ವಾಯುಪಡೆಗೆ ಶಸ್ತ್ರಾಸ್ತ್ರ ವ್ಯವಸ್ಥೆ ಶಾಖೆ – ಮುಂದಿನ ವರ್ಷದಿಂದ ಮಹಿಳಾ ಅಗ್ನಿವೀರರು ಸೇರ್ಪಡೆ

Public TV
3 Min Read
Weapon system branch

ಚಂಡೀಗಢ: ವಾಯುಪಡೆಗೆ ಶಸ್ತ್ರಾಸ್ತ್ರ ವ್ಯವಸ್ಥೆ ಶಾಖೆಯನ್ನು (IAF weapon system branch) ರಚಿಸಲು ಸರ್ಕಾರ ಅನುಮೋದನೆ ನೀಡಿದೆ. ಅಲ್ಲದೇ ಮುಂದಿನ ವರ್ಷದಿಂದ ವಾಯುಪಡೆಗೆ ಮಹಿಳಾ ಅಗ್ನಿವೀರರನ್ನು (Female Agniveer) ನೇಮಿಸಲಾಗುತ್ತದೆ ಎಂದು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ (IAF chief Air Chief Marshal Vivek Ram Chaudhari ) ಹೇಳಿದ್ದಾರೆ.

ಭಾರತೀಯ ವಾಯುಪಡೆಯ 90ನೇ ವಾರ್ಷಿಕ ದಿನಾಚರಣೆ ವೇಳೆ ಚಂಡೀಗಢದಲ್ಲಿ ಮಾತನಾಡಿದ ಅವರು, ಐಎಎಫ್ ಅಧಿಕಾರಿಗಳಿಗೆ ಶಸ್ತ್ರಾಸ್ತ್ರ ವ್ಯವಸ್ಥೆ ಶಾಖೆಯನ್ನು ರಚಿಸಲು ಸರ್ಕಾರ ಅನುಮೋದನೆ ನೀಡಿದೆ. ಇದು ಸ್ವಾತಂತ್ರದ ನಂತರ ಮೊದಲ ಬಾರಿಗೆ ರಚಿಸಲಾಗುತ್ತಿರುವ ಹೊಸ ಕಾರ್ಯಾಚರಣೆಯ ಶಾಖೆಯಾಗಿದೆ. ಇದು ಮೂಲಭೂತವಾಗಿ ಎಲ್ಲಾ ರೀತಿಯ ಇತ್ತೀಚಿನ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಹೊಂದಿರುತ್ತದೆ. ಇದರಿಂದ ಸರ್ಕಾರಕ್ಕೆ 3,400 ಕೋಟಿ ರೂ. ಉಳಿತಾಯವಾಗುತ್ತದೆ. ಜೊತೆಗೆ ಮುಂದಿನ ವರ್ಷದಿಂದ ವಾಯುಪಡೆಗೆ ಮಹಿಳಾ ಅಗ್ನಿವೀರರನ್ನು ಸೇರ್ಪಡೆಗೊಳಿಸಲು ಐಎಎಫ್ ಯೋಜಿಸುತ್ತಿದೆ ಎಂದು ತಿಳಿಸಿದ್ದಾರೆ.

ಅಗ್ನಿಪಥ್ ಯೋಜನೆಯಿಂದಾಗಿ ( Agnipath scheme) ಭಾರತೀಯ ವಾಯುಪಡೆಗೆ ಅಗ್ನಿವೀರರನ್ನು ಸೇರಿಸಿಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ. ಆದರೆ ಅದಕ್ಕೂ ಮುಖ್ಯವಾಗಿ, ಇದು ಭಾರತದ ಸಾಮರ್ಥ್ಯವನ್ನು ಬಳಸಿಕೊಳ್ಳಲು ದೊರೆತಿರುವ ಒಂದು ಅವಕಾಶವಾಗಿದೆ ಎಂದಿದ್ದಾರೆ.  ಇದನ್ನೂ ಓದಿ: ತಮಿಳುನಾಡಿನಲ್ಲಿ ಆನ್‌ಲೈನ್‌ ಗೇಮ್ಸ್ ಬ್ಯಾನ್? – ಶೀಘ್ರದಲ್ಲಿ ಸರ್ಕಾರದಿಂದ ಆದೇಶ ಸಾಧ್ಯತೆ

ಐಎಎಫ್ ಮೂಲಕ ವೃತ್ತಿಜೀವನ ಪ್ರಾರಂಭಿಸಲು ಪ್ರತಿಯೊಬ್ಬ ಅಗ್ನಿವೀರ್ ಉತ್ತಮ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿದ್ದಾನೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ನಮ್ಮ ಕಾರ್ಯಾಚರಣೆಯ ತರಬೇತಿ ವಿಧಾನವನ್ನು ಬದಲಾಯಿಸಿದ್ದೇವೆ. ಈ ವರ್ಷದ ಡಿಸೆಂಬರ್‍ನಲ್ಲಿ ಆರಂಭಿಕ ತರಬೇತಿಗಾಗಿ 3,000 ಅಗ್ನಿವೀರರನ್ನು ವಾಯುಪಡೆಗೆ ಸೇರಿಸಿಕೊಳ್ಳುತ್ತೇವೆ. ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಸಿಬ್ಬಂದಿಯನ್ನು ಹೆಚ್ಚಾಗಿ ಸೇರಿಸಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಕ್ಕಳ ಕಳ್ಳನೆಂದು ಭಾವಿಸಿ ಭಿಕ್ಷುಕನಿಗೆ ಥಳಿಸಿದ ಸಾರ್ವಜನಿಕರು

ಇದೇ ಮೊದಲ ಬಾರಿಗೆ ದೆಹಲಿಯ ಹೊರಗಿರುವ ಚಂಡೀಗಢದಲ್ಲಿ ಭಾರತೀಯ ವಾಯಪಡೆ ದಿನಾಚರಣೆ ಸಮಾರಂಭ ನಡೆಯಿತು. ಇಲ್ಲಿನ ಸುಕ್ನ ಕೆರೆಯ ಮೇಲೆ ಸುಮಾರು 80 ವಿಮಾನಗಳು ಗಂಟೆಗಳ ಕಾಲ ತಮ್ಮ ಸಾಮಥ್ರ್ಯ, ಚಮತ್ಕಾರಗಳನ್ನು ಬಾನಂಗಳದಲ್ಲಿ ಪ್ರದರ್ಶಿಸಿದವು. ಹೊಸ ಯುದ್ಧ ಸಮವಸ್ತ್ರವನ್ನು ಕೂಡ ಇಂದು ಅನಾವರಣಗೊಳಿಸಲಾಯಿತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *