ಚಂಡೀಗಢ: ಹಿಂದೂ ವಿವಾಹ ಕಾಯಿದೆಯಲ್ಲಿ ತಿದ್ದುಪಡಿಗೆ (Hindu Marriage Act) ಒತ್ತಾಯಿಸಿ ಸರ್ವ ಜಾತಿಯ ಖಾಪ್ ಪಂಚಾಯತ್ (Sarv Jatiya Khap Mahapanchayat) ಒಂದೇ ಗ್ರಾಮದೊಳಗೆ ಮತ್ತು ಒಂದೇ ಗೋತ್ರದ ಜನರನ್ನು ಮದುವೆಯಾಗುವುದನ್ನು ನಿಷೇಧಿಸುತ್ತಿದೆ.
ಹರಿಯಾಣದ ಜಿಂದ್‍ನಲ್ಲಿ ಮಹಾಪಂಚಾಯತ್ (mahapanchayat) ಕಾರ್ಯಕ್ರಮ ರಾಷ್ಟ್ರೀಯ ಸಂಚಾಲಕ ಟೆಕ್ ರಾಮ್ ಕಾಂಡೇಲಾ (Tek Ram Kandela) ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉತ್ತರ ಭಾರತದ ವಿವಿಧ ರಾಜ್ಯಗಳ ಒಟ್ಟು 150 ಖಾಪ್ (ಕೌನ್ಸಿಲ್‍ಗಳು), ವಿವಿಧ ಸಾಮಾಜಿಕ ಸಂಸ್ಥೆಗಳು ಮತ್ತು ಇತರರು ಭಾಗವಹಿಸಿದ್ದರು. ಇನ್ನೂ ಈ ಕಾರ್ಯಕ್ರಮದಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಈ ಕುರಿತಂತೆ ಮಾತನಾಡಿದ ಟೆಕ್ ರಾಮ್ ಕಾಂಡೇಲಾ ಅವರು ಹಿಂದೂ ವಿವಾಹ ಕಾಯಿದೆಗೆ ತಿದ್ದುಪಡಿ ತಂದು ಒಂದೇ ಗ್ರಾಮ ಹಾಗೂ ಪಕ್ಕದ ಗ್ರಾಮ ಹಾಗೂ ಒಂದೇ ಗೋತ್ರದವರ ನಡುವೆ ನಡೆಯುವ ವಿವಾಹಗಳನ್ನು ನಿಷೇಧಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಜಂಬೂ ಸವಾರಿ ಭದ್ರತೆಗೆ ವಿಶೇಷ ಆದ್ಯತೆ- 5000 ಪೊಲೀಸರ ನಿಯೋಜನೆ
ಇದೇ ವೇಳೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಆಗಿರುವ ಬೆಳೆ ಹಾನಿ ಕುರಿತಂತೆ ಸಮೀಕ್ಷೆ ನಡೆಸಿ ನಷ್ಟ ಶೀಘ್ರವೇ ಪರಿಹಾರ ನೀಡಬೇಕು. ಅಲ್ಲದೇ ಜಲಾವೃತದಿಂದ ತೊಂದರೆಯಾಗುತ್ತಿರುವ ಪ್ರದೇಶಗಳಲ್ಲಿನ ನೀರನ್ನು ಹೊರಕ್ಕೆ ಬಿಡಲು ತಕ್ಷಣವೇ ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ- ಅಂಬಾರಿ ಹೊರಲು ಕ್ಯಾಪ್ಟನ್ ಅಭಿಮನ್ಯು ರೆಡಿ
ಮಾದಕ ವಸ್ತುಗಳಿಂದ ಯುವಕರನ್ನು ದೂರಮಾಡಲು ಪ್ರತಿ ಗ್ರಾಮಗಳಲ್ಲಿ ಕಾಂಡೇಲಾ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಡ್ರಗ್ಸ್ ಹಾವಳಿ ಕುರಿತು ದಾಖಲೆ ಸಿದ್ಧಪಡಿಸಿ ಮುಖ್ಯಮಂತ್ರಿ ಹಾಗೂ ಕೇಂದ್ರಕ್ಕೆ ಕಳುಹಿಸಲಾಗುವುದು. ಖಾಪ್ ಮಹಾಪಂಚಾಯತ್ ಈ ಮತ್ತು ಇತರ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಯನ್ನು ಭೇಟಿಯಾಗಲು ಪ್ರಯತ್ನಿಸುತ್ತದೆ ಎಂದು ತಿಳಿಸಿದ್ದಾರೆ.