Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ನವದುರ್ಗೆಯರಿಗೆ ಐತಿಹಾಸಿಕ ಗಂಗಾರತಿ – ಉಚ್ಚಿಲ ದಸರಾಗೆ ವೈಭವದ ತೆರೆ

Public TV
Last updated: October 6, 2022 10:17 am
Public TV
Share
2 Min Read
dasara 4
SHARE

ಉಡುಪಿ: ಜಿಲ್ಲೆಯ ಮಹಾಲಕ್ಷ್ಮಿ ದೇವಸ್ಥಾನದ (MahaLaskshmi Temple) ದಸರಾ (Dasara) ಮಹೋತ್ಸವ ಸಂಪನ್ನಗೊಂಡಿದ್ದು ವೈಭವದ ಮೆರವಣಿಗೆ ನಡೆಯಿತು. ಕಾಪು ಕಡಲ ತೀರದಲ್ಲಿ ನವದುರ್ಗೆಯರಿಗೆ ಗಂಗಾವತಿ ನಡೆಸಿ, ಸಾವಿರಾರು ಜನರ ಸಮ್ಮುಖದಲ್ಲಿ ಜಲಸ್ತಂಭನ ಮಾಡಲಾಯಿತು.

dasara 4 1

ದಕ್ಷಿಣ ಭಾರತದ ಪ್ರಸಿದ್ಧ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ (Uchila Mahalakshmi Temple) ನವರಾತ್ರಿ (Navaratri) ಉತ್ಸವವನ್ನು ವೈಭವದಿಂದ ಆಚರಿಸಲಾಗಿತ್ತು. ನವ ದುರ್ಗೆಯರ ಮೂರ್ತಿಯನ್ನು 9 ದಿನ ಆರಾಧಿಸಿ, ಇಂದು ವಿಸರ್ಜನಾ ಮೆರವಣಿಗೆ ಮಾಡಲಾಯಿತು. ಸಮುದ್ರ ತೀರದಲ್ಲಿ ನವದುರ್ಗ ವಿಸರ್ಜನೆ ವಿಶೇಷವಾಗಿತ್ತು. ಇದಕ್ಕೂ ಮುನ್ನ ಹೆಲಿಕಾಪ್ಟರ್‌ನಲ್ಲಿ ಮೂರು ಸುತ್ತು ಪುಷ್ಪವೃಷ್ಟಿ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ನೂತನ ತಂತ್ರಜ್ಞಾನದ ಹೆಲಿಕಾಪ್ಟರ್ ನವ ದುರ್ಗೆಯರ ಸಮೀಪಕ್ಕೆ ಬಂದು ಮೂರು ಬಾರಿ ಪುಷ್ಪಾರ್ಚನೆ ಮಾಡಿದ್ದು ವಿಶೇಷವಾಗಿತ್ತು.

dasara 2 1

ಮೆರವಣಿಗೆಯ ವೈಭವದಲ್ಲಿ 80 ಕ್ಕಿಂತ ಹೆಚ್ಚು ಟ್ಯಾಬ್ಲೋಗಳು ಭಾಗಿಯಾದವು. ಗಣಪತಿ ಈಶ್ವರ ನವದುರ್ಗೆಯರು ಹನುಮಂತ ಮೂಷಿಕದ ಮೇಲೆ ಸಂಚಾರ ಹೊರಟ ವಿಘ್ನ ವಿನಾಶಕ ಕಾಳಿಂಗ ಮರ್ಧನ ಕೃಷ್ಣ, ಬಕಾಸುರ ರಥದಲ್ಲಿ ಸಂಚರಿಸುವ ಕೃಷ್ಣ ಅರ್ಜುನರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹುಲಿ ವೇಷ ಕುಣಿತ ವಿವಿಧ ಭಜನಾ ತಂಡಗಳು ಭಾಗಿಯಾದವು. ಇದನ್ನೂ ಓದಿ: ಫೇಕ್ ಮ್ಯಾರೇಜ್ ಸರ್ಟಿಫಿಕೇಟ್ ಸೃಷ್ಟಿ – ಸತ್ತವನ 19 ಕೋಟಿ ಆಸ್ತಿ ಹೊಡೆದ್ಲು ಖತರ್ನಾಕ್ ಸುಂದ್ರಿ

dasara 1 1

ಕಳೆದ ಹತ್ತು ದಿನದಲ್ಲಿ ಸುಮಾರು 5 ಲಕ್ಷ ಜನ ಭಕ್ತರು ಶ್ರೀ ಕ್ಷೇತ್ರ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದೇವರ ದರ್ಶನ ಮತ್ತು ಪ್ರಸಾದವನ್ನು ಸ್ವೀಕರಿಸಿದ್ದಾರೆ. ಮಹಾಲಕ್ಷ್ಮಿ ದೇವಸ್ಥಾನದಿಂದ ಹೆಜಮಾಡಿ ಟೋಲ್‍ವರೆಗೆ ಅಲ್ಲಿಂದ ಕಾಪುವಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿದೆ. ಸುಮಾರು 25 kmಗಳ ಬೃಹತ್ ಮೆರವಣಿಗೆಯನ್ನು ಕೈಗೊಂಡು ಜಿಲ್ಲೆಯಲ್ಲೇ ಅತಿ ದೊಡ್ಡ ವೈಭವದ ಶೋಭಾ ಯಾತ್ರೆ ಎಂಬ ಹೆಗ್ಗಳಿಕೆಗೆ ಉಚ್ಚಿಲ ದಸರಾ ಪಾತ್ರವಾಗಿದೆ.

dasara 5

ರಾತ್ರಿ ಎರಡು ಗಂಟೆಯವರೆಗೂ ಕಾಪು ಕಡಲತೀರದವರೆಗೆ ನವ ದುರ್ಗೆಯರ ವೈಭವದ ಮೆರವಣಿಗೆ ನಡೆಯಿತು. ಅಲ್ಲಲ್ಲಿ ನಿಂತು ಜನ ದೇವರಿಗೆ ಪ್ರಾರ್ಥನೆ, ಪೂಜೆ ಸಲ್ಲಿಸಿದರು. ಮಲ್ಪೆ ಕಡಲ ತೀರದಲ್ಲಿ ಸಾವಿರಾರು ಜನ ಭಕ್ತ ಸಮುದಾಯದ ನಡುವೆ ಸಾಲಾಗಿ ನವ ದುರ್ಗೆಯರ ಮೂರ್ತಿಯನ್ನು ಇಟ್ಟು ಗಂಗರತಿ ಸಲ್ಲಿಸಲಾಯಿತು. 9 ದೇವಿಯರನ್ನು ಏಕಕಾಲದಲ್ಲಿ ಜಲ ಸ್ತಂಭ ಮಾಡಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಕೆಎಸ್‍ಆರ್‌ಟಿಸಿಗೆ ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬಸ್ ಡಿಕ್ಕಿ – 9 ಮಂದಿ ಸಾವು, 40 ಜನರಿಗೆ ಗಾಯ

ರಾಷ್ಟ್ರೀಯ ಹೆದ್ದಾರಿಯಲ್ಲೇ ಮೆರವಣಿಗೆ ಸಾಗಿದ್ದರಿಂದ ಸಾವಿರಾರು ಜನ ಪ್ರಮುಖ ಜಂಕ್ಷನ್ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಕೆಲ ಕಡೆ ನಿಧಾನ ಸಂಚಾರ ಕಂಡು ಬಂತು. ಉಡುಪಿ (Udupi) ಜಿಲ್ಲಾ ಪೊಲೀಸರು, ನೂರಾರು ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಗಳ ವಾಹನ ಸಂಚಾರಕ್ಕೆ ವ್ಯವಸ್ಥೆಗಳನ್ನು ಮಾಡಿಕೊಟ್ಟರು. ಮೈಸೂರು ದಸರಾ ಮಂಗಳೂರು ದಸರಾ ಸಾಲಿಗೆ ಉಚ್ಚಿಲ ದಸರಾ ಒಂದು ಹೊಸ ಸೇರ್ಪಡೆ ಎಂಬ ಮಾತುಗಳು ಜನರಿಂದ ಕೇಳಿಬಂತು.

