ಗಾಂಧೀನಗರ: ನವರಾತ್ರಿಯ (Navratri) ಧಾರ್ಮಿಕ ಕಾರ್ಯಕ್ರಮದ ವೇಳೆ ಕಲ್ಲು ತೂರಾಟ (Stone pelting) ನಡೆಸಿರುವ ಆರೋಪದ ಮೇಲೆ ಬಂಧಿತರಾಗಿದ್ದ ಕೆಲವು ಮುಸ್ಲಿಂ ಯುವಕರನ್ನು ಪೊಲೀಸರು ಕಂಬಕ್ಕೆ ಕಟ್ಟಿ ಹಾಕಿ, ಸಾರ್ವಜನಿಕವಾಗಿ ಲಾಠಿಯಿಂದ ಥಳಿಸಿರುವ ಘಟನೆ ಗುಜರಾತ್‌ನ (Gujarat) ಖೇಡಾ ಜಿಲ್ಲೆಯಲ್ಲಿ ನಡೆದಿದೆ.
ವರದಿಗಳ ಪ್ರಕಾರ ನಿನ್ನೆ ರಾತ್ರಿ ನಗರದ ದೇವಸ್ಥಾನದ ಆವರಣದಲ್ಲಿ ನಡೆದ ಗರ್ಬಾ (Garba) ಕಾರ್ಯಕ್ರಮದಲ್ಲಿ ಸುಮಾರು 150 ಜನರ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಮುಸ್ಲಿಂ ಸಮುದಾಯದ ಸದಸ್ಯರು ದೇವಸ್ಥಾನಕ್ಕೆ ಅಡ್ಡಲಾಗಿರುವ ಮಸೀದಿಯ ಬಳಿ ಗರ್ಬಾ ಕಾರ್ಯಕ್ರಮ ಆಯೋಜಿಸುವುದನ್ನು ವಿರೋಧಿಸಿದ್ದಾರೆ ಎನ್ನಲಾಗಿದೆ.
ಕಲ್ಲು ತೂರಾಟ ನಡೆಸಿರುವ ಬಗ್ಗೆ ಎಫ್‌ಐಆರ್ ದಾಖಲಿಸಿದ ಮಟರ್ ಪೊಲೀಸ್ ಠಾಣೆಯ (Matar police station) ಪೊಲೀಸರು 13 ಜನರನ್ನು ಬಂಧಿಸಿದ್ದಾರೆ. ಬಳಿಕ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸುವಂತೆ ಪೊಲೀಸರು ಕೇಳಿದ್ದಾರೆ. ಈ ವೇಳೆ ಪ್ರದೇಶದ ಉಸ್ತುವಾರಿ ಪೊಲೀಸ್ ಇನ್‌ಸ್ಪೆಕ್ಟರ್ ಕೂಡಾ ಅಲ್ಲಿ ನೆರೆದಿದ್ದರು ಇದನ್ನೂ ಓದಿ: ದೇವಸ್ಥಾನದೊಳಗೆ ಐಟಮ್ ಸಾಂಗ್‍ಗೆ ಡ್ಯಾನ್ಸ್ – ಯುವತಿ ವಿರುದ್ಧ FIR
VIDEO: પથ્થરમારાના આરોપીઓને થાંભલા સાથે જકડી ખેડા પોલીસે જાહેરમાં દંડા ફટકાર્યા, ગ્રામજનોએ તાળીઓ પાડી#police #vtvgujarati pic.twitter.com/hTCm2Ld5sZ
— VTV Gujarati News and Beyond (@VtvGujarati) October 4, 2022
ಪೊಲೀಸರು ಯುವಕರನ್ನು ಕಂಬಕ್ಕೆ ಕಟ್ಟಿ ಹಾಕಿ ಲಾಠಿಯಿಂದ ಥಳಿಸಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿ ನೆರೆದವರು ಪೊಲೀಸರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನು ಕೆಲವರು ಪೊಲೀಸರ ವರ್ತನೆಯನ್ನು ಟೀಕಿಸಿದ್ದಾರೆ. ಇದನ್ನೂ ಓದಿ: ನೈಜೀರಿಯಾದಿಂದ ತಂದ ಚೀತಾಗಳಿಂದ ದೇಶಾದ್ಯಂತ ಲಂಪಿ ವೈರಸ್ ಹರಡುತ್ತಿದೆ: ನಾಲಿಗೆ ಹರಿಬಿಟ್ಟ ಕೈ ನಾಯಕ ನಾನಾ ಪಾಟೋಲೆ