ಬೆಳಗಾವಿ: ನಾನೊಬ್ಬ ರಾಜಕಾರಣಿ ಅಷ್ಟೇ ಅಲ್ಲ, ನಾನೊಬ್ಬ ರೈತ, ನನ್ನ ಫಾರ್ಮ್‌ನಲ್ಲಿ ಐದು ಸಾವಿರ ಜಾನುವಾರುಗಳಿವೆ. ನನ್ನ ಮಕ್ಕಳಿಗಿಂತ ಹೆಚ್ಚು ಕಾಳಜಿಯಿಂದ ನಾನು ಅವುಗಳನ್ನು ಸಾಕಿದ್ದೇನೆ ಎಂದು ಧಾರಾವಾಡದ (Dharwad) ತಮ್ಮ ಫಾರ್ಮ್‌ನಲ್ಲಿರುವ ಹಸುಗಳನ್ನು ನೆನೆದು ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಭಾವುಕರಾದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ನನ್ನ ಮಕ್ಕಳಿಗಿಂತ ಹೆಚ್ಚು ಕಾಳಜಿಯಿಂದ ನಾನು ಹಸುಗಳನ್ನು ಸಾಕಿದ್ದೇನೆ. ಧಾರವಾಡದಲ್ಲಿದ್ದಾಗ ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಫಾರ್ಮ್‌ಗೆ ಹೋಗುತ್ತಿದ್ದೆ. ಬೆಂಗಳೂರು ಪ್ರವಾಸದಲ್ಲಿದ್ದಾಗ ಮಾತ್ರ ನನ್ನ ಫಾರ್ಮ್‌ಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಧಾರವಾಡದಲ್ಲಿದ್ದಾಗ ಪ್ರತಿದಿನ ತಪ್ಪದೇ ಫಾರ್ಮ್‌ಗೆ ಹೋಗಿ ಹಸುಗಳ ಆರೈಕೆ ಮಾಡ್ತಿದ್ದೆ. ಇಷ್ಟು ದಿನ ಫಾರ್ಮ್‌ಗೆ ಹೋಗದೇ ಇರುವುದು ತುಂಬಾ ನೋವು ತರಿಸಿದೆ ಎಂದು ಭಾವುಕರಾದರು.
ಇದಲ್ಲದೇ ರಾಜ್ಯ, ಜಿಲ್ಲೆಯಿಂದ ಬಹಿಷ್ಕಾರ ಹಾಕಲು ನಾನೇನು ಉಗ್ರನಾ? ಸದ್ಯ ಜಾನುವಾರುಗಳನ್ನು ನನ್ನ 22 ವರ್ಷದ ಪುತ್ರಿ ನೋಡಿಕೊಳ್ಳುತ್ತಿದ್ದಾಳೆ. ಎರಡು, ಮೂರು ಹಸು ಕಟ್ಟಿದ ರೈತರೇ ಒಂದು ದಿನ ಮನೆ ಬಿಟ್ಟು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅಂತಹದ್ರಲ್ಲಿ ಸಾವಿರಾರು ಹಸುಗಳನ್ನು ಕಟ್ಟಿದ ನಾನು ಮನೆಗೆ ಹೋಗದಿದ್ದರೇ ಮುಖ ಪ್ರಾಣಿಗಳ ಕಥೆ ಏನಾಗಬೇಕು ಎಂದು ತನ್ನ ಫಾರ್ಮ್‌ನಲ್ಲಿರುವ ಜಾನುವಾರುಗಳನ್ನು ನೆನೆದು ಬಾವುಕರಾದರು. ಇದನ್ನೂ ಓದಿ: ಹಣ ನೀಡಲಿಲ್ಲವೆಂದು ವೃದ್ಧ ತಂದೆಯನ್ನೇ ಕೊಲೆ ಮಾಡಿದ ಪಾಪಿ ಮಗ- ತಾಯಿ ಸ್ಥಿತಿ ಗಂಭೀರ
ಯೋಗೇಶ್‌ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ದೇಶದ ಕಾನೂನಿಗೆ ಗೌರವಿಸುತ್ತೇನೆ. ಕಾನೂನು ಹೋರಾಟ ಮುಂದುವರಿಸುತ್ತೇನೆ. ಬರುವ ದಿನಗಳಲ್ಲಿ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡುವ ವಿಶ್ವಾಸವಿದೆ. ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ. ವಿನಯ್ ಕುಲಕರ್ಣಿ ಕ್ಷೇತ್ರ ಬದಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಧಾರವಾಡ ಪ್ರವೇಶಕ್ಕೆ ಅನುಮತಿ ಸಿಗದಿದ್ದರೂ ಹೊರಗೆ ಇದ್ದೇ ಕಣಕ್ಕಿಳಿಯುತ್ತೇನೆ. ಯಾವುದೇ ಕಾರಣಕ್ಕೂ ಧಾರವಾಡ ಗ್ರಾಮೀಣ ಕ್ಷೇತ್ರ ಬದಲಿಸುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: `ಕೆಲವೇ ಕ್ಷಣಗಳಲ್ಲಿ ವಿಧಾನಸೌಧ ಬ್ಲಾಸ್ಟ್’ – ಬೆದರಿಕೆ ಕರೆ ಮಾಡಿದ್ದ ಟೆಕ್ಕಿ ಅರೆಸ್ಟ್