Live Tv
[brid partner=56869869 player=32851 video=960834 autoplay=true]

TAGGED:DasaraMahalakshmi Templenavratriudupiಉಡುಪಿದಸರಾನವರಾತ್ರಿಮಹಾಲಕ್ಷ್ಮಿ ದೇವಸ್ಥಾನ
Share This Article
Facebook Whatsapp Whatsapp Telegram

Cinema Updates

ganesh
‘ಜೇಮ್ಸ್’ ಡೈರೆಕ್ಟರ್ ಚೇತನ್ ಚಿತ್ರದಲ್ಲಿ ಗೋಲ್ಡನ್ ಸ್ಟಾರ್
1 hour ago
Madenuru Manu
ಅವಳ ಹಿಂದೆ ಇಬ್ಬರು ಹೀರೋ, ಒಬ್ಬಳು ಲೇಡಿ ಡಾನ್‌ ಇದ್ದಾಳೆ – ರೇಪ್‌ ಕೇಸ್‌ ದಾಖಲಾದ ಬಳಿಕ ಮಡೆನೂರು ಮನು ಬಾಂಬ್‌
2 hours ago
salman khan 1 1
ಸಲ್ಮಾನ್ ಖಾನ್ ಮನೆ ಬಳಿ ಭದ್ರತಾ ಲೋಪ – ಮನೆಗೆ ನುಗ್ಗಲು ಯತ್ನಿಸಿದ ಇಬ್ಬರ ಬಂಧನ
2 hours ago
SURIYA VIJAY DEVARAKONDA
ಸೂರ್ಯ ನಟನೆಯ ಸಿನಿಮಾದಲ್ಲಿ ವಿಜಯ್ ದೇವರಕೊಂಡ?
3 hours ago

You Might Also Like

indian soldiers jammu kashmir
Latest

ಜಮ್ಮು & ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ – ಓರ್ವ ಯೋಧ ಹುತಾತ್ಮ

Public TV
By Public TV
11 minutes ago
All party delegation
Latest

ಪಾಕ್‌ನ ಉಗ್ರವಾದದ ನಿಜ ಬಣ್ಣ ಬಯಲು ಮಾಡಲು ವಿದೇಶಕ್ಕೆ ಹೊರಟ ಸರ್ವಪಕ್ಷಗಳ ನಿಯೋಗ

Public TV
By Public TV
19 minutes ago
dinesh gundu rao 3
Bengaluru City

ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್ – ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರ ಓಪನ್

Public TV
By Public TV
30 minutes ago
Chikkaballapura 2
Chikkaballapur

ಚಿಂತಾಮಣಿಯಲ್ಲಿ ವಿವಾದಿತ ಅಂಬೇಡ್ಕರ್ ಪ್ರತಿಮೆ ತೆರವು ವಿಚಾರ – ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Public TV
By Public TV
44 minutes ago
M.B Patil
Bengaluru City

ಚಿಕ್ಕಮಗಳೂರು ಏರ್-ಸ್ಟ್ರಿಪ್ ನಿರ್ಮಾಣ: ಭೂಸ್ವಾಧೀನಕ್ಕೆ ಬಾಕಿ ಇರುವ 17 ಕೋಟಿ ಬಿಡುಗಡೆಗೆ ಕ್ರಮ

Public TV
By Public TV
1 hour ago
H D Kumaraswamy 3
Bengaluru City

ಪಿಎಂ ಇ-ಡ್ರೈವ್ – ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ ಹಂಚಿಕೆ ಭರವಸೆ ಕೊಟ್ಟ ಹೆಚ್‌ಡಿಕೆ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?