಲು ಹೊರಟಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರ.
ಇಂದು ಹಿಂದಿ ಮತ್ತು ತೆಲುಗಿನ ಟ್ರೇಲರ್ ಬಿಡುಗಡೆ ಆಗಿದ್ದು, ನೋಡುಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಡಬ್ಬಿಂಗ್ ಗುಣಮಟ್ಟದ ಬಗ್ಗೆಯೂ ಪ್ರೇಕ್ಷಕರು ಒಪ್ಪಿದ್ದಾರೆ. ಹಾಗಾಗಿ ತೆಲುಗು ಮತ್ತು ಬಾಲಿವುಡ್(Bollywood) ಚಿತ್ರರಂಗದಲ್ಲಿ ʻಕಾಂತಾರʼ ಕುತೂಹಲ ಮೂಡಿಸಿದೆ. ಕನ್ನಡದಂತೆ ಅವೆರಡೂ ಭಾಷೆಗಳಲ್ಲೂ ಗೆಲ್ಲುವ ವಿಶ್ವಾಸವನ್ನು ಟ್ರೇಲರ್ ಮೂಡಿಸಿವೆ.
View this post on Instagram
ಹಿಂದಿ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ರಿಲೀಸ್ ಮಾಡದೇ ಒಂದು ದಿನದ ಅಂತರದಲ್ಲಿ ರಿಲೀಸ್ ಮಾಡುತ್ತಿದೆ ಹೊಂಬಾಳೆ ನಿರ್ಮಾಣ ಸಂಸ್ಥೆ (Hombale Films). ಅಕ್ಟೋಬರ್ 14 ರಂದು ಹಿಂದಿಯಲ್ಲಿ, 15 ರಂದು ತೆಲುಗುನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಸಿನಿಮಾ ರಿಲೀಸ್‌ಗೆ ಭರ್ಜರಿಯಾಗಿಯೇ ಸಿದ್ಧತೆ ಮಾಡಿಕೊಂಡಿದೆ ಹೊಂಬಾಳೆ ಫಿಲ್ಮ್ಸ್.
ರಿಷಬ್ ಶೆಟ್ಟಿ(Rishab Shetty) ಮತ್ತು ಹೊಂಬಾಳೆ ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಚೊಚ್ಚಲು ಸಿನಿಮಾದಲ್ಲಿ ಅದ್ಭುತ ಯಶಸ್ಸು ಕಂಡಿದೆ ಜೋಡಿ. ರಿಷಬ್ ನಿರ್ದೇಶನ ಮತ್ತು ನಟನೆಗೆ ನೋಡುಗ ಫಿದಾ ಆಗಿದ್ದಾನೆ. ಇಂಥದ್ದೊಂದು ಚಿತ್ರಕ್ಕೆ ಹಣ ಹೂಡಿರುವ ಸಂಸ್ಥೆಗೂ ನೋಡುಗರು ಮೆಚ್ಚುಗೆ ವ್ತಕ್ತಪಡಿಸಿದ್ದಾರೆ.