ನಟಿ ಸಾರಾ ಆಲಿ ಖಾನ್ (Sara Ali Khan) ಮತ್ತು ಜಾನ್ವಿ ಕಪೂರ್ (Janhavi Kapoor) ಬಿಟೌನ್‌ನ ಸಾಲು ಸಾಲು ಸಿನಿಮಾ ಮೂಲಕ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಕೇದರನಾಥಗೆ ಭೇಟಿ ಕೊಟ್ಟಾಗ ನಡೆದ ಆತಂಕಕಾರಿ ವಿಚಾರವೊಂದನ್ನ `ಕಾಫಿ ವಿತ್ ಕರಣ್’ (Coffe With Karan) ಕಾರ್ಯಕ್ರಮದಲ್ಲಿ ರಿವೀಲ್ ಮಾಡಿದ್ದಾರೆ.
ಬಾಲಿವುಡ್‌ನ ಸೆಲೆಬ್ರಿಟಿ ಕಿಡ್ಸ್‌ಗಳಾದ ಸಾರಾ ಮತ್ತು ಜಾನ್ವಿ ಕಪೂರ್ ಬಾಲ್ಯದಿಂದ ಸ್ನೇಹಿತರು. ಇಂದಿಗೂ ಅಷ್ಟೇ ಒಳ್ಳೆಯ ಬಾಂದವ್ಯವನ್ನಿಟ್ಟುಕೊಂಡು ಚಿತ್ರರಂಗದಲ್ಲಿ ಸಾರಾ ಮತ್ತು ಜಾನ್ವಿ ಕಮಾಲ್ ಮಾಡ್ತಿದ್ದಾರೆ. ಇತ್ತೀಚೆಗೆ ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಬಂದಿದ್ದ ಸಾರಾ, ಜಾನ್ವಿ ಅಚ್ಚರಿಯ ವಿಚಾರವೊಂದನ್ನ ರಿವೀಲ್ ಮಾಡಿದ್ದಾರೆ. ಕೇದರನಾಥ್‌ಗೆ ಹೋದಾಗ ಸಾವಿನ ಅಂಚಿಗೆ ತಲುಪಿದ್ದ ಅಚ್ಚರಿಯ ವಿಷ್ಯವನ್ನ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಜೊತೆ ಲಿಪ್‌ಲಾಕ್ ಕಾರಣಕ್ಕಾಗಿ ಟ್ರೋಲ್ ಆದ ಬಗ್ಗೆ ರಶ್ಮಿಕಾ ಮಾತು
ಕೇದರನಾಥ್‌ಗೆ ಭೇಟಿ ಕೊಟ್ಟ ವೇಳೆಯಲ್ಲಿ ಪಾದಾಯಾತ್ರೆ ಮಾಡಲು ನಾವು ನಿರ್ಧರಿಸಿದ್ದೆವು. ಈ ವೇಳೆ ಬಂಡೆಯ ಮೇಲೆ ನಾವು ಹತ್ತಿದ್ದೆವು. ಬಂಡೆಗಳನ್ನು ಹತ್ತುವಾಗ ಸಿಲುಕಿಕೊಂಡಿದ್ದೆವು. ಅಂದು ಸಾವಿನ ಅಂಚಿಗೆ ಬಂದ ಪರಿಚಯ ನಮಗೆ ಆಗಿತ್ತು. ನಂತರ ಸಾರಾ, ಚಾಲಕ ಇದನ್ನೇಲ್ಲ ಗಮನಿಸಿ ಇತರರ ಸಹಾಯದಿಂದ ರಕ್ಷಿಸಿದ ವಿಚಾರವನ್ನ ಸಾರಾ ಮತ್ತು ಜಾನ್ವಿ ಶೋನಲ್ಲಿ ರಿವೀಲ್ ಮಾಡಿದ್ದಾರೆ.
ಇನ್ನೂ ಸಾರಾ, ವಿಕ್ಕಿ ಕೌಶಲ್‌ಗೆ (Vicky Kaushal) ಜೋಡಿಯಾಗಿ ನಟಿಸುತ್ತಿದ್ದಾರೆ. ನಟ ರಾಜ್‌ಕುಮಾರ್ ರಾವ್ (Rajkumar Rao) ಅವರ ಹೊಸ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.