ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಟಾಸ್ಕ್ ವಿಚಾರಕ್ಕೆ ಜಗಳ ಕಾವೇರಿದೆ. ಸ್ಯಾಂಡ್ ವಿಚ್ ಮಾಡೋ ವಿಚಾರಕ್ಕೆ 2 ತಂಡಗಳು ಜಗಳ ಆಡಿವೆ. ಕ್ಯಾಪ್ಟನ್ ಕೊಟ್ಟ ತೀರ್ಪು ಒಪ್ಪಲು ಪ್ರಶಾಂತ್ ಸಂಬರ್ಗಿ ರೆಡಿಯಿಲ್ಲ ಅದಕ್ಕೆ ಜಗಳ ಆಗಿದೆ. ಈ ವೇಳೆ ಗೆಳೆಯ ಗೊಬ್ಬರಗಾಲ ವಿರುದ್ಧವೇ ಸಂಬರ್ಗಿ ತಿರುಗಿ ಬಿದ್ದಿದ್ದಾರೆ.
ದೊಡ್ಮನೆಯಲ್ಲಿ ಕ್ಯಾಪ್ಟನ್ಸಿ ಆಯ್ಕೆಗೆ ವಿವಿಧ ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಅದಕ್ಕಾಗಿ ಮನೆಯಲ್ಲಿ ಎರಡು ತಂಡಗಳನ್ನಾಗಿ ಮಾಡಲಾಗಿದೆ. ಒಂದು ಗುಂಪಿಗೆ ಅನುಪಮಾ ಗೌಡ ಕ್ಯಾಪ್ಟನ್ ಆದರೆ, ಮತ್ತೊಂದು ಟೀಂಗೆ ದೀಪಿಕಾ ಕ್ಯಾಪ್ಟನ್. ಈ ಎರಡೂ ಟೀಂಗಳಿಗೆ ವಿವಿಧ ರೀತಿಯ ಟಾಸ್ಕ್ ನೀಡಲಾಗುತ್ತಿದೆ. ಮೊದಲ ಟಾಸ್ಕ್ನಲ್ಲಿ ಸಂಬರ್ಗಿ (Prashant Sambargi) ಫುಲ್ ರಾಂಗ್ ಆಗಿದ್ದಾರೆ. ಇದನ್ನೂ ಓದಿ: ಕಾಂತಾರ ಕಾಳಗ: ಜಾಲತಾಣಗಳಲ್ಲಿ ಸೈದ್ಧಾಂತಿಕ, ರಾಜಕೀಯ, ಪ್ರಾದೇಶಿಕ ಸೊಗಡಿನ ಚರ್ಚೆ
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ನ ಪ್ರಕಾರ ಸ್ಪರ್ಧಿಗಳು ಜಿಮ್ ಸೈಕಲ್ ತುಳಿಯುತ್ತಾ ಸ್ಯಾಂಡ್ವಿಚ್ ಮಾಡಬೇಕಿತ್ತು. ಈ ಟಾಸ್ಕ್ ಮುಗಿದ ಮೇಲೆ ಪ್ರಶಾಂತ್ ಸಂಬರ್ಗಿ ಸಖತ್ ವೈಲೆಂಟ್ ಆದರು. ಕ್ಯಾಪ್ಟನ್ ಆಗಿದ್ದ ವಿನೋದ್ (Vinod Gobbargala) ಅವರು ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು. ಟಾಸ್ಕ್ನ ಕೆಲ ನಿಯಮಗಳನ್ನು ವಿವಿಧ ರೀತಿಯಲ್ಲಿ ಬದಲಾಯಿಸಿ ಹೇಳಿದ್ದರು ಎಂಬುದು ಪ್ರಶಾಂತ್ ಸಂಬರ್ಗಿ ವಾದ ಮಾಡಿದ್ದಾರೆ. ವಿನೋದ್ ನಡೆ ಅನೇಕರಿಗೆ ಇಷ್ಟವಾಗಿಲ್ಲ. ಅನೇಕರ ಕೆಂಗಣ್ಣಿಗೆ ಕಾರಣವಾಗಿದೆ. ಅದರಲ್ಲೂ ಪ್ರಶಾಂತ್ ಸಂಬರ್ಗಿ ಅವರು ಸಖತ್ ವೈಲೆಂಟ್ ಆಗಿದ್ದಾರೆ.
ಕಳೆದ ಸೀಸನ್ ನಲ್ಲೂ ಗುರುತಿಸಿಕೊಂಡಿದ್ದ ಪ್ರಶಾಂತ್ ಸಂಬರ್ಗಿ ಸೀಸನ್ ೯ ರ ಹೊಸತರಲ್ಲಿ ಸೈಲೆಂಟ್ ಆಗಿದ್ದರು. ಈಗ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಸಂಬರ್ಗಿ ಫುಲ್ ರಾಂಗ್ ಆಗಿದ್ದಾರೆ.